ETV Bharat / state

ಬಿಜೆಪಿಯವರಿಗೆ ಮಾನ-ಮರ್ಯಾದೆ ಇಲ್ಲ, ಬಿಜೆಪಿಗರು ಬಂಡಗೆಟ್ಟವರು : ಡಿಕೆಶಿ ವಾಗ್ದಾಳಿ - Hubli latest news

ಹೊಸದಾಗಿ ಚಾಲಕರ ಸಂಘ, ಕಲ್ಚರಲ್ ಸಂಘ, ಸಹಕಾರ ಸಂಘ ಮಾಡ್ತೇವಿ. ಪಕ್ಷ ಸಂಘಟನೆಗೆ ಇದು ಅನುಕೂಲವಾಗುತ್ತದೆ. ಕಾಂಗ್ರೆಸ್ ಶಾಸಕರ ಮನೆಯಲ್ಲಿ‌ ಸಭೆ ನಡೆಸಬಾರದು, ಕಾಂಗ್ರೆಸ್ ಬ್ಲಾಕ್ ಕಚೇರಿಯಲ್ಲಿ ಮಾಡಬೇಕು ಎಂದರು. ನಮ್ಮ ಪಕ್ಷದಲ್ಲಿ ಯಾವುದೇ ನಾಯಕರಿಲ್ಲ, ಇಲ್ಲಿ ಎಲ್ಲರೂ ಕಾರ್ಯಕರ್ತರು..

DK Shivakumar
ಡಿಕೆ ಶಿವಕುಮಾರ್
author img

By

Published : Jan 11, 2021, 8:29 PM IST

ಹುಬ್ಬಳ್ಳಿ : ಬಿಜೆಪಿಯವರು ಬಂಡಗೆಟ್ಟ ಜನ, ಇವರಿಗೆ ಯಾವುದೇ ನಾಚಿಕೆ, ಮಾನ-ಮರ್ಯಾದೆ ಇಲ್ಲ. ಈ ಸರ್ಕಾರಕ್ಕೆ ಕಣ್ಣು, ಕಿವಿ ಇಲ್ಲ. ರೈತರ ಕಷ್ಟಗಳಿಗೆ ಸ್ಪಂದಿಸಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಸಂಕಲ್ಪ ಸಮಾವೇಶದ ಬಳಿಕ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಯಾವ ಕ್ಷೇತ್ರದಲ್ಲಿ ಸೋತ್ತಿದ್ದೇವೆ, ಆ ಕ್ಷೇತ್ರದಲ್ಲಿ ನಾವು ಪ್ರವಾಸ ಮಾಡ್ತೀವಿ. ಜನರ ಮಧ್ಯೆ ಕಾರ್ಯಕ್ರಮವನ್ನು ನಾವು ಮಾಡ್ತೇವೆ. ಮುಂದಿನ ತಿಂಗಳಿನಿಂದ ನಮ್ಮ ಪ್ರವಾಸ ಆರಂಭವಾಗುತ್ತದೆ. ಮುಂದಿನ ವಿಧಾನಸಭೆ ಟಿಕೆಟ್ ಕೇಳುವವರು ಈಗಿನಿಂದಲೇ ಕ್ಷೇತ್ರದಲ್ಲಿ ಕೆಲಸ ಮಾಡಬೇಕು. ಜನರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಸೂಚನೆ ನೀಡಿದರು.

ಓದಿ...ಕಾಂಗ್ರೆಸ್‌ ಬಸ್‌ ಹಿಂದೂ ಹೋಗಲ್ಲ, ಮುಂದೂ ಹೋಗಲ್ಲ.. ಚಕ್ರಗಳು ಪಂಕ್ಚರ್ ಆಗಿವೆ- ಸಚಿವ ಬೊಮ್ಮಾಯಿ

ಚುನಾವಣೆ ಬಂದಾಗ ಟಿಕೆಟ್ ಕೇಳಿದ್ರೆ ನಾವು ಟಿಕೆಟ್ ನೀಡುವುದಿಲ್ಲ. ಇದು ವಿಧಾನಸಭೆಗೆ ಅಷ್ಟೇ ಅಲ್ಲಾ ಎಲ್ಲಾ ಚುನಾವಣೆಗೆ ಅನ್ವಯಿಸುತ್ತದೆ. ಉತ್ತಮವಾಗಿ ಕ್ಷೇತ್ರದಲ್ಲಿ ಕೆಲಸ ಮಾಡಿದವರಿಗೆ, ಸಕ್ರಿಯವಾಗಿದ್ದವರಿಗೆ ಮಾತ್ರ ವಿಧಾನಸಭೆ ಟಿಕೆಟ್ ನೀಡಲಾಗುತ್ತದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​

ಹೊಸದಾಗಿ ಚಾಲಕರ ಸಂಘ, ಕಲ್ಚರಲ್ ಸಂಘ, ಸಹಕಾರ ಸಂಘ ಮಾಡ್ತೇವಿ. ಪಕ್ಷ ಸಂಘಟನೆಗೆ ಇದು ಅನುಕೂಲವಾಗುತ್ತದೆ. ಕಾಂಗ್ರೆಸ್ ಶಾಸಕರ ಮನೆಯಲ್ಲಿ‌ ಸಭೆ ನಡೆಸಬಾರದು, ಕಾಂಗ್ರೆಸ್ ಬ್ಲಾಕ್ ಕಚೇರಿಯಲ್ಲಿ ಮಾಡಬೇಕು ಎಂದರು. ನಮ್ಮ ಪಕ್ಷದಲ್ಲಿ ಯಾವುದೇ ನಾಯಕರಿಲ್ಲ, ಇಲ್ಲಿ ಎಲ್ಲರೂ ಕಾರ್ಯಕರ್ತರು.

ಡಿ ಕೆ ಶಿವಕುಮಾರ್​ ಕೂಡ ಒಬ್ಬ ಸಾಮಾನ್ಯ ಕಾರ್ಯಕರ್ತ. ಸರ್ಕಾರ ಇದ್ದಾಗ, ಉಪ ಚುನಾವಣೆ ನಡೆಸುವುದೇ ಬೇರೆ, ಸರ್ಕಾರ ಇಲ್ಲದ ಸಮಯದಲ್ಲಿ ಚುನಾವಣೆ ನಡೆಸುವುದೇ ಬೇರೆ. ಮುಂದಿನ ಚುನಾವಣೆ ಫಲಿತಾಂಶ ಬರುವವರೆಗೂ ಕಾಯ್ದು ನೋಡಿ ಎಂದ ಅವರು, ನಮ್ಮ ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ, ಇಲ್ಲಿ ಎಲ್ಲರೂ ಸೇರಿ ಜಮೀನು ಹೂಳಬೇಕಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.