ಹುಬ್ಬಳ್ಳಿ: ಯುವತಿ ವಿಚಾರಕ್ಕೆ ಸಂಬಂಧಿಸಿದಂತೆ ಯುವಕರ ಗುಂಪುಗಳೆರಡು ಮಾರಕಾಸ್ತ್ರಗಳನ್ನು ಹಿಡಿದು ಹೊಡೆದಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.
ನಗರದ ದೇವಾಂಗಪೇಟೆ ಸ್ಮಶಾನದ ಬಳಿ ಸೆ.18 ರಂದು ಯುವತಿಯ ವಿಚಾರಕ್ಕೆ ಎರಡು ಗುಂಪಿನ ಯುವಕರ ನಡುವೆ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಎರಡು ಗುಂಪಿನ ಯುವಕರು ಹೊಡೆದಾಡಿಕೊಂಡಿದ್ದಾರೆ. ಯುವಕರ ಹೊಡೆದಾಟದಲ್ಲಿ ಇಬ್ಬರು ಯುವಕರಿಗೆ ಚಾಕು ಇರಿತ ನಡೆದಿದ್ದು, ಕಾರ್ತಿಕ್ ಹಾಗೂ ನಾಗರಾಜ್ನ ಕುತ್ತಿಗೆ ಮತ್ತು ಎದೆಗೆ ಪೆಟ್ಟಾಗಿದೆ.
ಘಟನೆಗೆ ಸಂಬಂಧಿಸಿದಂತೆ ಶುಭಂ, ವರುಣ್ ಹಾಗೂ ಸಂಪತ್ ಮೇಲೆ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗಾಯಾಳು ಕಾರ್ತಿಕ್, ನಾಗರಾಜ್, ಹಾಗೂ ಸಿದ್ದು ಎನ್ನುವವರ ಮೇಲೆ ಪ್ರತಿದೂರು ದಾಖಲಾಗಿದೆ. ಯುವಕರು ಹೊಡೆದಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕರ ನಡುವೆ ಹೊಡೆದಾಟ: ಇಬ್ಬರು ಕಿಮ್ಸ್ಗೆ ದಾಖಲು