ಹುಬ್ಬಳ್ಳಿ : ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆಯವರ 46ನೇ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ರಾಷ್ಟ್ರ ಧ್ವಜ ನಿರ್ಮಿಸುವ ಕಾರ್ಮಿಕರಿಗೆ ಅಗತ್ಯ ವಸ್ತುಗಳ ಕಿಟ್ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ದೇಶದಲ್ಲಿ ಕೊರೊನಾ ಹಾವಳಿಯಿಂದ ಅದೆಷ್ಟೋ ಕಾರ್ಮಿಕರು ಜೀವನ ಸಂಕಷ್ಟಕ್ಕೆ ಸಿಲುಕಿದೆ. ಅದೇ ರೀತಿ ನಗರದ ಗೋಪನಕೊಪ್ಪದಲ್ಲಿರುವ ಖಾದಿ ಉದ್ಯೋಗ ಗ್ರಾಮದಲ್ಲಿ ರಾಷ್ಟ್ರ ಧ್ವಜ ನಿರ್ಮಿಸುವ ಕಾರ್ಮಿಕರು ಸಹ ಕೊರೊನಾ ಹಾವಳಿಗೆ ತುತ್ತಾಗಿದ್ದು, ನೂರಕ್ಕೂ ಹೆಚ್ಚು ಕಾರ್ಮಿಕರಿಗೆ, ಶ್ರೀನಿವಾಸ ಮಾನೆ ಅವರ ಗೆಳೆಯರ ಬಳಗದಿಂದ ನಿತ್ಯ ಉಪಯೋಗಿಸುವ ದಿನಸಿ( ಆಹಾರ ಕಿಟ್) ಹಾಗೂ ಮಹಿಳೆಯರಿಗೆ ಸೀರೆ, ಪುರುಷರಿಗೆ ಪ್ಯಾಂಟ್ ಶರ್ಟ್ ವಿತರಣೆ ಮಾಡಲಾಯಿತು.