ಹುಬ್ಬಳ್ಳಿ: ರೈತನೋರ್ವ ಸಾಕಿ ಸಲುಹಿದ್ದ ಎತ್ತು ಅಸುನೀಗಿದಾಗ ಅದಕ್ಕೆ ಹಿಂದೂ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನೆರವೇರಿಸಿ ವಿಭಿನ್ನ ರೀತಿಯಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ. ಸುಮಾರು 27 ವರ್ಷಗಳ ಕಾಲ ರಾಮ ಎಂಬ ಹೆಸರಿನ ಎತ್ತು ರೈತ ಅಶೋಕ ಗಾಮನಗಟ್ಟಿ ಮನೆಯಲ್ಲಿ ಬೆಳೆದಿತ್ತು.
ವಯೋಸಹಜವಾಗಿ ಸಾವನ್ನಪ್ಪಿದ ಎತ್ತಿಗೆ ಸಂಪ್ರದಾಯಬದ್ಧವಾಗಿ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಹೂವಿನ ಅಲಂಕಾರ, ವಾದ್ಯ-ಮೇಳದೊಂದಿಗೆ ಊರಿನೊಳಗೆ ಮೆರವಣಿಗೆ ಮಾಡಿ ಅಂತಿಮ ನಮನ ಸಲ್ಲಿಸಿದ್ದಾರೆ.
ಮೊದಲು ಈ ಎತ್ತನ್ನು ಮನೆ ಮಗನಂತೆ ಸಾಕಿದ್ದರು. ಪ್ರತಿ ವರ್ಷವೂ ರಾಮ ಎತ್ತಿನ ಹುಟ್ಟುಹಬ್ಬ ಆಚರಿಸುತ್ತಿದ್ದರು. ಕೇಕ್ ಕತ್ತರಿಸಿ ನೆರೆಮನೆಯವರಿಗೆಲ್ಲ ಹಂಚಿ ಸಂಭ್ರಮಿಸುತ್ತಿದ್ದರು. ಆದರೆ ರಾಮ ಎತ್ತಿನ ಸಾವಿನಿಂದಾಗಿ ಕುಟುಂಬಸ್ಥರು ತೀವ್ರ ನೋವಿಗೊಳಗಾಗಿದ್ದು, ಎತ್ತಿನ ಜೊತೆ ಕಳೆದ ದಿನಗಳನ್ನು ನೆನೆಯುತ್ತಿದ್ದಾರೆ.
ರಾಮ ಎತ್ತಿನ ಅಂತ್ಯ ಸಂಸ್ಕಾರದ ವೇಳೆ ಇಡೀ ಗ್ರಾಮವೇ ನೆರೆದಿತ್ತು. ಸಾವನ್ನಪ್ಪಿದ ಎತ್ತಿಗೆ ನಮಸ್ಕರಿಸಿ ಮತ್ತೊಮ್ಮೆ ಹುಟ್ಟಿ ಬಾ ಎಂದು ಗ್ರಾಮಸ್ಥರು ಪ್ರಾರ್ಥಿಸಿದರು.
ಇದನ್ನೂ ಓದಿ: ಬೆಂಗಳೂರು ಗಲಭೆ ಪ್ರಕರಣ: ಅಮಾಯಕರ ಬಿಡುಗಡೆಗೆ ಸದಾನಂದ ಗೌಡರ ನೆರವು ಕೋರಿದ ಉಲೇಮಾ ನಿಯೋಗ