ಹುಬ್ಬಳ್ಳಿ : ತನ್ನ ಮಗ ಬ್ಲ್ಯಾಕ್ ಫಂಗಸ್ಗೆ ಒಳಗಾಗಿದ್ದು, ಸಮರ್ಪಕವಾದ ಔಷಧಿ ಸಿಗುತ್ತಿಲ್ಲ. ದಯವಿಟ್ಟು ಮಗನಿಗೆ ಔಷಧಿ ಕೊಡಿಸಿ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರ ಮುಂದೆ ಬಂದು ವ್ಯಕ್ತಿಯೊಬ್ಬರು ಅಳಲು ತೋಡಿಕೊಂಡರು.
ಸಚಿವ ಸುಧಾಕರ್ ಕಿಮ್ಸ್ ಆಸ್ಪತ್ರೆಗೆ ಬರುವಾಗ ವಿಜಯನಗರ ಜಿಲ್ಲೆಯ ಹಡಗಲಿ ತಾಲೂಕಿನ ಮೈಲಾರ ಗ್ರಾಮದ ಜಗದೀಶ ಗೌಡ ಪಾಟೀಲ ಎಂಬವರು ತಮ್ಮ ಸಂಕಷ್ಟ ತೋಡಿಕೊಂಡು ಕಣ್ಣೀರು ಹಾಕಿದರು.
ಓದಿ : ಬಡ ಕಾರ್ಮಿಕ ವರ್ಗಕ್ಕೆ ಮತ್ತೆ ಲಾಕ್ಡೌನ್ ಬಿಸಿ.. ಬದುಕು ದುಸ್ತರ
ವ್ಯಕ್ತಿಯ ಅಮಸ್ಯೆ ಆಲಿಸಿದ ಸಚಿವರು, ಔಷಧಿ ಸಿಗುತ್ತೆ ಅಳಬೇಡಿ ಎಂದು ಸಮಾಧಾನ ಪಡಿಸಿದರು. ಅವರ ಮೊಬೈಲ್ ನಂಬರ್ ಹಾಗೂ ವಿಳಾಸ ಪಡೆದುಕೊಂಡು ಅಲ್ಲಿಂದ ತೆರಳಿದರು.