ಹುಬ್ಬಳ್ಳಿ : ಬಸ್ ಚಲಾಯಿಸುವಾಗ ಚಾಲಕನಿಗೆ ಮೂರ್ಛೆರೋಗ ಬಂದ ಪರಿಣಾಮ ಬಸ್ ನಿಯಂತ್ರಣ ಕಳೆದುಕೊಂಡು ಮುಂದಿದ್ದ ವಾಹನಕ್ಕೆ ಗುದ್ದಿದೆ. ಕೂಡಲೇ ಇದನ್ನು ಗಮನಿಸಿದ ಮತ್ತೋರ್ವ ಚಾಲಕ ಬಸ್ ತಡೆದು ಸಂಭಾವ್ಯ ಅನಾಹುತವನ್ನು ತಪ್ಪಿಸಿದ್ದಾರೆ.
ಧಾರವಾಡದಿಂದ ಹುಬ್ಬಳ್ಳಿಗೆ ಬರುತ್ತಿದ್ದ ವೇಳೆ ಉಣಕಲ್ ಬಳಿ ಬೇಂದ್ರೆ ಸಾರಿಗೆ ಬಸ್ ಚಾಲಕನಿಗೆ ಮೂರ್ಛೆರೋಗ ಬಂದಿದೆ. ಪರಿಣಾಮ ಬಸ್ ನಿಯಂತ್ರಣ ತಪ್ಪಿ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಆಗ ಅಲ್ಲೇ ಇದ್ದ ಮತ್ತೋರ್ವ ಚಾಲಕ ಬಸ್ ತಡೆದು ನಿಲ್ಲಿಸಿದ್ದಾನೆ. ಘಟನೆಯಲ್ಲಿ ಎರಡು ದ್ವಿಚಕ್ರ ವಾಹನಗಳು ಜಖಂಗೊಂಡಿವೆ.
ಇತ್ತ ಪಿಡ್ಸ್ ಬಂದು ಅಸ್ವತ್ಥಗೊಂಡಿದ್ದ ಚಾಲಕನನ್ನು ಸ್ಥಳೀಯರು ಆಸ್ಪತ್ರಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿಂದು 50,210 ಜನರಿಗೆ ಕೊರೊನಾ ಪಾಸಿಟಿವ್.. ಶೇ. 22.77ಕ್ಕೆ ಏರಿತು ಪಾಸಿಟಿವಿಟಿ ದರ
ಸೇತುವೆ ಮೇಲಿಂದ ಬಿದ್ದು ಆ್ಯಂಬುಲೆನ್ಸ್ ಹಾನಿ:
ಇನ್ನೊಂದು ಘಟನೆಯಲ್ಲಿ ಹುಬ್ಬಳ್ಳಿಯ ನವನಗರದ ಕ್ಯಾನ್ಸರ್ ಆಸ್ಪತ್ರೆಗೆ ಸೇರಿದ ಆ್ಯಂಬುಲೆನ್ಸ್ವೊಂದು ರೋಗಿಯನ್ನು ಬಿಟ್ಟು ಮರಳಿ ಆಸ್ಪತ್ರೆಗೆ ಹೋಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ವಿದ್ಯಾನಗರದ ಎಂಆರ್ ಸಾಕ್ರೆ ಶಾಲೆಯ ಮುಂಭಾಗದಲ್ಲಿರುವ ಬಿಆರ್ಟಿಎಸ್ ಸೇತುವೆ ಮೇಲಿಂದ ಬಿದ್ದು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ.
![ambulance damaged](https://etvbharatimages.akamaized.net/etvbharat/prod-images/14263238_thumbnjpg.jpg)
ಘಟನೆ ಬಳಿಕ ಚಾಲಕ ಆ್ಯಂಬುಲೆನ್ಸ್ ಬಿಟ್ಟು ಪರಾರಿಯಾಗಿದ್ದು, ಸ್ಥಳಕ್ಕೆ ಉತ್ತರ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಕೊಂಡು ತನಿಖೆ ನಡೆಸುತ್ತಿದ್ದಾರೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ