ETV Bharat / state

ನಮ್ಮ ಮಠಾಧಿಪತಿಗಳ ಕೈಯಲ್ಲಿ ಆಯುಧ ಕೊಡಬೇಕು ಎಂದ ದಿಂಗಾಲೇಶ್ವರ ಸ್ವಾಮೀಜಿ - ಜಗದೀಶ್ ಶೆಟ್ಟರ್ ಹುಟ್ಟುಹಬ್ಬ

ನಮ್ಮ ಸಮಾಜದ ನಾಯಕರು ಹಾಗೂ ಮಠಾಧಿಪತಿಗಳ ಕೈಯಲ್ಲಿ ಆಯುಧ ಕೊಡಬೇಕು ಎಂದು ಪುರಾಣದ ಮಾತು ಉಲ್ಲೇಖಿಸಿ ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.

dingaleshwar swamiji
ದಿಂಗಾಲೇಶ್ವರ ಸ್ವಾಮೀಜಿ
author img

By ETV Bharat Karnataka Team

Published : Dec 18, 2023, 1:10 PM IST

ಜಗದೀಶ್ ಶೆಟ್ಟರ್ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ದಿಂಗಾಲೇಶ್ವರ ಸ್ವಾಮೀಜಿ

ಹುಬ್ಬಳ್ಳಿ : ನಮ್ಮ ಸಮಾಜದ ನಾಯಕರು ಮತ್ತು ಮಠಾಧಿಪತಿಗಳ ಕೈಯಲ್ಲಿ ಆಯುಧ ಕೊಡಬೇಕು. ಆಯುಧ ಕೊಟ್ಟು ಮಠ ಮಾನ್ಯಗಳು, ಗಣ್ಯರ ರಕ್ಷಣೆ ಮಾಡಬೇಕು ಎಂದು ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಪುರಾಣವೊಂದನ್ನು ಉಲ್ಲೇಖಿಸಿ ಹೇಳಿರುವುದು ಎಂದು ಚರ್ಚೆಗೆ ಗ್ರಾಸವಾಗಿದೆ.

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ದಿಂಗಾಲೇಶ್ವರ ಸ್ವಾಮೀಜಿ, ಪುರಾಣದ ಮಾತು ಉಲ್ಲೇಖಿಸಿ ಆಯುಧ ಕೊಡಬೇಕು ಎಂದು ಹೇಳಿದ್ದು, ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. " ಪುರಾಣದಲ್ಲಿ ದೇವಿ ಕಡೆ ಸ್ವತಂತ್ರ ಆಯುಧ ಇರಲಿಲ್ಲ. ಎಲ್ಲರೂ ಒಂದು ಆಯುಧ ಕೊಟ್ಟಿರುವ ಕಾರಣಕ್ಕೆ ದುಷ್ಟರ ಸಂಹಾರ ಮಾಡಿದಳು. ಇದನ್ನು ಹೇಳೋಕೆ ಕಾರಣ, ನಮ್ಮ ನಾಯಕರುಗಳಿಗೆ ಒಬ್ಬೊಬ್ಬರು ಆಯುಧ ಕೊಡಬೇಕು. ಸಮಾಜದಲ್ಲಿ ಬಲಿಷ್ಠ ಆಗುವ ವ್ಯಕ್ತಿಗಳಿಗೆ ತೊಂದರೆ ಕೊಡುವ ಕೆಲಸ ಈ ನಾಡಿನಲ್ಲಿದೆ. ಮಠಾಧಿಪತಿಗಳಿಗೂ ಇದು ತಪ್ಪಿಲ್ಲ. ಮಠಾಧಿಪತಿಗಳನ್ನು ತೇಜೋವಧೆ ಮಾಡುವ ಕೆಲಸ ನಡೆಯುತ್ತಿದೆ" ಎಂದು ಹೇಳಿದರು.

ಇದನ್ನೂ ಓದಿ : ದಿಂಗಾಲೇಶ್ವರ ಸ್ವಾಮೀಜಿ ಪರ್ಸೆಂಟೇಜ್ ಹೇಳಿಕೆಗೆ ಸಾರಂಗಧರ ಶ್ರೀ ಆಕ್ರೋಶ

ನಮ್ಮ ಮಠಗಳನ್ನು ನಾಶ ಮಾಡುವುದರ ಜೊತೆಗೆ ಎರಡನೇ ಹಂತದ ನಾಯಕರನ್ನು ರಾಜಕೀಯವಾಗಿ ನಾಶ ಮಾಡುವ ವ್ಯವಸ್ಥೆ ಇದೆ. ಹುಟ್ಟುಹಬ್ಬದಲ್ಲಿ ಇದನ್ನು ಹೇಳಬೇಕೋ ಬೇಡವೋ, ಆದರೆ ನಮ್ಮ ಭಾವನೆ ಹೇಳುತ್ತೇನೆ. ಯಾರ ಅಧಃಪತನವನ್ನು ನಾವು ಸಹಿಸಬಾರದು. ಮಠಾಧಿಪತಿಗಳು, ರಾಜಕೀಯ ನಾಯಕರು ಸಮಾಜಕ್ಕೆ ಆಧಾರ ಸ್ತಂಭವಿದ್ದಂತೆ. ಲಿಂಗಾಯತ ನಾಯಕರ ಕಂಬ ಗಟ್ಟಿಯಾಗಿರಬೇಕು, ಎಲ್ಲರೂ ಎಚ್ಚೆತ್ತುಕೊಳ್ಳುವ ಕಾಲ ಬಂದಿದೆ ಎಂದು ಭಾಷಣ ಮಾಡಿದರು.

ಇದನ್ನೂ ಓದಿ : ತಾಕತ್ತಿದ್ದರೆ ನಿಮ್ಮ ಕ್ಷೇತ್ರದಲ್ಲಿರುವ ಧಾರ್ಮಿಕ ಕೇಂದ್ರ ತೆರವುಗೊಳಿಸಿ : ಸಿಎಂಗೆ ದಿಂಗಾಲೇಶ್ವರ ಸ್ವಾಮೀಜಿ ಸವಾಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.