ETV Bharat / state

ಮತ್ತೆ ಜೈಲಿಗೆ ಹೋಗೋಕೆ ಯಡಿಯೂರಪ್ಪಗೆ ಓಟ್ ಕೊಡ್ಬೇಕಾ?: ಸಿದ್ದರಾಮಯ್ಯ

ಜೈಲಿಗೆ ಹೋದ್ರು ಅಂತ ಸಿಎಂ ಸ್ಥಾನ ಕಳೆದುಕೊಂಡರು. ಇನ್ನೊಮ್ಮೆ ಕಾರಾಗೃಹಕ್ಕೆ ಹೋಗೋಕೆ ಯಡಿಯೂರಪ್ಪಗೆ ಓಟ್ ಕೊಡಬೇಕಾ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಮಾಜಿ ಸಿಎಂ‌ ಸಿದ್ದರಾಮಯ್ಯ
author img

By

Published : May 14, 2019, 5:50 PM IST

ಹುಬ್ಬಳ್ಳಿ: ನಾವು ಸಿ.ಎಸ್ ಶಿವಳ್ಳಿಯವರು ಮಾಡಿರುವ ಅಭಿವೃದ್ಧಿ ಕಾರ್ಯಗಳ ಆಧಾರದ ಮೇಲೆ ಮತ ಕೇಳುತ್ತಿದ್ದೇವೆ. ಬಿಜೆಪಿ ಚುನಾವಣೆಯಲ್ಲಿ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿಲ್ಲ ಎಂದು ಬಿಜೆಪಿ ವಿರುದ್ದ ಮಾಜಿ ಸಿಎಂ‌ ಸಿದ್ದರಾಮಯ್ಯ ಗರಂ ಆದರು.

ಅರಳಿಕಟ್ಟಿ ಗ್ರಾಮದಲ್ಲಿ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಸಿದ್ದು, ಯಡಿಯೂರಪ್ಪ ಜೈಲಿಗೆ ಹೋದ್ರು ಅಂತ ಸಿಎಂ ಸ್ಥಾನ ಕಳೆದುಕೊಂಡ್ರು. ಜೈಲಿಗೆ ಅವರೇನು ಬೀಗತನ ಮಾಡಲು ಹೋಗಿದ್ರಾ? ಬಿಜೆಪಿ ಸರ್ಕಾರ ಮಾಡಿರೋ ಸಾಧನೆ ಏನು? ಇನ್ನೊಮ್ಮೆ ಜೈಲಿಗೆ ಹೋಗೊಕೆ ಯಡಿಯೂರಪ್ಪಗೆ ಓಟ್ ಕೊಡಬೇಕಾ ? ಎಂದು ಬಿಎಸ್‌ವೈ ವಿರುದ್ಧ ವಾಗ್ದಾಳಿ ನಡೆಸಿದರು.

ಮಾಜಿ ಸಿಎಂ‌ ಸಿದ್ದರಾಮಯ್ಯ ವಾಗ್ದಾಳಿ

ಯಡಿಯೂರಪ್ಪ ಕಳೆದೊಂದು ವರ್ಷದಿಂದ ‌ಸಿಎಂ ಆಗೋಕೆ ಪ್ರಯತ್ನ ಮಾಡುತ್ತಿದ್ದಾರೆ. ಸದನದಲ್ಲಿ ಬಹುಮತ ತೋರಿಸಲು ಅವರಿಂದ ಸಾಧ್ಯವಾಗಿಲ್ಲ. ಪದೇ ಪದೇ ಸಿಎಂ ಆಗ್ತಿನಿ,ಆಗ್ತಿನಿ ಅಂತಾರೆ. ವಿರೋಧ ಪಕ್ಷದ ಕೆಲಸ ಮಾಡುವುದನ್ನು ಬಿಎಸ್ವೈ ಬಿಟ್ಟಿದ್ದಾರೆ. ವಿಧಾನಸೌಧ, ಅಲ್ಲಿನ ಮೂರನೇ ಮಹಡಿ, ಸಿಎಂ ಕುರ್ಚಿ ನಿತ್ಯ ಅವರ ಕನಸಲ್ಲಿ ಬೀಳುತ್ತದೆ. ಮಾನ, ಮಾರ್ಯಾದೆ ಲಜ್ಜೆಗೆಟ್ಟವರ ಪಕ್ಷ ಬಿಜೆಪಿ ಎಂದು ಇದೇ ವೇಳೆ ಅವರು ಕಿಡಿಕಾರಿದರು.

ಮಂಡ್ಯದಲ್ಲಿ ಸುಮಲತಾಗೆ ಸಿದ್ದರಾಮಯ್ಯ ಸಪೋರ್ಟ್ ಮಾಡಿದ್ದರು ಎನ್ನುವ ಜಗದೀಶ್ ಶೆಟ್ಟರ್ ಆರೋಪಕ್ಕೆ ಪ್ರತಿಕ್ರಿಯಿಸಿ, ಈ ರೀತಿ ಬೆಂಕಿ ಹಚ್ಚುವುದರಲ್ಲಿ ಬಿಜೆಪಿಗರು ನಿಸ್ಸೀಮರು. ಸುಳ್ಳು ಹೇಳುವುದು ಬಿಟ್ಟು ಅವರಿಗೇನೂ ಗೊತ್ತಿಲ್ಲ. ಸುಮಲತಾಗೆ ಸಪೋರ್ಟ್ ಮಾಡಿದ್ದು ನಾವಾ, ಅವರಾ? ಎಂದು ಪ್ರಶ್ನಿಸಿದರು.

ದೋಸ್ತಿ ಸರ್ಕಾರಕ್ಕೆ ಸಿದ್ದರಾಮಯ್ಯ ಟೈ ಬಾಂಬ್ ಫಿಕ್ಸ್ ಮಾಡಿದ್ದಾರೆ ಅನ್ನೊ ಶೆಟ್ಟರ್ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ದೋಸ್ತಿ ಸರ್ಕಾರ ಇನ್ನೂ ನಾಲ್ಕು ವರ್ಷ ಭದ್ರವಾಗಿರುತ್ತದೆ. ಬಿಜೆಪಿ ಅವರಿಗೆ ಹೇಳಿಕೊಳ್ಳಲು ಏನೂ ವಿಷಯವಿಲ್ಲ.ಹೀಗಾಗಿ ಈ ರೀತಿ ಸುಳ್ಳು ಹೇಳುತ್ತಾ ಓಡಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Intro:ಹುಬ್ಬಳ್ಳಿ-11

ನಾವು ಶಿವಳ್ಳಿ ಮಾಡಿರುವ ಅಭಿವೃದ್ಧಿ ಆಧಾರದ ಮೇಲೆ ಮತ ಕೇಳುತ್ತಿದ್ದೇವೆ.
ಬಿಜೆಪಿ ಚುನಾವಣೆಯಲ್ಲಿ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿಲ್ಲ ಎಂದು ಬಿಜೆಪಿ ವಿರುದ್ದ ಮಾಜಿ ಸಿಎಂ‌ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಅರಳಿಕಟ್ಟಿದಲ್ಲಿ ಬಹಿರಂರ ಸಭೆಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ 3 ವರ್ಷಕ್ಕೆ ಸಿಎಂ ಸ್ಥಾನದಿಂದ ಕೆಳಗೆ ಯಾಕೆ ಇಳಿದ್ರು,
ನೀವು ಜೈಲಿಗೆ ಹೋದ್ರು ಅಂತ ಸಿಎಂ ಸ್ಥಾನ ಕಳೆದುಕೊಂಡ್ರಿ.ಜೈಲಿಗೆ ಏನು ಬೀಗತನ ಮಾಡಲು ಹೋಗಿದ್ರಾ ? ಬಿಜೆಪಿ ಸರ್ಕಾರ ಮಾಡಿರೋ ಸಾಧನೆ ಏನು..? ಇನ್ನೋಮ್ಮೆ ಜೈಲಿಗೆ ಹೋಗೊಕೆ ಯಡಿಯೂರಪ್ಪಗೆ ಓಟ್ ಕೊಡಬೇಕಾ ? ವಾಗ್ದಾಳಿ ನಡೆಸಿದರು.
ಯಡಿಯೂರಪ್ಪ ಒಂದು ವರ್ಷದಿಂದ ‌ಸಿಎಂ ಆಗೋಕೆ ಪ್ರಯತ್ನ ಮಾಡುತ್ತಿದ್ದಾರೆ.
ಸದನದಲ್ಲಿ ಬಹುಮತ ತೋರಿಸಲು ಸಾಧ್ಯವಾಗಿಲ್ಲ. ಪದೇ ಪದೇ ಸಿಎಂ ಆಗ್ತಿನಿ ಆಗ್ತಿನಿ ಅಂತಾರೆ.
ವಿರೋಧ ಪಕ್ಷದ ಕೆಲಸ ಮಾಡೊದು ಬಿ ಎಸ್ ವೈ ಬಿಟ್ಟಿದ್ದಾರೆ. ಅವರ ಕನಸಲ್ಲಿ ನಿತ್ಯ ವಿಧಾನಸೌಧ, ಮೂರನೇ ಮಹಡಿ, ಸಿಎಂ ಕುರ್ಚಿ ಬಿಳುತ್ತದೆ. ಯಡಿಯೂರಪ್ಪ 10-12 ಭಾರೀ ಗಡುವು ನೀಡಿದ್ದಾರೆ. ಮಾನ, ಮಾರ್ಯಾದೆ ಲಜ್ಜೆಗೆಟ್ಟರ ಪಕ್ಷ ಬಿಜೆಪಿ ಎಂದು ಕಿಡಿಕಾರಿದರು.
ಇದಕ್ಕೂ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,
ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿಕೆಗೆ ತಿರುಗೇಟು ನೀಡಿದರು.
ಮಂಡ್ಯದಲ್ಲಿ ಸುಮಲತಾಗೆ ಸಿದ್ದರಾಮಯ್ಯ ಸಪೋರ್ಟ್ ಮಾಡಿದ್ದರು ಎನ್ನುವ ಜಗದೀಶ್ ಶೆಟ್ಟರ್ ಆರೋಪ ವಿಚಾರಕ್ಕೆ ಪ್ರತಿಕ್ರಯಿಸಿದ ಅವರು,
ಈ ತರಹ ಬೆಂಕಿ ಹಂಚುವುದರಲ್ಲಿ ಬಿಜೆಪಿಗರು ನಿಸ್ಸಿಮರು. ಸುಳ್ಳು ಹೇಳುವುದು ಬಿಟ್ಟು ಅವರಿಗೇನೂ ಗೊತ್ತಿಲ್ಲ.
ಸುಮಲತಾಗೆ ಸಪೋರ್ಟ್ ಮಾಡಿದ್ದು, ನಾವಾ ಅವರಾ..?
ನಾವು ಸಪೋರ್ಟ್ ಮಾಡಿದ್ದೇವೆ ಎನ್ನುವುದು ಸುಳ್ಳು.
ದೋಸ್ತಿ ಸರ್ಕಾರಕ್ಕೆ ಸಿದ್ದರಾಮಯ್ಯ ಟೈ ಬಾಂಬ್ ಫಿಕ್ಸ್ ಮಾಡಿದ್ದಾರೆ ಅನ್ನೊ ಶೆಟ್ಟರ್ ಹೇಳಿಕೆ ಪ್ರತಿಕ್ರಯಿಸಿದ ಅವರು ದೋಸ್ತಿ ಸರ್ಕಾರ ಇನ್ನೂ ನಾಲ್ಕು ವರ್ಷ ಭದ್ರವಾಗಿರುತ್ತೆ.
ಬಿಜೆಪಿ ಅವರಿಗೆ ಹೇಳಿಕೊಳ್ಳಲು ಏನೂ ವಿಷಯವಿಲ್ಲ.
ಹೀಗಾಗಿ ಈ ರೀತಿ ಸುಳ್ಳು ಹೇಳುತ್ತ ಓಡಾಡುತ್ಯಿದ್ದಾರೆ ಎಂದರು.Body:H B GaddadConclusion:Etv hubli
ETV Bharat Logo

Copyright © 2024 Ushodaya Enterprises Pvt. Ltd., All Rights Reserved.