ಹುಬ್ಬಳ್ಳಿ: ರೈತರ ಹೆಸರಿನಲ್ಲಿ ಹೋರಾಟ ಮಾಡಬೇಕಾದ ಸಂಘಟನೆಗಳು ಇಂದು ರೈತರ ಹೆಸರಿಗೇ ಮಸಿ ಬಳಿಯುವ ಕೆಲಸ ಮಾಡ್ತಿವೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಲಕ್ಷ್ಮೀ ನಾರಾಯಣ ಗೌಡ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ಕೆಲ ಸ್ವಾರ್ಥಿಗಳಿಂದ ರೈತ ಸಂಘಟನೆ ಉದ್ದೇಶ ಈಡೇರುತ್ತಿಲ್ಲ. ಹೀಗಾಗಿ ಉತ್ತರ ಕರ್ನಾಟಕ ರೈತ ಸಂಘಟನೆಯನ್ನು ಕರ್ನಾಟಕ ರಾಜ್ಯ ರೈತ ಸಂಘದೊಂದಿಗೆ ವಿಲೀನ ಮಾಡಲಾಗಿದೆ. ರೈತರಲ್ಲಿ ಒಗ್ಗಟ್ಟು ಮೂಡಿಸಲು ಒಂದೇ ರೈತ ಸಂಘ ಮಾಡುವ ಉದ್ದೇಶದಿಂದ ಮೊದಲ ಹಂತವಾಗಿ ಈ ಕಾರ್ಯಕ್ಕೆ ಕೈ ಹಾಕಿದ್ದೇವೆ ಎಂದರು.
ದಿನಕ್ಕೊಂದು ರೈತ ಸಂಘ, ರೈತ ರಾಜ್ಯಾಧ್ಯಕ್ಷರು ಹುಟ್ಟಿಕೊಂಡು ಅನ್ನದಾತರಿಗೆ ದ್ರೋಹ ಮಾಡುತ್ತಿದ್ದಾರೆ. ರಾಜಕಾರಣಿಗಳೇ ರೈತ ಸಂಘಟನೆಗಳಲ್ಲಿನ ಒಗ್ಗಟ್ಟು ಹಾಳು ಮಾಡುತ್ತಿದ್ದಾರೆ ಎಂದು ಲಕ್ಷ್ಮೀನಾರಾಯಣ ಗೌಡ ಆರೋಪಿಸಿದರು.