ETV Bharat / state

ರೈತ ವಿರೋಧಿ ಭೂ ಸುಧಾರಣಾ ಕಾಯ್ದೆ ಕೈ ಬಿಡುವಂತೆ ಕೋನರೆಡ್ಡಿ ಒತ್ತಾಯ - ನವಲಗುಂದ ಮಾಜಿ ಶಾಸಕ ಎನ್‌.ಹೆಚ್. ಕೋನರೆಡ್ಡಿ

ಜನ ವಿರೋಧಿ ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಲು ಹೊರಟಿರುವುದು ಪ್ರಜಾಪ್ರಭುತ್ವದ ಕೆಗ್ಗೊಲೆಯಾಗಿದೆ ಎಂದು ನವಲಗುಂದ ಮಾಜಿ ಶಾಸಕ ಎನ್‌.ಹೆಚ್.ಕೋನರೆಡ್ಡಿ ಆರೋಪಿಸಿದರು.

Protest
Protest
author img

By

Published : Sep 26, 2020, 11:57 AM IST

ನವಲಗುಂದ: ರೈತ ವಿರೋಧಿ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ಪಹಣಿ ಪತ್ರ ಹಾಗೂ ಬೆಳೆ ಸಮೀಕ್ಷೆ ಲೋಪದೋಷಗಳಿಗೆ ಆಡಳಿತ ಸರ್ಕಾರವೇ ನೇರ ಹೊಣೆ ಎಂದು ನವಲಗುಂದ ಮಾಜಿ ಶಾಸಕ ಎನ್‌.ಹೆಚ್.ಕೋನರೆಡ್ಡಿ ಆರೋಪಿಸಿದರು.

ನವಲಗುಂದ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟಿಸಿ ನಂತರ ತಹಶೀಲ್ದಾರ್ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಜನ ವಿರೋಧಿ ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಲು ಹೊರಟಿರುವುದು ಪ್ರಜಾಪ್ರಭುತ್ವದ ಕೆಗ್ಗೊಲೆಯಾಗಿದೆ. ಹಾದಾಯಿ, ಕಳಸಾ-ಬಂಡೂರಿ ಕೆಲಸ ಏಕೆ ಪ್ರಾರಂಭಿಸಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇದೇ 28ರ ಕರ್ನಾಟಕ ಬಂದ್​​ಗೆ ನವಲಗುಂದ-ಅಣ್ಣಿಗೇರಿ ತಾಲೂಕುಗಳ ರೈತಾಪಿ ವರ್ಗ, ವ್ಯಾಪಾರಸ್ಥರು, ವರ್ತಕರ ಸಂಘ ಬೆಂಬಲ ನೀಡುವಂತೆ ಮನವಿ ಮಾಡಿದರು.

ಈ ವೇಳೆ ಸೈಪುದ್ದೀನ್ ಅವರಾದಿ, ದೇವೇಂದ್ರಪ್ಪ ಹಳ್ಳದ, ಮಲ್ಲಪ್ಪ ಕುರಟ್ಟಿ, ಜೀವನ ಪವಾರ, ಪ್ರಕಾಶ ಶಿಗ್ಲಿ, ಹನಮಂತ ವಾಲಿಕಾರ, ಸುರೇಶ ಮೇಟಿ, ನಂದಿನಿ ಹಾದಿಮನಿ, ಸುನಂದಾ ಬಡ್ಡಿವಡ್ಡರ, ಮುದ್ದಪ್ಪ ನಡುವಿನಮನಿ, ಫಾತಿಮಾ ಹಳ್ಳೂರ ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.