ಧಾರವಾಡ: ಇಲ್ಲಿನ ತಾಲೂಕು ಕಚೇರಿ ಸಮೀಪದಲ್ಲೇ ನಕಲಿ ನೋಟರಿ ಜಾಲ ಪತ್ತೆಯಾಗಿದೆ. ತಹಶೀಲ್ದಾರ್ ಕಚೇರಿ ಆವರಣದಲ್ಲಿನ ದಸ್ತು ಬರಹಗಾರ ಅಂಗಡಿಯಲ್ಲಿ ನಕಲಿ ನೋಟರಿ ಜಾಲ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿತ್ತು.
ವಿಷಯ ತಿಳಿದು ಧಾರವಾಡ ವಕೀಲರ ಸಂಘ ದಾಳಿ ನಡೆಸಿ, ದಾಖಲೆಗಳನ್ನು ವಶಕ್ಕೆ ಪಡೆದುಕೊಂಡರು. ಇಲ್ಲಿ ಸರ್ಕಾರದ ವಿವಿಧ ಯೋಜನೆಗಳಿಗೆ ನಕಲಿ ನೋಟರಿ ಮೂಲಕವೇ ದೃಢೀಕರಣ ಮಾಡಿಕೊಡಲಾಗುತ್ತಿತ್ತು. ಸ್ಥಳದಲ್ಲಿ ನಕಲಿ ದೃಢೀಕರಣ ಮಾಡಿದ್ದ ಅರ್ಜಿ ದಾಖಲೆಗಳು ದೊರೆತಿವೆ.
ದಸ್ತು ಬರಹಗಾರರಿಂದಲೇ ನೋಟರಿ ಸಹಿ ನಡೆದಿತ್ತು ಎಂಬ ಮಾಹಿತಿಯೂ ಲಭ್ಯವಾಗಿವೆ. ನಕಲಿ ನೋಟರಿ ಸೀಲ್‌ಗಳು ಇಲ್ಲಿ ಸಿಕ್ಕಿವೆ. ಆರೋಪಿಗಳು ಅಧಿಕೃತ ವಕೀಲರ ನಕಲಿ ಸೀಲ್, ಸಹಿ ಬಳಸಿ ವಂಚಿಸುತ್ತಿದ್ದರು. ಈ ಕುರಿತು ಪೊಲೀಸರಿಗೆ ದೂರು ನೀಡುವಂತೆ ತಹಶೀಲ್ದಾರ್ಗೆ ಧಾರವಾಡ ವಕೀಲರ ಸಂಘ ಮನವಿ ಮಾಡಿದೆ. ವಕೀಲರ ಸಂಘದಿಂದಲೂ ಕಾನೂನು ಹೋರಾಟ ಮಾಡಲು ನಿರ್ಧರಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಕಾರು ಕಳ್ಳತನ ಜಾಲ ಪತ್ತೆ: ಇಬ್ಬರು ಆರೋಪಿಗಳ ಬಂಧನ