ಹುಬ್ಬಳ್ಳಿ: ಮನೆಯ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನವೊಂದು ಸುಟ್ಟು ಕರಕಲಾಗಿರುವ ಘಟನೆ ಹುಬ್ಬಳ್ಳಿ ನೇಕಾರ ನಗರದಲ್ಲಿ ನಿನ್ನೆ ತಡರಾತ್ರಿ ನಡೆದಿದೆ.
ಸಾಗರ ಪವಾರ ಎಂಬುವವರಿಗೆ ಸೇರಿದ ದ್ವಿಚಕ್ರ ವಾಹನ (ಸ್ಕೂಟಿ)ವು ಸುಟ್ಟು ಕರಕಲಾಗಿದೆ. ಮನೆಯ ಮುಂದೆ ನಿಲ್ಲಿಸಿದ್ದ ವಾಹನ ಶಾರ್ಟ್ ಸರ್ಕ್ಯೂಟ್ ನಿಂದ ಸುಟ್ಟಿದೆಯೋ ಅಥವಾ ಯಾರಾದರೂ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೋ ಎಂಬುದು ಖಚಿತವಾಗಿಲ್ಲ. ಪೊಲೀಸ್ ತನಿಖೆಯ ನಂತರವೇ ಘಟನೆಗೆ ಕಾರಣ ತಿಳಿಯಲಿದೆ. ಕಸಬಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.