ETV Bharat / state

ಹುಬ್ಬಳ್ಳಿ-ಧಾರವಾಡ ಅವಳಿನಗರದ ರಸ್ತೆಗಳು ಧೂಳುಮಯ; ವಾಹನ ಸವಾರರ ಪರದಾಟ

ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ರಸ್ತೆಗಳು ಧೂಳುಮಯವಾಗಿವೆ. ವಾಹನ ಸವಾರರು ಪರದಾಡುವ ಪರಿಸ್ಥಿತಿ ತಲೆದೋರಿದೆ.

ಅವಳಿನಗರ ರಸ್ತೆಗಳು ಧೂಳುಮಯ
ಅವಳಿನಗರ ರಸ್ತೆಗಳು ಧೂಳುಮಯ
author img

By ETV Bharat Karnataka Team

Published : Dec 27, 2023, 4:16 PM IST

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ರಸ್ತೆ ಕಾಮಗಾರಿ ವಿಳಂಬವಾಗಿ, ಇಲ್ಲಿಯ ರಸ್ತೆಗಳು ಧೂಳುಮಯವಾಗಿದ್ದು ವಾಹನ ಸವಾರರು ಪರದಾಡುತ್ತಿದ್ದಾರೆ. ಹುಬ್ಬಳ್ಳಿಯ ಬಹುತೇಕ ಕಡೆಯಲ್ಲಿ ರಸ್ತೆಗಳೆಲ್ಲವೂ ಧೂಳಿನಿಂದ ಕೂಡಿವೆ. ಜನರು ಅಸ್ತಮಾ ಹಾಗೂ ಇನ್ನಿತರ ಶ್ವಾಸಕೋಶದ ಸಮಸ್ಯೆಗಳಿಗೂ ತುತ್ತಾಗುತ್ತಿದ್ದಾರೆ.

"ಕೋವಿಡ್​ಗೆ ಹೆದರಿ ಮಾಸ್ಕ್ ಹಾಕುವ ಬದಲಿಗೆ ಧೂಳಿಗೆ ಹೆದರಿಕೊಂಡು ಮಾಸ್ಕ್ ಧರಿಸುವಂತಹ ಸ್ಥಿತಿ ಇದೆ. ಹೀಗಿದ್ದರೂ ಪಾಲಿಕೆಯಾಗಲಿ, ಜನಪ್ರತಿನಿಧಿಗಳಾಗಲಿ ಕಿಂಚಿತ್ತೂ ಕಾಳಜಿ ವಹಿಸುತ್ತಿಲ್ಲ. ಆದರೆ ಪಾಲಿಕೆ ಅಧಿಕಾರಿಗಳು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಧೂಳುಮುಕ್ತ ರಸ್ತೆ ಮಾಡಲು ಮಷೀನ್‌ಗಳನ್ನು ಖರೀದಿಸುತ್ತಿದ್ದೇವೆ ಎನ್ನುತ್ತಾರೆ" ಎಂದು ವಾಹನ ಸವಾರರು ಆಕ್ರೋಶ ಹೊರಹಾಕಿದರು.

ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಪ್ರತಿಕ್ರಿಯಿಸಿ, "ಧೂಳಿನಿಂದ ಮಾರಕ ಖಾಯಿಲೆಗಳು ಬರುವ ಸಂಭವವಿದೆ. ಇದಕ್ಕಾಗಿ ಮಹಾನಗರ ಪಾಲಿಕೆ ಎಚ್ಚರಿಕೆಯ ಕ್ರಮಗಳನ್ನು ಕೈಗೊಂಡಿದೆ. ಧೂಳು ಹಾಗೂ ವಾಯುಮಾಲಿನ್ಯ ಕಡಿಮೆ ಮಾಡಲು ಪಾಲಿಕೆ ಎನ್ ಕ್ಯಾಪ್ ಯೋಜನೆ ಅಡಿ ಎರಡು ಮಷೀನ್ ಖರೀದಿಸಲು ಜಿಲ್ಲಾಧಿಕಾರಿಗಳ ಸಭೆಯಲ್ಲಿ‌ ನಿರ್ಧಾರ ತೆಗೆದುಕೊಳ್ಳಲಾಗಿದೆ. ಒಂದು ಮಷೀನ್ ಬೆಲೆ 1 ಕೋಟಿ 40 ಲಕ್ಷ ರೂ ಇದ್ದು ಎರಡು ಮಷೀನ್ ಖರೀದಿಗಾಗಿ ಟೆಂಡರ್ ಕರೆಯಲಾಗಿದೆ. ಅದರೊಂದಿಗೆ 3 ವರ್ಷದ ನಿರ್ವಹಣಾ ವೆಚ್ಚವೂ ಸೇರಿದೆ" ಎಂದು ಮಾಹಿತಿ ನೀಡಿದರು.

"ಬಹುತೇಕ ಆಯಕಟ್ಟಿನ ಸ್ಥಳಗಳಲ್ಲಿಯೇ ಸಾಕಷ್ಟು ಧೂಳು ಹೊರಹೊಮ್ಮುತ್ತಿದೆ. ಅಲ್ಲದೇ ಸುಮಾರು ರಸ್ತೆ ಕಾಮಗಾರಿಗಳ ವಿಳಂಬದಿಂದಾಗಿ ಧೂಳಿನಲ್ಲಿಯೇ ಓಡಾಡುವಂತಾಗಿದೆ. ಹೀಗಿದ್ದರೂ ಪಾಲಿಕೆ ಮಷಿನ್ ನೆಪ ಹೇಳಿಕೊಂಡು ಕುಳಿತಿದ್ದು, ಆದಷ್ಟು ಬೇಗ ನಗರವನ್ನು ಧೂಳು ಮುಕ್ತ ಮಾಡುವುದರ ಜೊತೆಗೆ ಜನರ ಆರೋಗ್ಯದ ಕಡೆ ಗಮನ ಹರಿಸಬೇಕು" ಎಂಬುದು ಸಾರ್ವಜನಿಕರ ಒತ್ತಾಯ.

ರಸ್ತೆ ಸರಿಪಡಿಸಿದ ಲಾರಿ ಚಾಲಕರು: ಕಳೆದ 15 ವರ್ಷಗಳಿಂದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ರಾಮಪುರದಿಂದ ಗರಿಕೆಕಂಡಿ ಗ್ರಾಮದವರೆಗಿನ ರಸ್ತೆ ಹದಗೆಟ್ಟು ಹೋಗಿತ್ತು. ಇದನ್ನು ದುರಸ್ತಿ ಮಾಡಲು ಜನಪ್ರತಿನಿಧಿಗಳು, ಅಧಿಕಾರಿಗಳಿಗಾಗಿ ಲಾರಿ ಚಾಲಕರು ಕಾದು ಸುಸ್ತಾಗಿದ್ದರು. ಬಳಿಕ ತಾವೇ ಆ ರಸ್ತೆಯನ್ನು ಸರಿಪಡಿಸಿದ್ದರು. ಒಟ್ಟು 15 ಕಿ.ಮೀ ದೂರದ ರಸ್ತೆಯ ಡಾಂಬರು ಕಿತ್ತು ಹೋಗಿ, ಜಲ್ಲಿ ಕಲ್ಲುಗಳೆಲ್ಲವೂ ಮೇಲೆದ್ದು ಸಂಚರಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

ಇದನ್ನೂ ಓದಿ: ಸ್ಮಶಾನಕ್ಕಿಲ್ಲ ದಾರಿ: ರಸ್ತೆ ಬದಿಯಲ್ಲೇ ಅಂತ್ಯ ಸಂಸ್ಕಾರ ಮಾಡಿದ ಗ್ರಾಮಸ್ಥರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.