ETV Bharat / state

ಹು-ಧಾ ಪಾಲಿಕೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಆರೋಪ: ಡಿಸಿಗೆ ದೂರು ನೀಡಲು ಮುಂದಾದ ಕಾಂಗ್ರೆಸ್ - ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸುವ ಎಚ್ಚರಿಕೆ‌

ಅನುದಾನ ಹಂಚಿಕೆಯಲ್ಲಿನ ತಾರತಮ್ಯ ಆರೋಪವನ್ನು ಮೇಯರ್ ವೀಣಾ ಭರದ್ವಾಡ ತಳ್ಳಿ ಹಾಕಿದ್ದಾರೆ.

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ
author img

By

Published : Aug 4, 2023, 9:58 PM IST

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಅನುದಾನ ಹಂಚಿಕೆ ತಾರತಮ್ಯ ಆರೋಪ ಕೇಳಿ‌ ಬಂದಿದೆ. ಕೇವಲ ಬಿಜೆಪಿ ಪಾಲಿಕೆ ಸದಸ್ಯರ ವಾರ್ಡ್​ಗಳಿಗೆ ಅನುದಾನ ಹಂಚಿಕೆಯಾದ್ರೆ ನಾವೇನು ಮಾಡಬೇಕು ಎಂದು ಕಾಂಗ್ರೆಸ್‌‌ ಸದಸ್ಯರು ಪ್ರಶ್ನಿಸಿದ್ದಾರೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ರಾಜ್ಯದ ಎರಡನೇ ದೊಡ್ಡ ಪಾಲಿಕೆ. ಇಲ್ಲಿ ಸತತವಾಗಿ ದಶಕಗಳಿಂದಲೂ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. 15ನೇ ಹಣಕಾಸಿನಲ್ಲಿ ಬಿಡುಗಡೆಯಾದ 43 ಕೋಟಿ ರೂ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಕಾಂಗ್ರೆಸ್ ಪಾಲಿಕೆ ಸದಸ್ಯರು‌ ಆರೋಪಿಸಿದ್ದಾರೆ.

ಕಾಂಗ್ರೆಸ್ ಆರೋಪವೇನು?: ಸದ್ಯ ಬಿಡುಗಡೆಗೊಂಡ ಅನುದಾನದಲ್ಲಿ ಬಿಜೆಪಿ ಪಾಲಿಕೆ ಸದಸ್ಯರಿಗೆ ಹೆಚ್ಚು ಪಾಲು ಸಿಕ್ಕಿದೆ. ಹೀಗಾಗಿ, ಅನುದಾನ ಸರಿಯಾಗಿ‌ ಹಂಚಿಕೆ ಮಾಡುವಂತೆ ಕಾಂಗ್ರೆಸ್ ಸದಸ್ಯರು ಪಟ್ಟು ಹಿಡಿದಿದ್ದಾರೆ. ವಾರ್ಡ್​ಗಳಿಗೆ ಅನುದಾನ ತಾರತಮ್ಯ ಮಾಡಿರುವ ಬಗ್ಗೆ ಆಡಳಿತ ಪಕ್ಷದ ವಿರುದ್ಧ ಕಾಂಗ್ರೆಸ್ ಸದಸ್ಯರು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸುವ ಎಚ್ಚರಿಕೆ‌ ನೀಡಿದ್ದಾರೆ.

ಪಾಲಿಕೆ ಆಡಳಿತ ಪಕ್ಷದ ವಿರುದ್ಧ ಗಂಭೀರ ಆರೋಪ ಮಾಡಿರುವ ಬಗ್ಗೆ ಮೇಯರ್ ವೀಣಾ ಭರದ್ವಾಡ ಪ್ರತಿಕ್ರಿಯಿಸಿದ್ದು, ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಠರಾವು ಮಾಡಲಾಗಿದೆ. ಈ ಬಗ್ಗೆ ವಿರೋಧ ಪಕ್ಷದವರು ಯಾರಿಗೆ ಬೇಕಾದರೂ ದೂರು ಕೊಡಲಿ. ನಾವೇನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದರು.

15ನೇ ಹಣಕಾಸಿನ ಯೋಜನೆಯಡಿ ಸರ್ಕಾರದಿಂದ ಪಾಲಿಕೆಗೆ ಅನುದಾನ ಬರುತ್ತದೆ. ಮೊದಲು ಅನುದಾನ ಬಂದಾಗ ತಾರತಮ್ಯ ಮಾಡಿದ್ದರು. ಆದರ ಯಾರಿಗೂ ಗೊತ್ತಿರಲಿಲ್ಲ. ಆದರ ಕೆಲಸಗಳು ಮುಗಿದವು. ಎರಡನೇ ಅವಧಿಗೆ ಅನುದಾನ ಬಂತು, ಕಳೆದ ಬಾರಿ ಮೇಯರ್ ಆಗಿದ್ದ ಈರೇಶ ಅಂಚಟಗೇರಿ ಅವರಿಗೆ ಎಲ್ಲರಿಗೂ ಒಂದು ತರಹ ಮಾಡಿ ಅಂತ ಪತ್ರದ ಮೂಲಕ ಮನವಿ ಮಾಡಿದ್ದೆವು. ಆಗ ನಡೆದ ಅನುದಾನ ಹಂಚಿಕೆಯಲ್ಲೂ ತಾರತಮ್ಯ ಆಗಿತ್ತು. ಡಿಸಿಗೆ ತಕರಾರು ಅರ್ಜಿ ಸಲ್ಲಿಸಿದ್ದೆವು. ಡಿಸಿ ಸಮನಾಗಿ ಎಲ್ಲ ಸದಸ್ಯರಿಗೆ ಅನುದಾನ ಹಂಚಿಕೆ ಮಾಡಿದ್ದರು. 43 ಕೋಟಿ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಆಗಿದೆ. ಯಾವುದೇ ಅನುದಾನ ಬಂದರ ಸಮನಾಗಿ ಸಿಗಬೇಕೆಂದು ಹೋರಾಟ ಶುರು ಮಾಡಿದ್ದೇವೆ. ಡಿಸಿಗೆ ದೂರು ನೀಡುತ್ತೇವೆ. ಇಷ್ಟೇ ಅಲ್ಲದೇ ಸಚಿವರಿಗೆ ಸಿಎಂ ಅವರ ಗಮನಕ್ಕೂ ತರುತ್ತೇವೆ ಎಂದು ಮಹಾನಗರ ಪಾಲಿಕೆ ಕಾಂಗ್ರೆಸ್ ಸದಸ್ಯ ಎಂ.ಎಂ.ಭದ್ರಾಪೂರ ತಿಳಿಸಿದ್ದಾರೆ.

ಇದನ್ನೂಓದಿ:ಅನ್ನಭಾಗ್ಯ ಯೋಜನೆ ಜಾರಿಗೆ ಬಂದ ತಿಂಗಳೊಳಗೆ 1 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಹಣ ಜಮೆ: ಕೆ ಎಚ್​ ಮುನಿಯಪ್ಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.