ಹುಬ್ಬಳ್ಳಿ: ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್) ಯ ನಾಲ್ಕು ವರ್ಷಗಳ ಅವಧಿಗೆ ಕಾಯಂ ನಿರ್ದೇಶಕರಾಗಿ ಡಾ.ರಾಮಲಿಂಗಪ್ಪ ಅಂಟರತಾನಿಯವರು ಅಧಿಕಾರ ವಹಿಸಿಕೊಂಡರು.
ಕಳೆದ ಕೆಲ ತಿಂಗಳಿಂದ ಪ್ರಭಾರಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದ ರಾಮಲಿಂಗಪ್ಪ ಅವರು ಇಂದು ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕಾಯಂ ನಿರ್ದೇಶಕರಾಗಿ ನಾಲ್ಕು ವರ್ಷಗಳ ಅವಧಿಗೆ ನೇಮಕಗೊಂಡಿದ್ದಿದ್ದಾರೆ.
ನಿರ್ದೇಶ ಹುದ್ದೆಗೆ ಹಲವರು ಲಾಬಿ ನಡೆಸಿದ್ದರು, ಆದರೆ ಈ ಹುದ್ದೆಗೆ ಡಾ.ರಾಮಲಿಂಗಪ್ಪ ಆಯ್ಕೆಯಅಗುವ ಮೂಲಕ ಬಹು ನಿರೀಕ್ಷಿತ ನಿರ್ದೇಶಕರ ಹುದ್ದೆಯ ಕುತೂಹಲಕ್ಕೆ ತೆರೆ ಬಿದ್ದಿದೆ.