ETV Bharat / state

ಧಾರವಾಡ: 1 ಎಕರೆ ಜಮೀನಿನಲ್ಲಿ ಟೊಮೆಟೊ ಬೆಳೆದು ₹3 ಲಕ್ಷ ಆದಾಯ ಗಳಿಸಿದ ರೈತ - farmer growing tomatoes on one acre

ಧಾರವಾಡದ ಗೋವನಕೊಪ್ಪ ಗ್ರಾಮದ ರೈತ ಈರಪ್ಪ ಸಿದ್ದಪ್ಪ ಚಿಕ್ಕಣ್ಣವರ್ ಎಂಬವರು ತಮ್ಮ ಒಂದು ಎಕರೆ ಜಮೀನಿನಲ್ಲಿ ಟೊಮೆಟೊ ಬೆಳೆದು 3 ಲಕ್ಷ ರೂಪಾಯಿ ಆದಾಯ ಗಳಿಸಿದ್ದಾರೆ.

farmer-earned-3-lakhs-by-growing-tomatoes-on-one-acre
ಧಾರವಾಡ : ಒಂದೇ ಎಕರೆಯಲ್ಲಿ ಟೊಮೆಟೊ ಬೆಳೆದು ಮೂರು ಲಕ್ಷ ಆದಾಯ ಗಳಿಸಿದ ರೈತ
author img

By

Published : Jul 16, 2023, 9:51 AM IST

Updated : Jul 16, 2023, 10:07 AM IST

ಧಾರವಾಡ: 1 ಎಕರೆ ಜಮೀನಿನಲ್ಲಿ ಟೊಮೆಟೊ ಬೆಳೆದು ₹3 ಲಕ್ಷ ಆದಾಯ ಗಳಿಸಿದ ರೈತ

ಧಾರವಾಡ : ಟೊಮೆಟೊ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ರೈತರಿಗೆ ಕೈತುಂಬಾ ಆದಾಯ ಬರುತ್ತಿದೆ. ಧಾರವಾಡದಲ್ಲಿ ರೈತರೋರ್ವರು ಒಂದು ಎಕರೆ ಜಮೀನಿನಲ್ಲಿ ಟೊಮೆಟೊ ಬೆಳೆದು ಲಕ್ಷಾಂತರ ರೂಪಾಯಿ ಆದಾಯ ಸಂಪಾದಿಸಿದ್ದಾರೆ.

ರಾಜ್ಯದಲ್ಲಿ ಮುಂಗಾರು ಮಳೆ ಕೈ ಕೊಟ್ಟರೂ ಹಲವೆಡೆ ರೈತರು ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಹಾಗೆಯೇ ಧಾರವಾಡ ತಾಲೂಕಿನ ಗೋವನಕೊಪ್ಪ ಗ್ರಾಮದ ರೈತ ಈರಪ್ಪ ಸಿದ್ದಪ್ಪ ಚಿಕ್ಕಣ್ಣವರ್ ತಮ್ಮ ಒಂದೆಕರೆ ಜಮೀನಿನಲ್ಲಿ ಟೊಮೆಟೊ ಬೆಳೆದು ಲಕ್ಷಾಂತರ ರೂಪಾಯಿ ಆದಾಯ ಗಳಿಸಿದ್ದಾರೆ. ತಮ್ಮ ಹೊಲದಲ್ಲಿ ಬೋರ್‌ವೆಲ್ ಇಲ್ಲದಿದ್ದರೂ ಹಳ್ಳದ ನೀರನ್ನು ಸಸಿಗಳಿಗೆ ಹಾಯಿಸಿ ಉತ್ತಮ ಫಸಲು ಪಡೆದಿದ್ದಾರೆ. ಇದುವರೆಗೆ ಟೊಮೆಟೊದಿಂದ ಸುಮಾರು 3 ಲಕ್ಷ ರೂಪಾಯಿ ಬಂದಿರುವುದಾಗಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕೆಲವೇ ಕೆಲವು ರೈತರು ಮಾತ್ರ ಟೊಮೆಟೊ ಬೆಳೆ ಬೆಳೆದಿದ್ದಾರೆ. ಟೊಮೆಟೊಗೆ ಭಾರಿ ಬೆಲೆ ಬಂದಿದ್ದು, ಮಾರುಕಟ್ಟೆಯಲ್ಲಿ ಒಂದು ಟ್ರೇ ಟೊಮೆಟೊ 1,800 ರಿಂದ 2,000 ರೂಪಾಯಿಗೆ ಮಾರಾಟವಾಗುತ್ತಿದೆ. ಇವರು ಇದುವರೆಗೂ 10 ರಿಂದ 15 ಬಾರಿ ಟೊಮೆಟೊ ಕಟಾವು ಮಾಡಿ ಮಾರುಕಟ್ಟೆಗೆ ಕಳುಹಿಸಿದ್ದಾರೆ. ಎರಡು ಮೂರು ಬಾರಿ ಕಟಾವು ಮಾಡಿದರೆ ಸುಮಾರು 20 ರಿಂದ 25 ಟ್ರೇ ಟೊಮೆಟೊ ಲಭಿಸುತ್ತದೆ. ಇದನ್ನು ಕಟಾವು ಮಾಡಿ ಹುಬ್ಬಳ್ಳಿ ಹಾಗೂ ಧಾರವಾಡ ಮಾರುಕಟ್ಟೆಗೆ ಕಳುಹಿಸುತ್ತಿದ್ದಾರೆ.

ಈರಪ್ಪ ಸಿದ್ದಪ್ಪ ಚಿಕ್ಕಣ್ಣವರ್​ ಮಾತನಾಡಿ, "ಒಂದು ಎಕರೆ ಜಮೀನಿನಲ್ಲಿ ಟೊಮೆಟೊ ಬೆಳೆದಿದ್ದೇವೆ. ಈ ಬಾರಿ ಮಳೆ ಇಲ್ಲದ ಕಾರಣ ಹಳ್ಳದ ನೀರು ಹಾಯಿಸಿದ್ದೆವು. ಉತ್ತಮ ಇಳುವರಿ ಬಂದಿದೆ. ಇದುವರೆಗೂ ಮಾರುಕಟ್ಟೆಗೆ 20 ರಿಂದ 30 ಟ್ರೇ ಟೊಮೆಟೊ ಕಳುಹಿಸಿದ್ದೇವೆ. ಒಟ್ಟು 3 ಲಕ್ಷ ರೂ ಲಾಭ ಬಂದಿದೆ" ಎಂದು ಹೇಳಿದರು.

ರೈತ ಕರೆಪ್ಪ ಮಾತನಾಡಿ, "ಒಂದು ಎಕರೆಯಲ್ಲಿ ಟೊಮೆಟೊ ಬೆಳೆದಿದ್ದೇವೆ. ಉತ್ತಮ ಫಸಲು ಬಂದಿದೆ. ಹಗಲು ರಾತ್ರಿ ಎನ್ನದೇ ಗಿಡಗಳಿಗೆ ನೀರು ಹಾಯಿಸಿದ್ದೇವೆ. ಹಳ್ಳದಿಂದ ನೀರು ಹಾಯಿಸಿ ಟೊಮೆಟೊ ಬೆಳೆದಿದ್ದೇವೆ. ಮಳೆ ಇಲ್ಲದಿದ್ದರೂ ಉತ್ತಮ ಫಸಲು ಬಂದಿದೆ. ಇದುವರೆಗೂ ಒಟ್ಟು ಮೂರು ಲಕ್ಷ ರೂ ಆದಾಯ ದೊರೆತಿದೆ" ಎಂದರು.

"ಟೊಮೆಟೊವನ್ನು ಹುಬ್ಬಳ್ಳಿ ಮತ್ತು ಧಾರವಾಡದ ಮಾರುಕಟ್ಟೆಗೆ ಕಳುಹಿಸುತ್ತೇವೆ. ಒಟ್ಟು ಮೂರು ದಿನಕ್ಕೊಮ್ಮೆ ಮಾರುಕಟ್ಟೆಗೆ ಹಾಕುತ್ತೇವೆ. ಕಳೆದ ವರ್ಷಕ್ಕಿಂತ ಉತ್ತಮ ಲಾಭ ಬಂದಿದೆ. ಕಳೆದ ವರ್ಷ ಕೇವಲ ಒಂದು ಎಕರೆ 50 ಸಾವಿರ ಆದಾಯ ಸಿಕ್ಕಿತ್ತು. ಈ ಬಾರಿ 3 ಲಕ್ಷ ರೂ ಆದಾಯ ಕೈಸೇರಿದೆ" ಎಂದು ಹೇಳಿದರು.

ಬೆಲೆ ಏರಿಕೆಯಿಂದ ಲಾಭ : ಟೊಮೆಟೊ ದುಬಾರಿಯಾದ ಸಂದರ್ಭದಲ್ಲಿ ಈರಪ್ಪ ಚಿಕ್ಕಣ್ಣವರ್ ಅವರಿಗೆ ಟೊಮೆಟೊ ಬೆಳೆ ಕೈ ಹಿಡಿದಿದೆ. ಕೇವಲ ಒಂದು ಎಕರೆಯಲ್ಲಿ ಸುಮಾರು 3 ಲಕ್ಷ ಆದಾಯ ಗಳಿಸಿರುವ ರೈತ ಇದೀಗ ಫುಲ್ ಖುಷ್ ಆಗಿದ್ದಾರೆ. ಅಲ್ಲದೇ ಹಲವು ವರ್ಷಗಳಿಂದ ಟೊಮೆಟೊ ಬೆಳೆ ಬೆಳೆಯುತ್ತಿದ್ದರೂ ಈ ರೀತಿಯ ಲಾಭ ಗಳಿಸಿರಲಿಲ್ಲ, ಆದರೆ ಈ ಬಾರಿ ಮಾತ್ರ ಮಳೆಯ ಅನಾನುಕೂಲದಿಂದ ಟೊಮೆಟೊಗೆ ಉತ್ತಮ ಬೆಲೆ ಸಿಕ್ಕಿದೆ.

ಇದನ್ನೂ ಓದಿ : Tomato price: 1 ಕೆಜಿ ಟೊಮೆಟೊಗೆ ₹250: ಕೇಂದ್ರ ಸರ್ಕಾರದಿಂದ ಈ ನಗರಗಳಲ್ಲಿ ₹90ಗೆ ಮಾರಾಟ

Last Updated : Jul 16, 2023, 10:07 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.