ಹುಬ್ಬಳ್ಳಿ : ಸಾಲಬಾಧೆಯಿಂದ ಬೇಸತ್ತು ರೈತನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಗೋಳ ಪಟ್ಟಣದಲ್ಲಿ ನಡೆದಿದೆ.
ವಿರೂಪಾಕ್ಷಪ್ಪ ಕೊಪ್ಪದ ಎಂಬ ರೈತ 16 ಎಕರೆ ಜಮೀನು ಹೊಂದಿದ್ದು, ಖಾಸಗಿ ಬ್ಯಾಂಕ್ ಸೇರಿದಂತೆ ಬೇರೆ ಕಡೆಗಳಲ್ಲಿ 6 ಲಕ್ಷ ರೂಪಾಯಿ ಸಾಲ ಮಾಡಿದ್ದರು. ಸತತ ಮೂರು ವರ್ಷ ಬರಗಾಲದಿಂದ ಬೆಳೆಹಾನಿಯಾಗಿತ್ತು. ಈ ವರ್ಷವಾದ್ರೂ ಒಳ್ಳೆಯ ಫಸಲು ಬರಬಹುದೆಂದು ವಿರೂಪಾಕ್ಷಪ್ಪ ನಿರೀಕ್ಷಿಸಿದ್ದರು. ಆದರೆ ನಿರಂತರ ಮಳೆಯಿಂದ ಬೆಳೆದ ಬೆಳೆಯೆಲ್ಲ ಕೊಳೆತು ನಾಶವಾಗಿದ್ದರಿಂದ ತೀವ್ರವಾಗಿ ಮನನೊಂದು ತಮ್ಮ ಜಮೀನಿನಲ್ಲಿದ್ದ ಬನ್ನಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.