ಹುಬ್ಬಳ್ಳಿ: ಇತ್ತೀಚಿನ ದಿನಗಳಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ನೆಪದಲ್ಲಿ ಹಲವಾರು ಮರಗಳನ್ನು ಕಡಿದು ಹಾಕಿದ್ದು. ಇದರಿಂದಾಗಿ ಸದ್ಯ ಆಮ್ಲಜನಕ ಕೊರತೆಯಾಗುತ್ತಿರುವುದನ್ನು ತಪ್ಪಿಸಲು ಪರಿಸರ ದಿನಾಚರಣೆ ನಿಮಿತ್ತ ನವನಗರದ ನಿವಾಸಿ ವಿಜಯ್ ಕುಮಾರ್ ಅಪ್ಪಾಜೀ ಅವರ ನೇತೃತ್ವದಲ್ಲಿ ಪ್ರತಿ ಸಂಡೆ ಸಸಿ ನೆಡುವ ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದಾರೆ.
ಸದ್ಯ ನೂರಕ್ಕೂ ಹೆಚ್ಚು ಗಿಡ ನೆಟ್ಟು, ಅದರ ಪಾಲನೆ ಜವಾಬ್ದಾರಿಯನ್ನು ಹೊತ್ತು, ಎಲ್ಲರೂ ಸಹ ತಮ್ಮ ತಮ್ಮ ಮನೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗಿಡಗಳನ್ನು ನೆಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ನವನಗರದ ನಿವಾಸಿಗಳು ಹಾಗೂ ಗುರು ಹಿರಿಯರು ಇವರಿಗೆ ಸಾಥ್ ನೀಡಿದರು.