ETV Bharat / state

ಸೇನೆ ಸೇರದಿದ್ದರೇನಂತೆ... ಸೈನಿಕರ ಸೇವೆ ಮಾಡಿದರಾಯ್ತು... ವೈದ್ಯನ ದೇಶ ಪ್ರೇಮ!

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಡಾ. ರಾಮಚಂದ್ರ ಕಾರಟಗಿ, ಸೈನಿಕರು ಮತ್ತು ಅವರ ಕುಟುಂಬಕ್ಕೆ ಉಚಿತ ವೈದ್ಯಕೀಯ ಸೇವೆ ನೀಡುತ್ತಾ ಬಂದಿದ್ದು,ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಯೋಧರಿಗೆ ಉಚಿತ ಚಿಕಿತ್ಸೆ ನೀಡಿ ದೇಶ ಪ್ರೇಮ ಮೆರೆದ ಡಾಕ್ಟರ್
author img

By

Published : Jun 28, 2019, 2:12 PM IST

ಹುಬ್ಬಳ್ಳಿ: ಸೇನೆ ಸೇರಬೇಕು, ಸೈನಿಕನಾಗಿ ದೇಶ ಕಾಯ್ಬೇಕು ಅನ್ನೋದು ರಾಮಚಂದ್ರ ಕಾರಟಗಿ ಅವರು ಬಹುದೊಡ್ಡ ಕನಸಾಗಿತ್ತು .ಆದರೆ, ಆಗಿದ್ದು ವೈದ್ಯ. ಮೂಲತಃ ಕೊಪ್ಪಳ ಜಿಲ್ಲೆಯ ಗಂಗಾವತಿಯವರಾದ ಡಾ. ರಾಮಚಂದ್ರ ಭಾರತೀಯ ಸೈನ್ಯ ಸೇರಬೇಕು ಎಂದು ಕನಸು ಕಂಡವರು. ಆದರೆ ಕಾಲಿನ ಸರ್ಜರಿ ಆದ ಕಾರಣ ಸೈನ್ಯ ಸೇರಲಾಗಲಿಲ್ಲ. ಸದ್ಯ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದಾರೆ.

ಯೋಧರಿಗೆ ಉಚಿತ ಚಿಕಿತ್ಸೆ ನೀಡಿ ದೇಶ ಪ್ರೇಮ ಮೆರೆದ ಡಾಕ್ಟರ್

ಸೈನಿಕರ ಕುಟುಂಬಕ್ಕೆ ತಮ್ಮ ಕ್ಲಿನಿಕ್ ನಲ್ಲಿ ಉಚಿತ ಚಿಕಿತ್ಸೆ ನೀಡುವುದಲ್ಲದೇ ಸೈನಿಕರ ಮನೆ ಮನೆಗೆ ತೆರಳಿ ಚಿಕಿತ್ಸೆ ನೀಡುತ್ತಾರೆ. ಅಷ್ಟೇ ಅಲ್ಲ ನಗರದ ಬಹುತೇಕ ಮಾನಸಿಕ ರೋಗಿಗಳ ಮನೆ ಮನೆಗೆ ತೆರಳಿ ಉಚಿತ ಚಿಕಿತ್ಸೆ ನೀಡುತ್ತಾರೆ. ಅಲ್ಲದೇ ಪ್ರತಿ ಭಾನುವಾರ ಬಿಡುವು ಸಿಕ್ಕಾಗಲೆಲ್ಲ ನಗರದ ನಾನಾ ವೃದ್ಧಾಶ್ರಮಗಳಿಗೆ ತೆರಳಿ ಉಚಿತ ಚಿಕಿತ್ಸೆ ನೀಡುತ್ತಾರೆ. ಇದುವರೆಗೂ ಡಾಕ್ಟರ್​ ರಾಮಚಂದ್ರ ಕಾರಟಗಿಯವರು 1,300 ಕ್ಕೂ ಹೆಚ್ಚು ಜನರಿಗೆ ಉಚಿತ ಚಿಕಿತ್ಸೆ ನೀಡಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ 350 ಕ್ಕೂ ಹೆಚ್ಚು ಉಚಿತ ಕ್ಯಾಂಪ್ ಗಳನ್ನ ಮಾಡಿ ಬಡಜನರಿಗೆ ವೈದಕೀಯ ಸೇವೆ ನೀಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ದುಡ್ಡು ಕೊಟ್ರೆ ಮಾತ್ರ ನಾವು ಚಿಕಿತ್ಸೆ ನೀಡೋದು ಅನ್ನೋ ವೈದ್ಯರಿರುವ ಈ ಕಾಲದಲ್ಲಿ, ಯೋಧರ ಕುಟುಂಬಕ್ಕೆ ಉಚಿತ ವೈದಕೀಯ ಚಿಕಿತ್ಸೆ ನೀಡುವ ಮೂಲಕ ರಾಮಚಂದ್ರ ಕಾರಟಗಿಯವರು ವೈದ್ಯರ ಮೇಲಿನ ಗೌರವವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಸೇನೆಗೆ ಸೇರಲು ಆಗದಿದ್ದರೆ ಏನಂತೆ ಈ ಮೂಲಕ ದೇಶಸೇವೆ ಮಾಡುವ ಅವಕಾಶ ಸಿಕ್ಕಿದೆ ಎಂಬ ಅವರ ಆತ್ಮತೃಪ್ತಿಗೆ ಸೆಲ್ಯೂಟ್​ ಹೇಳಲೇಬೇಕು.

Intro:ಹುಬ್ಬಳ್ಳಿ-01

Anchor...
ಅವರಿಗೆ ಭಾರತೀಯ ಸೈನ್ಯವನ್ನು ಸೇರುವ ಆಸೆ ಇತ್ತು. ಸೈನಿಕನಾಗಿ ದೇಶ ಸೇವೆ ಮಾಡುವ ತುಡಿತವಿತ್ತು. ಆದ್ರೆ ಆಗಿದ್ದು ಮಾತ್ರ ಡಾಕ್ಟರ್. ವೃತ್ತಿಯಲ್ಲಿ ವೈದ್ಯರಾದ್ರು ಸೈನಿಕರು ಹಾಗೂ ಅವರ ಕುಟುಂಬದ ಸದಸ್ಯರೆಂದ್ರೆ ಅಪಾರವಾದ ಗೌರವ ಹೊಂದಿದ್ದಾರೆ. ಯೋಧರ ಮೇಲಿನ ಗೌರವ ಮತ್ತು ಸೈನ್ಯದ ಮೇಲಿನ ಪ್ರೀತಿಯದ್ಯೋತಕವಾಗಿ ಯೋಧರು ಮತ್ತು ಅವರ ಕುಟುಂಬಕ್ಕೆ ಇವರು ಉಚಿತವಾಗಿ ಚಿಕಿತ್ಸೆ ನೀಡುವ ಮೂಲಕ ದೇಶಪ್ರೇಮಕ್ಕೆ ಸಾಕ್ಷಿಯಾಗಿದೆ.

Voice over..
ಭಾರತೀಯ ಸೈನ್ಯ ಅಂದ್ರೆ ಎಲ್ಲರಿಗೂ ಹೆಮ್ಮೆ. ಭಾರತೀಯ ಸೈನ್ಯ ಸೇರಬೇಕು, ಸೈನಿಕನಾಗಿ ದೇಶಸೇವೆ ಮಾಡಬೇಕು ಎನ್ನುವುದು ಎಲ್ಲರ ಇಚ್ಚೆ. ಆದ್ರೆ ಎಲ್ಲರಿಗು ಈ ಅವಕಾಶ ಸಿಗಲ್ಲ. ಹೌದು ಭಾರತೀಯ ಸೇನೆಯನ್ನ ಸೇರಬೇಕು ಎಂದು ಕನಸು ಕಂಡಿದ್ದ ರಾಮಚಂದ್ರ ಕಾರಟಗಿ ಅವರು ಆಗಿದ್ದು ವೈದ್ಯರು.
ಮೂಲತಃ ಕೊಪ್ಪಳ ಜಿಲ್ಲೆಯ ಗಂಗಾವತಿಯವರಾದ ಇವರು, ಸೈನ್ಯಕ್ಕೆ ಸೇರಬೇಕು ಎಂದು ಕನಸು ಕಂಡವರು. ಆದರೆ ಕಾಲಿನ ಸರ್ಜರಿ ಆದ ಕಾರಣ ಸೈನ್ಯ ಸೇರಲಾಗಲಿಲ್ಲ. ಸದ್ಯ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದಾರೆ. ಕೆಲಸ ಮುಗಿದ ಬಳಿಕ ಹುಬ್ಬಳ್ಳಿಯ ಕೇಶವ ಕುಂಜದ‌ಬಳಿ ಸ್ವಂತ ಕ್ಲಿನಿಕ್ ಮಾಡಿಕೊಂಡು ಇಲ್ಲಿಗೆ ಬರುವ ಸೈನಿಕರ ಕುಟುಂಬಕ್ಕೆ ಉಚಿತ ಚಿಕಿತ್ಸೆ ನೀಡುತ್ತಾರೆ. ಅಲ್ಲದೆ ಕೆಲವು ಸೈನಿಕರ ಮನೆ ಮನೆಗೆ ತೆರಳಿ ಚಿಕಿತ್ಸೆ ನೀಡಿ ಬರುತ್ತಾರೆ. ಸೈನಿಕರು ಎಂದರೆ ನಮ್ಮನ್ನು ಕಾಯುವ ದೇವರು ಎಂದು ತಿಳಿದಿರುವ ಡಾ ರಾಮಚಂದ್ರ ಕಾರಟಗಿ ಅವರ, ಜನ ಸೇವೆ. ಇಷ್ಟೇ ಅಲ್ಲ. ನಗರದ ಬಹುತೇಕ ಮಾನಸಿಕ ರೋಗಿಗಳ ಮನೆ ಮನೆಗೆ ತೆರಳಿ ಉಚಿತ ಚಿಕಿತ್ಸೆ ನೀಡುತ್ತಾರೆ. ಅಲ್ಲದೆ ಪ್ರತಿ ರವಿವಾರ ಬಿಡುವು ಸಿಕ್ಕಾಗಲೆಲ್ಲಾ ನಗರದ ನಾನಾ ವೃದ್ಧಾಶ್ರಮಗಳಿಗೆ ತೆರಳಿ ಉಚಿತ ಚಿಕಿತ್ಸೆ ನೀಡುತ್ತಾರೆ.
ಬೈಟ್ : ಡಾ. ರಾಮಚಂದ್ರ ಕಾರಟಗಿ, ವೈದ್ಯ

Voice over..
ಇದುವರೆಗು ರಾಮಚಂದ್ರ ಕಾರಟಗಿಯವರು 1300ಕ್ಕೂ ಹೆಚ್ಚು ಜನರಿಗೆ ಉಚಿತ ಚಿಕಿತ್ಸೆ ನೀಡಿದ್ದಾರೆ. ಕೇವಲ ಯೋಧರ ಕುಟುಂಬಗಳಿಗೆ ಮಾತ್ರವಲ್ಲ ಗ್ರಾಮೀಣ ಪ್ರದೇಶಗಳಲ್ಲಿ 350ಕ್ಕು ಹೆಚ್ಚು ಉಚಿತ ಕ್ಯಾಂಪ್ ಗಳನ್ನ ಮಾಡಿ ಬಡಜನರಿಗೆ ವೈದಕೀಯ ಸೇವೆ ನೀಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಬೈಟ್:ಪ್ರದೀಪ , ಸಾರ್ವಜನಿಕರು

Voice over..

ಖಾಸಗಿ ಆಸ್ಪತ್ರೆಗಳಿಗೆ ಹೋದ್ರೆ ಸಣ್ಣ ಪುಟ್ಟ ಟ್ರಿಟ್ಮೆಂಟ್ ಗೂ ಲಕ್ಷಾಂತರ ರೂಪಾತಿ ಹಣ ಬೇಕಾಗುತ್ತೆ ಎನ್ನುವ ಕಾಲದಲ್ಲಿ, ವೈದ್ಯ ರಾಮಚಂದ್ರ ಕಾರಟಗಿಯವರು ಯೋಧರು, ನಿವೃತ್ತ ಯೋಧರು ಹಾಗೂ ಅವರ ಕುಟುಂಬಕ್ಕೆ ಉಚಿತ ವೈದಕೀಯ ಚಿಕಿತ್ಸೆ ನೀಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಸೇನೆಗೆ ಸೇರಲು ಆಗದಿದ್ದರೆ ಏನಾಯ್ತು, ಈ ಮೂಲಕ ದೇಶಸೆವೆ ಮಾಡುತ್ತಿದ್ದೇನೆ ಎಂಬ ಅವರ ಆತ್ಮತೃಪ್ತಿ ಸೆಲ್ಯುಟ್ ಹೇಳಲೇಬೇಕು...
_______ _________________
ಹೆಚ್ ಬಿ ಗಡ್ಡದ
ಈಟಿವಿ‌ ಭಾರತ ಹುಬ್ಬಳ್ಳಿBody:H B GaddadConclusion:Etv hubli
ETV Bharat Logo

Copyright © 2024 Ushodaya Enterprises Pvt. Ltd., All Rights Reserved.