ETV Bharat / state

ಕುಂದಗೋಳದಲ್ಲಿ ಮೈತ್ರಿ ಅಭ್ಯರ್ಥಿ ಪರ ಡಿಕೆಶಿ ಭರ್ಜರಿ ಪ್ರಚಾರ

ಕುಂದಗೋಳ ಉಪಚುನಾವಣೆಯ ಉಸ್ತುವಾರಿ ವಹಿಸಿಕೊಂಡಿರುವ ಡಿ‌ ಕೆ ಶಿವಕುಮಾರ ಎರಡನೇ ಹಂತದ ಪ್ರಚಾರಕ್ಕೆ ಧುಮುಕಿದ್ದಾರೆ. ಡಿಕೆಶಿ ಅವರು ಮೈತ್ರಿ ಅಭ್ಯರ್ಥಿ ಕುಸುಮಾ ಶಿವಳ್ಳಿ ಪರ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ.

ಕುಂದಗೋಳದಲ್ಲಿ ಮೈತ್ರಿ ಅಭ್ಯರ್ಥಿ ಪರ ಡಿಕೆಶಿ ಭರ್ಜರಿ ಪ್ರಚಾರ
author img

By

Published : May 13, 2019, 10:25 AM IST

ಹುಬ್ಬಳ್ಳಿ: ಕುಂದಗೋಳ ಉಪಚುನಾವಣೆಯ ಉಸ್ತುವಾರಿ ವಹಿಸಿಕೊಂಡಿರುವ ಡಿ‌ ಕೆ ಶಿವಕುಮಾರ್​ ಎರಡನೇ ಹಂತದ ಪ್ರಚಾರಕ್ಕೆ ಧುಮುಕಿದ್ದಾರೆ.

ಸಚಿವ ಡಿಕೆಶಿ ಅವರು ಮೈತ್ರಿ ಅಭ್ಯರ್ಥಿ ಕುಸುಮಾ ಶಿವಳ್ಳಿ ಪರ ಭರ್ಜರಿ ಪ್ರಚಾರಕ್ಕೆ ಕೈಗೊಂಡಿದ್ದು, ಕುಂದಗೋಳ ವಿಧಾನಸಭಾ ಕ್ಷೇತ್ರದ ನೂಲ್ವಿ ಗ್ರಾಮದಲ್ಲಿ ಪ್ರಚಾರ ನಡೆಸಿದರು. ಪ್ರಚಾರ ಆರಂಭಕ್ಕೂ ಮುನ್ನ ನೂಲ್ವಿ ಗ್ರಾಮದ ಗಂಗಾಧರ ಮಠಕ್ಕೆ ಭೇಟಿ ನೀಡಿ ದರ್ಶನ ಪಡೆದರು.

ರೋಡ್ ಶೋಗೆ ಅನುಮತಿ ಸಿಗದೆ ಪಾದಯಾತ್ರ ಮೂಲಕ ಮತಯಾಚನೆ

ರೋಡ್​ ಶೋ ನಡೆಸಬೇಕಿದ್ದ ಸಚಿವ ಡಿ.ಕೆ. ಶಿವಕುಮಾರ್​ಗೆ ಅನುಮತಿ ಸಿಗಲಿಲ್ಲ. ಇದರಿಂದ ಕಾಲ್ನಡಿಗೆಯಲ್ಲಿಯೇ ಮೈತ್ರಿ ಅಭ್ಯರ್ಥಿ ಪರ ಮತಯಾಚನೆ ಮಾಡಿದರು.

ಕುಂದಗೋಳದಲ್ಲಿ ಮೈತ್ರಿ ಅಭ್ಯರ್ಥಿ ಪರ ಡಿಕೆಶಿ ಭರ್ಜರಿ ಪ್ರಚಾರ

ಈ ಭಾಗದ ಜನಕ್ಕಾಗಿ ಶಿವಳ್ಳಿ ಹೆಚ್ಚು ಶ್ರಮಿಸಿದ್ದಾರೆ:

ಕುಸುಮಾ ಶಿವಳ್ಳಿ ಆಯ್ಕೆಯಾದ್ರೆ ಎರಡ್ಮೂರು ತಿಂಗಳಿಗೆ ಒಂದು‌ ಬಾರಿ ಕುಂದಗೋಳಕ್ಕೆ ಬಂದು ಹೋಗುವುದಾಗಿ ಡಿಕೆಶಿ ಹೇಳಿದರು. ಅಲ್ಲದೆ, ಈ ಭಾಗದ ಜನರಿಗೆ ನೀರನ್ನು ಕೊಡಲು ಶಿವಳ್ಳಿ ಅನೇಕ ಬಾರಿ ಧರಣಿ ನಡೆಸಿದ್ದರು. ಆದ್ರೆ ಈ ಬಿಜೆಪಿ ಅಭ್ಯರ್ಥಿ ಚಿಕ್ಕನಗೌಡರ, ಪ್ರತಿಪಕ್ಷ ನಾಯಕ ಯಡಿಯೂರಪ್ಪ ಯಾರೂ ನೀರಿಗಾಗಿ ಹೋರಾಟ ಮಾಡಲಿಲ್ಲ ಎಂದು ವಾಗ್ದಾಳಿ ನಡೆಸಿದರು.

ಇನ್ನು ಬಿಜೆಪಿಗೆ ಟಾಂಗ್​ ಕೊಟ್ಟ ಡಿಕೆಶಿ, ನಮ್ಮ ಶಾಸಕರು ಖರೀದಿಗಿಲ್ಲ. ಈ ಹಿಂದೆ ಆಪರೇಷನ್ ಕಮಲ ಮಾಡಿದ್ದೀರಿ. ಈಗ ನಮಗೂ ಕೂಡ ಆ ಶಕ್ತಿ ಇದೆ. ಆದ್ರೆ ನಾವು ಅಧಿಕಾರ ದುರುಪಯೋಗ ಪಡಿಸಿಕೊಳ್ಳುವುದಿಲ್ಲ ಎಂದರು.

sample description
ETV Bharat Logo

Copyright © 2024 Ushodaya Enterprises Pvt. Ltd., All Rights Reserved.