ETV Bharat / state

ಬರ್ತ್​ಡೇ ಪಾರ್ಟಿಯಲ್ಲಿ ಮೊಳಗಿದ ಗುಂಡಿನ ಸದ್ದು: ಆರ್​ಟಿಐ ಕಾರ್ಯಕರ್ತನ ಮಗನ ಹುಟ್ಟುಹಬ್ಬ ಆಚರಿಸಿದ 100ಕ್ಕೂ ಹೆಚ್ಚು ರೌಡಿಗಳು! - ಹುಬ್ಬಳ್ಳಿಯಲ್ಲಿ ಫೈರಿಂಗ್ ಸುದ್ದಿ

ಇನ್ಸ್​ಪೆಕ್ಟರ್ ರಮೇಶ್ ಗೋಕಾಕ್ ನೇತೃತ್ವದ ತಂಡ ಫಾರ್ಮ್​ಹೌಸ್ ಅನ್ನು ಪರಿಶೀಲಿಸಿತು. ಹೊಸೂರು, ಸೆಟಲ್‌ಮೆಂಟ್ ಏರಿಯಾ ಸೇರಿದಂತೆ ನಗರದ ವಿವಿಧ ಪ್ರದೇಶದ ರೌಡಿಗಳು ಒಂದೆಡೆ ಸೇರಿಸಿದ್ದರು. ಫಿಲೋಮಿನ್ ಬಳಿ ಇದ್ದ ಲೈಸನ್ಸ್ ಪಿಸ್ತೂಲ್​ ಅನ್ನು ವಶಕ್ಕೆ ಪಡೆದರು..

Firing at Birthday celebration in Hubli, Hubli crime news, Hubli firing news, RTI worker son birthday party in hubli, ಹುಬ್ಬಳ್ಳಿಯಲ್ಲಿ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಗುಂಡಿನ ದಾಳಿ, ಹುಬ್ಬಳ್ಳಿ ಅಪರಾಧ ಸುದ್ದಿ, ಹುಬ್ಬಳ್ಳಿಯಲ್ಲಿ ಫೈರಿಂಗ್ ಸುದ್ದಿ, ಹುಬ್ಬಳ್ಳಿಯಲ್ಲಿ ಆರ್‌ಟಿಐ ಕಾರ್ಯಕರ್ತ ಮಗನ ಹುಟ್ಟುಹಬ್ಬ,
ಜನ್ಮದಿನ ಆಚರಣೆ ಮಾಡಿಕೊಂಡ ಯುವಕ
author img

By

Published : Jun 6, 2022, 12:56 PM IST

ಹುಬ್ಬಳ್ಳಿ : ಹುಟ್ಟುಹಬ್ಬದ ಪಾರ್ಟಿಯೊಂದರಲ್ಲಿ ಗುಂಡಿನ ಸದ್ದು ಮೊಳಗಿದೆ. 100ಕ್ಕೂ ಹೆಚ್ಚು ರೌಡಿಗಳು ಒಂದೆಡೆ ಸೇರಿ ಆರ್​ಟಿಐ ಕಾರ್ಯಕರ್ತನೋರ್ವರ ಮಗನ ಜನ್ಮದಿನವನ್ನು ಭರ್ಜರಿ ಆಚರಿಸಿದಲ್ಲದೇ, ವೇದಿಕೆಯ ಮೇಲೆ ಆರು ಸುತ್ತು ಗುಂಡು ಹಾರಿಸಿ ದರ್ಪ ತೋರಿರುವ ಘಟನೆ ಹುಬ್ಬಳ್ಳಿಯ ಕುಸುಗಲ್ ರಸ್ತೆಯ ಕಲಬುರಗಿ ಫಾರ್ಮ್​ಹೌಸ್​ನಲ್ಲಿ ನಡೆದಿದೆ.

ನಿನ್ನೆ ಕೇಶ್ವಾಪುರದ ಆರ್​ಟಿಐ ಕಾರ್ಯಕರ್ತ ಫಿಲೋಮಿನಾ ಪೌಲ್ ಪುತ್ರ ಸುಂದರ ಪೌಲ್ ಬರ್ತ್‌ಡೇ ಪಾರ್ಟಿ ಕುಸುಗಲ್ ರಸ್ತೆಯ ಕಲಬುರಗಿ ಫಾರ್ಮ್​ಹೌಸ್​ನಲ್ಲಿ ನಡೆದಿದೆ. ಬರ್ತ್​ಡೇ ಪಾರ್ಟಿಯಲ್ಲಿ ಗುಂಡು-ತುಂಡು ಆಯೋಜಿಸಲಾಗಿತ್ತು. ಪಾರ್ಟಿಯಲ್ಲಿ ಗುಂಡಿನ ಸದ್ದು ಕೇಳಿ ಬಂದ ಹಿನ್ನೆಲೆ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು.

Firing at Birthday celebration in Hubli, Hubli crime news, Hubli firing news, RTI worker son birthday party in hubli, ಹುಬ್ಬಳ್ಳಿಯಲ್ಲಿ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಗುಂಡಿನ ದಾಳಿ, ಹುಬ್ಬಳ್ಳಿ ಅಪರಾಧ ಸುದ್ದಿ, ಹುಬ್ಬಳ್ಳಿಯಲ್ಲಿ ಫೈರಿಂಗ್ ಸುದ್ದಿ, ಹುಬ್ಬಳ್ಳಿಯಲ್ಲಿ ಆರ್‌ಟಿಐ ಕಾರ್ಯಕರ್ತ ಮಗನ ಹುಟ್ಟುಹಬ್ಬ,
ಜನ್ಮದಿನ ಆಚರಣೆ ಮಾಡಿಕೊಂಡ ಯುವಕ

ಓದಿ: ಪ್ರಾರ್ಥನೆ ವೇಳೆ ಗುಂಡು - ಬಾಂಬ್​ ದಾಳಿ.. ಚರ್ಚ್​ನಲ್ಲಿ ಪ್ರಾಣಬಿಟ್ಟ 50ಕ್ಕೂ ಹೆಚ್ಚು ಭಕ್ತಾದಿಗಳು!

ಇನ್ಸ್​ಪೆಕ್ಟರ್ ರಮೇಶ್ ಗೋಕಾಕ್ ನೇತೃತ್ವದ ತಂಡ ಫಾರ್ಮ್​ಹೌಸ್ ಅನ್ನು ಪರಿಶೀಲಿಸಿತು. ಹೊಸೂರು, ಸೆಟಲ್‌ಮೆಂಟ್ ಏರಿಯಾ ಸೇರಿದಂತೆ ನಗರದ ವಿವಿಧ ಪ್ರದೇಶದ ರೌಡಿಗಳು ಒಂದೆಡೆ ಸೇರಿಸಿದ್ದರು. ಫಿಲೋಮಿನ್ ಬಳಿ ಇದ್ದ ಲೈಸನ್ಸ್ ಪಿಸ್ತೂಲ್​ ಅನ್ನು ವಶಕ್ಕೆ ಪಡೆದರು.

ಹುಬ್ಬಳ್ಳಿಯಲ್ಲಿ ರೌಡಿಗಳ ಘರ್ಜನೆಗೆ ಜನರು ಬೆಚ್ಚಿ ಬಿದ್ದಿದ್ದಾರೆ. ಸುಂದರ ಪೌಲ್ ಉಪಟಳ ಇದೇ ಮೊದಲಲ್ಲ. ಈ ಹಿಂದೆ ಕಾಲೇಜ್‌ ಕ್ಯಾಂಪಸ್​ನಲ್ಲಿ ಪಿಸ್ತೂಲ್ ತೋರಿಸಿ ಸುದ್ದಿಯಾಗಿದ್ದ. ಕಾಲೇಜು ಕ್ಯಾಂಟೀನ್‌ನಲ್ಲಿ‌ ಪಿಸ್ತೂಲ್ ತೋರಿಸಿ ಸುದ್ದಿಯಾಗಿದ್ದ ಭೂಪ ಈಗ ಬರ್ತ್​ಡೇ ಪಾರ್ಟಿಯಲ್ಲಿ ಗುಂಡು ಹಾರಿಸಿ ಸುದ್ದಿಯಾಗಿದ್ದಾನೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.