ಧಾರವಾಡ: ನವಲಗುಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ರೈತರು ರ‍್ಯಾಲಿಯುದ್ದಕ್ಕೂ ರಾಜ್ಯದ ರೈತರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕಳಸಾ ಬಂಡೂರಿ ನಾಲೆಯಿಂದ ಮಲಪ್ರಭಾ ನದಿಗೆ ತಕ್ಷಣ ನೀರು ಹರಿಸಲು ಗೆಜೆಟ್ ನೋಟಿಫಿಕೇಷನ್ ಹೊರಡಿಸಬೇಕು ಹಾಗೂ ಹೋರಾಟಗಾರರ ಮೇಲೆ ಪೊಲೀಸರು ಹಾಕಿರುವ ಕೇಸ್ಗಳನ್ನು ಸರ್ಕಾರ ಕೂಡಲೇ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಈ ಬೇಡಿಕೆಗಳನ್ನು ಆಗಸ್ಟ್ ರೊಳಗಾಗಿ ಈಡೇರಿಸದಿದ್ದರೆ ಅಗಸ್ಟ್ 3ರಂದು ನವಲಗುಂದ ಪಟ್ಟಣದ ಜೊತೆಗೆ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್ ಮಾಡಿ ಉಗ್ರ ಹೋರಾಟ ಮಾಡವುದಾಗಿ ಎಚ್ಚರಿಸಿದರು.