ETV Bharat / state

ಶಿಕ್ಷಣ ಕಾಶಿಗೆ ಮತ್ತೊಂದು ಗರಿ: ಧಾರವಾಡದಲ್ಲಿ ಸ್ಥಾಪನೆಯಾಗಲಿದೆ ವಿಧಿವಿಜ್ಞಾನ ಯುನಿವರ್ಸಿಟಿ

ಧಾರವಾಡದಲ್ಲಿ ಸ್ಥಾಪನೆಯಾಗಲಿದೆ ವಿಧಿವಿಜ್ಞಾನ ವಿಶ್ವವಿದ್ಯಾಲಯ - ಶಿಕ್ಷಣಕಾಶಿಯಲ್ಲಿ ದೇಶದ ಎಂಟನೇ ಫಾರೆನ್ಸಿಕ್ ಯುನಿವರ್ಸಿಟಿ - ಜನವರಿ 28ರಂದು ಅಮಿತ್​ ಶಾ ಅವರಿಂದ ಅಡಿಗಲ್ಲು.

Forensic Science University
ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ
author img

By

Published : Jan 24, 2023, 5:39 PM IST

ಜನವರಿ 28ರಂದು ಅಮಿತ್​ ಶಾ ಅವರಿಂದ ವಿಧಿವಿಜ್ಞಾನ ಯುನಿವರ್ಸಿಟಿಗೆ ಅಡಿಗಲ್ಲು - ಜೋಶಿ

ಧಾರವಾಡ: ಶಿಕ್ಷಣ ಕಾಶಿ ಎಂದು ಹೆಸರುವಾಸಿಯಾದ ಧಾರವಾಡಕ್ಕೆ ಮತ್ತೊಂದು ಹೆಮ್ಮೆಯ ಗರಿ ಮೂಡಲಿದೆ. ಈಗಾಗಲೇ ಮೂರು ವಿಶ್ವವಿದ್ಯಾಲಯ ಹೊಂದಿರುವ ಇನ್ನೊಂದು ವಿವಿ ಸ್ಥಾಪನೆಯಾಗಲಿದೆ. ಕರ್ನಾಟಕ ವಿಶ್ವವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯ, ಕಾನೂನು ಮಹಾವಿದ್ಯಾಲಯ ಹೊಂದಿರುವ ಧಾರವಾಡಕ್ಕೆ ಇದೀಗ ವಿಧಿವಿಜ್ಞಾನ ವಿಶ್ವವಿದ್ಯಾಲಯ ಕ್ಯಾಂಪಸ್ ಕೂಡ ಬಂದಿದೆ. ಈಗಾಗಲೇ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಸ್ಥಳ ಪರಿಶೀಲನೆ ಕೂಡ ನಡೆಸಿದ್ದಾರೆ.

ಐಐಟಿ, ಐಐಐಟಿಯನ್ನು ಸಹ ಹೊಂದಿರುವ ವಿದ್ಯಾಕಾಶಿ ವಿಧಿವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಇದೇ ತಿಂಗಳು 28 ರಂದು ಶಂಕುಸ್ಥಾಪನೆ ನೇರ ವೇರಿಸಲಿದ್ದಾರೆ. ಗುಜರಾತಿನಲ್ಲಿ ಫಾರೆನ್ಸಿಕ್ ಯುನಿವರ್ಸಿಟಿ ಇದ್ದು, ದಕ್ಷಿಣ ಭಾರತದ ಮೊದಲ ಫಾರೆನ್ಸಿಕ್ ಕ್ಯಾಂಪಸ್ ಇದಾಗಿರಲಿದೆ.

ಧಾರವಾಡದಲ್ಲಿ ಗುಜರಾತ್ ಮಾದರಿಯ ಫಾರೆನ್ಸಿಕ್ ಕ್ಯಾಂಪಸ್ ನಿರ್ಮಾಣಕ್ಕೆ ಸ್ಥಳ ಅಂತಿಮಗೊಂಡಿದೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಅಥವಾ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಈ ಫಾರೆನ್ಸಿಕ್ ಕ್ಯಾಂಪಸ್ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದೆ. ಕರ್ನಾಟಕ ಕೃಷಿ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವ ಸೈದಾಪುರ ಗ್ರಾಮದ ಒಟ್ಟು 50 ಎಕರೆ 39 ಗುಂಟೆ ಜಾಗದಲ್ಲಿ ಫಾರೆನ್ಸಿಕ್ ಕ್ಯಾಂಪಸ್ ನಿರ್ಮಾಣಕ್ಕೆ ಜಾಗ ಗುರುತಿಸಿ ಅದೇ ಜಾಗವನ್ನು ಇದೀಗ ಫೈನಲ್ ಮಾಡಲಾಗಿದೆ.

ಇದಕ್ಕೆ ಜನವರಿ 28 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಡಿಗಲ್ಲು ನೆರವೇರಿಸಲಿದ್ದಾರೆ. ಕೃಷಿ ವಿಶ್ವವಿದ್ಯಾಲಯಕ್ಕೆ ಒಳಪಡುವ ಸೈದಾಪುರ ಗ್ರಾಮದ ಜಮೀನು ವಿಧಿ ವಿಜ್ಞಾನ ಪ್ರಯೋಗಾಲಯ ಕ್ಯಾಂಪಸ್ ನಿರ್ಮಾಣಕ್ಕೆ ಯೋಗ್ಯವಾಗಿದ್ದು, ಇದೇ ಜಾಗವನ್ನು ಅಂತಿಮಗೊಳಿಸಲಾಗಿದೆ ಎಂದು ಧಾರವಾಡ ಜಿಲ್ಲಾಧಿಕಾರಿಗಳು ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಸ್ಥಳ ಪರಿಶೀಲನೆ ಮಾಡಿದ ಜೋಶಿ: ಫಾರೆನ್ಸಿಕ್ ಕ್ಯಾಂಪಸ್ ನಿರ್ಮಾಣಕ್ಕೆ ಜಾಗವನ್ನು ಅಂತಿಮಗೊಳಿಸಿ ಧಾರವಾಡ ಜಿಲ್ಲಾಧಿಕಾರಿ ಸೂಚಿಸಿದ್ದ ಜಾಗವನ್ನು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ವೀಕ್ಷಿಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗುಜರಾತ್ ಮಾದರಿಯ ಫಾರೆನ್ಸಿಕ್ ವಿಶ್ವವಿದ್ಯಾಲಯವನ್ನು ತೆರೆಯಲಾಗುತ್ತದೆ. 28 ರಂದು ಗೃಹ ಸಚಿವ ಅಮಿತ್​ ಶಾ ಅವರು ರಾಜ್ಯ ಪ್ರವಾಸ ಮಾಡಲಿದ್ದಾರೆ ಅಂದು ಅವರ ಕೈಯಿಂದ ಅಡಿಗಲ್ಲು ಹಾಕಿಸು ಚಿಂತನೆ ಇದೆ ಎಂದು ತಿಳಿಸಿದರು.

ದೇಶದಲ್ಲಿ ಇದು ಎಂಟನೇ ಕ್ಯಾಂಪಸ್​ ಆಗಿರಲಿದೆ. ದಕ್ಷಿಣ ಭಾರತದಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯ ಕ್ಯಾಂಪಸ್ ನಿರ್ಮಾಣ ಮಾಡಲು ಚಿಂತಿಸಲಾಗಿತ್ತು. ಅದು ನಮ್ಮ ಅವಳಿ ನಗರದಲ್ಲಿ ನಿರ್ಮಾಣ ಮಾಡುವ ಬಗ್ಗೆ ಚರ್ಚೆಗಳು ನಡೆದವು ಅಂತಿಮವಾಗಿ ಧಾರವಾಡದಲ್ಲಿ ಜಾಗವನ್ನು ಗುರಿತಿಸಲಾಗಿದೆ. ಅಪರಾಧಿ ಜಗತ್ತು ಮತ್ತು ನಮ್ಮ ಡಿಎನ್​ಎ ಸಂಗ್ರಹಣೆ ಹಾಗೇ ಈ ಬಗ್ಗೆ ದತ್ತಾಂಶಗಳ ಒಟ್ಟುಗೂಡಿಸಿ ಇಡಲು ಕ್ಯಾಂಪಸ್​ ಸಹಕಾರಿಯಾಗಿರಲಿದೆ. ವಿಧಿ ವಿಜ್ಞಾನಕ್ಕೆ ಸಂಬಂಧಿಸಿದ ಡಾಟಗಳ ಬಗ್ಗೆ ಸಂಶೋಧನೆಯನ್ನು ಕೈಗೊಳ್ಳಲಾಗುತ್ತದೆ ಎಂದು ಕೇಂದ್ರ ಸಚಿವ ಜೋಶಿ ಹೇಳಿದರು.

ಮೋದಿ ಅವರು ಗುಜರಾತ್​ ಮುಖ್ಯಮಂತ್ರಿ ಆಗಿದ್ದಾಗ ರಾಜ್ಯ ಮಟ್ಟದ ವಿಶ್ವವಿದ್ಯಾಲಯವಾಗಿ ಅಲ್ಲಿ ಆರಂಭಿಸಿದ್ದರು. ನಂತರ ಅದು ಕೇಂದ್ರೀಯ ವಿಶ್ವವಿದ್ಯಾಲಯವಾಗಿ ಬದಲಾಯಿತು. ಈಗ ದೇಶದಲ್ಲಿ ಒಟ್ಟು ಏಳು ಕ್ಯಾಂಪಸ್​ಗಳಿದ್ದು, ಕರ್ನಾಟಕ್ಕದ್ದು ಎಂಟನೇಯದ್ದಾಗಿದೆ. ಇದು ದಕ್ಷಿಣ ಭಾರತದ ಮೊದಲ ವಿಶ್ವವಿದ್ಯಾಲಯವಾಗಲಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಹಣ ಕೊಟ್ಟು ಕರೆಂಟ್​​ ಬೇಕು ಎಂದಾಗ ಕೊಡದೇ ಈಗ ಪುಕ್ಕಟ್ಟೆ ಭರವಸೆ ಕೊಡುತ್ತಿದ್ದಾರೆ : ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.