ETV Bharat / state

ರೈತ ಹುತಾತ್ಮ ದಿನಾಚರಣೆಗೆ ಐವರಿಗೆ ಮಾತ್ರ ಅವಕಾಶ: ಕೋನರೆಡ್ಡಿ ಆಕ್ರೋಶ - ರೈತ ಹುತಾತ್ಮ ದಿನಾಚರಣೆಗೆ ಐವರಿಗೆ ಮಾತ್ರ ಅವಕಾಶ

ರೈತ ಹುತಾತ್ಮ ದಿನಾಚರಣೆ ಆಚರಿಸಲು ಕೇವಲ ಐದು ಜನರಿಗೆ ಮಾತ್ರ ಅವಕಾಶ ನೀಡಿದ್ದಕ್ಕೆ ಜಿಲ್ಲಾಡಳಿತ ಮತ್ತು ಸರ್ಕಾರದ ವಿರುದ್ಧ ಮಾಜಿ ಶಾಸಕ ಎನ್.ಎಚ್. ಕೋನರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

N.H. Konareddy
ನವಲಗುಂದ ಕ್ಷೇತ್ರದ ಮಾಜಿ ಶಾಸಕ ಎನ್.ಎಚ್. ಕೊನರೆಡ್ಡಿ
author img

By

Published : Jul 21, 2020, 5:31 PM IST

ಧಾರವಾಡ: ರೈತ ಹುತಾತ್ಮ ದಿನಾಚರಣೆಗೆ ಕೇವಲ ಐದು ಜನರಿಗೆ ಅವಕಾಶ ನೀಡಿದ್ದಕ್ಕೆ, ಜಿಲ್ಲಾಡಳಿತ ಮತ್ತು ಸರ್ಕಾರದ ವಿರುದ್ಧ ನವಲಗುಂದ ಕ್ಷೇತ್ರದ ಮಾಜಿ ಶಾಸಕ ಎನ್.ಎಚ್. ಕೋನರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಡಳಿತ ಮತ್ತು ಸರ್ಕಾರದ ವಿರುದ್ಧ ಮಾಜಿ ಶಾಸಕ ಎನ್.ಎಚ್. ಕೋನರೆಡ್ಡಿ ಆಕ್ರೋಶ

ಜಿಲ್ಲೆಯ‌ ನವಲಗುಂದದಲ್ಲಿ 40ನೇ ರೈತ ಹುತಾತ್ಮ ದಿನಾಚರಣೆ ಬಳಿಕ ‌ಮಾತನಾಡಿದ ಅವರು, ಕೋವಿಡ್ ನೆಪವೊಡ್ಡಿ ಐವರಿಗೆ ಮಾತ್ರ ಅವಕಾಶ ನೀಡಿದ್ದಾರೆ. ಆದ್ರೆ ಗದಗ ಜಿಲ್ಲೆಯ ನರಗುಂದದಲ್ಲಿ 10, 15, 25 ಜನರಿಗೆ ಅವಕಾಶ ನೀಡಿದ್ದಾರೆ.

ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳಿಗೂ ಒಂದೇ ಕಾನೂನು ಇರಬೇಕು. ಒಂದು‌ ಜಿಲ್ಲೆಗೊಂದು ಮತ್ತೊಂದು ಜಿಲ್ಲೆಗೊಂದು ಕಾನೂನು ಮಾಡುವುದು ಸರಿಯಲ್ಲ. ಕೋವಿಡ್ ನೆಪವೊಡ್ಡಿ ರೈತ ಹೋರಾಟ ಹತ್ತಿಕ್ಕುವ ಕೆಲಸ ಮಾಡಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.