ETV Bharat / state

ರೈತರ ಜಮೀನಿಗೆ ಡಿ.ಕೆ.ಶಿವಕುಮಾರ್ ಭೇಟಿ, ಪರಿಶೀಲನೆ - ರೈತರ ಜಮೀನಿಗೆ ಡಿ.ಕೆ.ಶಿವಕುಮಾರ್ ಭೇಟಿ

ರೈತರಿಗೆ ತರಕಾರಿ ಮಾರಾಟ ಮಾಡಲು ಕೇವಲ 2 ಗಂಟೆ ಅವಕಾಶ ನೀಡುತ್ತಾರೆ. ಆದರೆ, ಲಿಕ್ಕರ್ ಮಾರುವುದಕ್ಕೆ ಸಂಜೆ 4 ಗಂಟೆಯವರೆಗೂ ಅವಕಾಶ ನೀಡುತ್ತೀರಿ. ನಿಮಗೆ ಕಣ್ಣು, ಹೃದಯ ಇದೆಯಾ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.

DK Shivakumar visits farmers land
ರೈತರ ಜಮೀನಿಗೆ ಡಿ.ಕೆ.ಶಿವಕುಮಾರ್ ಭೇಟಿ, ಪರಿಶೀಲನೆ
author img

By

Published : May 31, 2021, 2:37 PM IST

ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ರಾಯಾಪುರ ಗ್ರಾಮದ ರೈತರ ಜಮೀನಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರೈತರ ಜಮೀನಿಗೆ ಡಿ.ಕೆ.ಶಿವಕುಮಾರ್ ಭೇಟಿ, ಪರಿಶೀಲನೆ

ಬಳಿಕ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ರೈತರ ಸಮಸ್ಯೆ ಆಲಿಸಲು ಅವರ ಜಮೀನಿಗೆ ಬಂದಿದ್ದೇನೆ. ಇಲ್ಲಿಯವರೆಗೂ ಸರ್ಕಾರ ನೀಡಿದ ಪರಿಹಾರ ರೈತರಿಗೆ ಸಿಕ್ಕಿಲ್ಲ. ರೈತರಿಗೆ ತರಕಾರಿ ಮಾರಾಟ ಮಾಡಲು ಕೇವಲ 2 ಗಂಟೆ ಅವಕಾಶ ನೀಡುತ್ತಾರೆ. ಆದರೆ, ಲಿಕ್ಕರ್ ಮಾರುವುದಕ್ಕೆ ಸಂಜೆ 4 ಗಂಟೆಯವರೆಗೂ ಅವಕಾಶ ನೀಡುತ್ತೀರಿ. ನಿಮಗೆ ಕಣ್ಣು, ಹೃದಯ ಇದೆಯಾ? ಎಂದು ರಾಜ್ಯ ಸರ್ಕಾರಕ್ಕೆ ಪ್ರಶ್ನೆ ಮಾಡಿದರು. ಮುಖ್ಯಮಂತ್ರಿಗಳೇ ಈ ಬಗ್ಗೆ ಗಮನ ಕೊಡಿ. ನಿಮ್ಮ ಅಧಿಕಾರ ಏನು ನಡೆಯುತ್ತಿಲ್ಲ. ನಾನು ಹೇಳಿದ ಮೇಲೆ ಕೆಲವು ಮಂತ್ರಿಗಳನ್ನು ಜಿಲ್ಲೆಗೆ ಕಳಿಸಿದ್ದೀರಿ. ನಾವು ರೈತರ ಜೊತೆ ನಿಲ್ಲುತ್ತೇವೆ ಎಂದರು.

ಲಾಕ್ ಡೌನ್ ವಿಸ್ತರಣೆ ಬಗ್ಗೆ ಪ್ರತಿಕ್ರಿಯಿಸಿ, ಈ ಬಗ್ಗೆ ನಾನೇನು ಹೇಳಲಾರೆ. ಅದು ಸರ್ಕಾರದ ನಿರ್ಧಾರ. ಅವರು ಏನಾದರೂ ಮಾಡಿಕೊಳ್ಳಲಿ. ನನಗೆ ಸರ್ಕಾರ ಕೇಳಿದರೆ ನನ್ನ ಅಭಿಪ್ರಾಯ ಹೇಳುತ್ತೇನೆ. ಈಗ ನಾನು ಜನರ ಹತ್ತಿರ ಬಂದಿದ್ದೇನೆ. ಆ ಬಗ್ಗೆ ಮಾತ್ರ ಮಾತನಾಡುತ್ತೇನೆ ಎಂದರು.

ಓದಿ: ಪ್ರತಾಪ್​​ ಸಿಂಹಗೆ ಶಕ್ತಿ ಇದ್ರೆ ಡಿಸಿ ಬದಲಾವಣೆ ಮಾಡಿಕೊಳ್ಳಲಿ : ಡಿ.ಕೆ.‌ ಶಿವಕುಮಾರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.