ETV Bharat / state

ಮುಗಿಲತ್ತ ಮುಖ ಮಾಡಿ ನಿಂತಿರುವ ಬೆಳೆ: ಬೆಂಬಲ ಬೆಲೆ ನಿರೀಕ್ಷೆಯಲ್ಲಿ ಅನ್ನದಾತ - ಬೆಂಬಲ ಬೆಲೆ ನಿರೀಕ್ಷೆಯಲ್ಲಿ ಹುಬ್ಬಳ್ಳಿ ರೈತರು

ಕಳೆದ ವರ್ಷ ಬಾರಿ ಮಳೆಯಿಂದಾಗಿ ಬೆಳೆಗಳು ನಾಶವಾಗಿ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿತ್ತು. ಆಗ ಅಳಿದುಳಿದ ಬೆಳೆಗಳಿಂದ ಹೇಗೋ ಜೀವನ ನಡೆಸಿದ್ದರು. ‌ಆದ್ರೆ ‌ಈ ವರ್ಷ ಉತ್ತಮ ಮಳೆಯಾಗಿದ್ದು, ರೈತರಿಗೆ ಮುಂಗಾರು ಬೆಳೆಗಳು ಕೈ ಹಿಡಿಯುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿವೆ.

Hubli
ಮುಗಿಲತ್ತ ಮುಖ ಮಾಡಿ ನಿಂತಿರುವ ಫಸಲು: ಬೆಂಬಲ ಬೆಲೆ ನಿರೀಕ್ಷೆಯಲ್ಲಿ ಅನ್ನದಾನ..
author img

By

Published : Aug 5, 2020, 1:45 PM IST

ಹುಬ್ಬಳ್ಳಿ: ರೈತನಿಗೆ ಆಸರೆ ಅಂದ್ರೆ ಆತ ಬಿತ್ತಿದ ಬೆಳೆಗಳು. ಆ ಬೆಳೆಗಳು ಉತ್ತಮವಾಗಿ ಬೆಳೆಯಲಿ ಎಂದು ದಿನನಿತ್ಯ ಬೇಡಿಕೊಳ್ಳುತ್ತಾನೆ. ಅದೇ ರೀತಿ ಮಳೆರಾಯ ರೈತನ ಮೇಲೆ ಕೃಪೆ ತೋರಿದ್ದು, ಈಗ ಬೆಳೆದ ಬೆಳೆಗಳು ಹಸಿರಿನಿಂದ ಕಂಗೊಳಿಸುತ್ತಿವೆ.

ಮುಗಿಲತ್ತ ಮುಖ ಮಾಡಿ ನಿಂತಿರುವ ಬೆಳೆ: ಬೆಂಬಲ ಬೆಲೆ ನಿರೀಕ್ಷೆಯಲ್ಲಿ ಅನ್ನದಾತ

ಕಳೆದ ವರ್ಷ ಭಾರೀ ಮಳೆಯಿಂದಾಗಿ ಬೆಳೆಗಳು ನಾಶವಾಗಿ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿತ್ತು. ಆಗ ಅಳಿದುಳಿದ ಬೆಳೆಗಳಿಂದ ಹೇಗೋ ಜೀವನ ನಡೆಸಿದ್ದರು. ‌ಆದ್ರೆ ‌ಈ ವರ್ಷ ಉತ್ತಮ ಮಳೆಯಾಗಿದ್ದು, ರೈತರಿಗೆ ಮುಂಗಾರು ಬೆಳೆಗಳು ಕೈ ಹಿಡಿಯುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿವೆ. ರೈತ ಬಿತ್ತಿದ ಬೆಳೆಗಳು ಈಗ ಮುಗಿಲತ್ತ ಮುಖ ಮಾಡಿ ನಿಂತಿರುವುದನ್ನು ನೋಡಿ ರೈತರೆಲ್ಲರೂ ಖುಷಿಯ ಜೊತೆಗೆ ಉತ್ತಮ ಫಸಲು ಬಂದ್ರೆ ಹಿಂದೆ ಮಾಡಿದ ಸಾಲವನ್ನು ತೀರಿಸಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

ಮುಂಗಾರು ಸಂದರ್ಭದಲ್ಲಿ ಬಿತ್ತಿದ ಬೀಜಗಳು ಮಳೆರಾಯ ಸ್ವಲ್ಪ‌ಮಟ್ಟಿಗೆ ಕಣ್ಣಾಮುಚ್ಚಾಲೇ ಆಟ ಆಡಿದರೂ ನಂತರ ರೈತನ ಮೇಲೆ ಕೃಪೆ ತೋರಿದ್ದಾನೆ. ಪರಿಣಾಮ ಕಾಣದ ರೀತಿಯಲ್ಲಿ ಬೆಳೆ ಬೆಳೆದು ನಿಂತಿವೆ. ಹಸಿರಿನಿಂದ ಕೂಡಿದ ಬೆಳೆಗಳಿಗೆ ತಕ್ಕಂತೆ ಔಷಧ ಸಿಂಪಡಣೆ ಮಾಡಿ ಉತ್ತಮ ಫಸಲಿಗೆ ಕಾಯುತ್ತಿದ್ದಾರೆ. ಮುಂಗಾರು ಬೆಳೆಗಳಾದ ಹೆಸರು, ಅಲಸಂದಿ, ತೊಗರಿ, ಹತ್ತಿ, ಈರುಳ್ಳಿ, ಶೇಂಗಾ, ಹೀಗೆ ಅನೇಕ ಬೆಳೆಗಳು ಉತ್ತಮ ಫಸಲು ನೀಡುವ ನಿರೀಕ್ಷೆ ಮೂಡಿಸಿವೆ. ಅಲ್ಲದೇ ಸರ್ಕಾರ ಬೆಳೆಗಳಿಗೆ ತಕ್ಕ ಬೆಲೆ ನೀಡಿದ್ರೆ ಮಾತ್ರ ಲಾಭ ಗಳಿಸಬಹುದು ಎಂಬ ನಿರೀಕ್ಷೆಯಲ್ಲಿ ರೈತನಿದ್ದಾನೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.