ಧಾರವಾಡ: ರಾಜ್ಯದ ಮಂತ್ರಿಗಳು ಎಲ್ಲಿದ್ದಾರೋ ಗೊತ್ತಿಲ್ಲ, ಸಿಎಂ ಒಬ್ಬರೇ ಕಾಣುತ್ತಿದ್ದಾರೆ. ನಿನ್ನೆ ನಾನು ವಿಧಾನಸೌಧಕ್ಕೆ ಹೋಗಿದ್ದೆ ಅಲ್ಲಿ ಯಾರೂ ಇರಲಿಲ್ಲ. ಇದನ್ನೆಲ್ಲಾ ನೋಡಿದರೆ ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ಅನ್ನೋ ಭಾವನೆ ಬರುತ್ತಿದೆ ಎಂದು ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆ ಹಾವಳಿಯಿಂದ ಜನರ ಜೀವನ ಅಸ್ತವ್ಯಸ್ತಗೊಂಡಿದೆ. ಆದರೆ ಕೇಂದ್ರ ಇನ್ನೂ ಯಾವುದೇ ಪರಿಹಾರ ನೀಡಿಲ್ಲ ಎಂದರು.
ಜಿ.ಟಿ. ದೇವೇಗೌಡ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅಂಗೈ ಹುಣ್ಣಿಗೆ ಕನ್ನಡಿ ಏಕೆ? ಪಕ್ಷದಿಂದ ನನಗೂ ನೋವಾಗಿತ್ತು ಆದರೂ ನಾನು ಸುಮ್ಮನಿದ್ದೆ. ಒಟ್ಟಾರೆ ಅತೃಪ್ತಿ ಈಗ ಸ್ಫೋಟವಾಗಿದೆ ಅನ್ನಿಸುತ್ತೆ ಎಂದಿದ್ದಾರೆ.
ಡಿಕೆಶಿ ಬಂಧನ ವಿಚಾರವಾಗಿ ಮಾತನಾಡಿದ ಅವರು, ಕಾನೂನು ತನ್ನ ಕೆಲಸ ಮಾಡುತ್ತಿದೆ. ಆದರೆ, ಡಿಕೆಶಿಯವರನ್ನು ಬಂಧಿಸೋ ಅವಶ್ಯಕತೆ ಇರಲಿಲ್ಲ. ಡಿಕೆಶಿ ವಿಚಾರಣೆಗೆ ಹಾಜರಾಗೋದು ತಪ್ಪಿಸಿಲ್ಲ. ಅವರು ಇಡಿ ಮುಂದೆ ಅಟೆಂಡ್ ಆಗಿದ್ದು, ಅಧಿಕಾರಿಗಳಿಗೆ ಸಂಪೂರ್ಣವಾಗಿ ಸಹಕರಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.