ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಂತಹ ನಗರಗಳಲ್ಲಿ ಒಳಚರಂಡಿಗಳ ನಿರ್ವಹಣೆಯೇ ದೊಡ್ಡ ಸವಾಲಿನ ಕೆಲಸ. ಇದಕ್ಕಾಗಿ ಮಹಾನಗರ ಪಾಲಿಕೆ ಹೆಚ್ಚಿನ ಮುತುವರ್ಜಿ ವಹಿಸುತ್ತಿದೆ. ಕೊಳಚೆ ನೀರು ರಸ್ತೆ ಮೇಲೆ ಹರಿಯುವುದನ್ನು ತಪ್ಪಿಸಲು ಸೆಪ್ಟಿಕ್ ಟ್ಯಾಂಕರ್ಗಳ ಬಳಕೆ ಅನಿವಾರ್ಯವಾಗಿದೆ.
ಈ ನಿಟ್ಟಿನಲ್ಲಿ ಅವಳಿನಗರದಲ್ಲಿ ಸುಮಾರು 20ಕ್ಕೂ ಹೆಚ್ಚು ಸೆಪ್ಟಿಕ್ ಟ್ಯಾಂಕರ್ಗಳು ಕಾರ್ಯನಿರ್ವಹಿಸುತ್ತಿದ್ದು, ಅಪಾರ್ಟ್ಮೆಂಟ್ಗಳ ಕೊಳಚೆ ನೀರನ್ನು ಸಂಗ್ರಹಿಸಿ ಅತ್ಯಾಧುನಿಕ ಪದ್ಧತಿಯಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಹೊಸದಾಗಿ 20 ಮನೆಗಳಿರುವ ಅಪಾರ್ಟ್ಮೆಂಟ್ ಹಾಗೂ 10 ಎಕರೆಗೂ ಹೆಚ್ಚು ಲೇಔಟ್ಗಳಿಗೂ ಈ ಟ್ಯಾಂಕ್ಗಳನ್ನು ಕೂಡಿಸುವುದನ್ನು ಪಾಲಿಕೆ ಕಡ್ಡಾಯ ಮಾಡಿದೆ.
ಸ್ವಚ್ಛ ಭಾರತ ಹಾಗೂ ಅಮೃತ ಯೋಜನೆ ಅಡಿಯಲ್ಲಿ ಹೊಸದಾಗಿ ಯುಜಿಡಿ ಕಾಮಗಾರಿ ನಡೆಸಲಾಗುತ್ತಿದೆ. ಮನೆಯಲ್ಲಿ ಬಳಕೆಯಾದ ಶೇ 80ರಷ್ಟು ಕೊಳಚೆ ನೀರು ಒಳಚರಂಡಿ ಮೂಲಕ ಹರಿದು ಹೋಗುವ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಸೆಪ್ಟಿಕ್ ಟ್ಯಾಂಕರ್ಗಳ ಕೆಲಸ ಕೊಂಚ ಕಡಿಮೆಯಾಗಿದೆ. ಆದರೂ ನಗರದ ಕೆಲವು ಅಪಾರ್ಟ್ಮೆಂಟ್ಗಳಲ್ಲಿ ಕೊಳಚೆ ನೀರು ತುಂಬಿಕೊಂಡು ರಸ್ತೆ ಮೇಲೆ ಹರಿಯುತ್ತದೆ.
ಓದಿ: 'ಕೈ' ಬಿಟ್ಟು ತೆನೆ ಹೊರುತ್ತಾರಾ ಸಿ. ಎಂ. ಇಬ್ರಾಹಿಂ!?: ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣು?
ಹೀಗಾಗಿ ಖಾಸಗಿಯವರ ಸಹಭಾಗಿತ್ವದಲ್ಲಿ ಮಹಾನಗರ ಪಾಲಿಕೆ ಸೆಪ್ಟಿಕ್ ಟ್ಯಾಂಕ್ ಕ್ಲೀನರ್‌ಗಳು ಕೊಳಚೆ ನೀರನ್ನು ಸರಿಯಾಗಿ ಸಂಸ್ಕರಿಸಿದ ನಂತರ ವಿಲೇವಾರಿ ಮಾಡುತ್ತಿದ್ದು, ಮಹಾನಗರ ಪಾಲಿಕೆ ನಗರವನ್ನು ಕೊಳಚೆ ಮುಕ್ತ ಮಾಡುವ ಗುರಿ ಹೊಂದಿದೆ.