ETV Bharat / state

ನಾನು ಸಮಾಜಕ್ಕೆ ಮಿಸ್ ಗೈಡ್ ಮಾಡಿಲ್ಲ, ಮುಜಗು ಶ್ರೀಗಳನ್ನ ಮಿಸ್ ಯ್ಯೂಸ್ ಮಾಡಿಕೊಂಡಿದ್ದಾರೆ: ದಿಂಗಾಲೇಶ್ವರ ಸ್ವಾಮೀಜಿ

author img

By

Published : Feb 11, 2021, 2:43 PM IST

Updated : Feb 11, 2021, 3:30 PM IST

ನಾನು ಸಮಾಜಕ್ಕೆ ಮಿಸ್ ಗೈಡ್ ಮಾಡಿಲ್ಲ. ಮುಜಗು ಸ್ವಾಮೀಜಿಯನ್ನು ಮಿಸ್ ಯ್ಯೂಸ್ ಮಾಡಿಕೊಂಡಿದ್ದಾರೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಏಟಿಗೆ ಎದರೇಟು ನೀಡಿದ್ದಾರೆ.

Dingaleshwar swamiji clarification, Dingaleshwar swamiji clarification on Prabhakar kore statement, KLE property issue, KLE property issue news, ದಿಂಗಾಲೇಶ್ವರ ಸ್ವಾಮೀಜಿ ಸ್ಪಷ್ಟನೆ, ಪ್ರಭಾಕರ್​ ಕೋರೆ ಹೇಳಿಕೆ ಬಗ್ಗೆ ದಿಂಗಾಲೇಶ್ವರ ಸ್ವಾಮೀಜಿ ಸ್ಪಷ್ಟನೆ, ಕೆಎಲ್​ಇ ಆಸ್ತಿ ವಿವಾದ, ಕೆಎಲ್​ಇ ಆಸ್ತಿ ವಿವಾದ ಸುದ್ದಿ,
ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆ

ಹುಬ್ಬಳ್ಳಿ: ನಾನು ಯಾವುದೇ ಕಾರಣಕ್ಕೂ ಸಮಾಜಕ್ಕೆ ಮಿಸ್ ಗೈಡ್ ಮಾಡಿಲ್ಲ. ಅವರೇ ಮೂರು ಸಾವಿರ ಮಠದ ಮುಜಗು ಶ್ರೀಗಳನ್ನು ಮಿಸ್ ಯ್ಯೂಸ್ ಮಾಡಿಕೊಂಡಿದ್ದಾರೆ ಎಂದು ಪ್ರಭಾಕರ್ ಕೋರೆಗೆ ದಿಂಗಾಲೇಶ್ವರ ಸ್ವಾಮೀಜಿ ತೀರುಗೇಟು ನೀಡಿದ್ದಾರೆ.

ನಾನು ಸಮಾಜಕ್ಕೆ ಮಿಸ್ ಗೈಡ್ ಮಾಡಿಲ್ಲ

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಠಕ್ಕೆ ಮಾಲೀಕರಿಲ್ಲ ಎನ್ನೋ ಮಾತು ಒಪ್ಪಲ್ಲ. ಮಠಾಧೀಶರೇ ಮಠದ ಮಾಲೀಕರು. ಆ ರೀತಿ ಹೇಳಿಕೆ ಅವರ ಬುದ್ದಿಮಟ್ಟ ತೋರಿಸುತ್ತದೆ. ಕೋರೆಯವರು ಗೊಂದಲದ ಹೇಳಿಕೆ ನೀಡುತ್ತಿದ್ದಾರೆ. ಭೂಮಿ ದಾನ ತೆಗೆದುಕೊಂಡು 17 ವರ್ಷ ಆಯಿತು ಅಂತಾರೆ. ಆದರೆ ಭೂಮಿ ತೆಗೆದುಕೊಂಡಿದ್ದು, 2012ರಲ್ಲಿ ಅದಕ್ಕೆ ನನ್ನ ಹತ್ತಿರ ದಾಖಲೆಗಳಿವೆ ಎಂದರು.

ಈ ಹಿಂದೆಯು ನಿಮ್ಮ ಸಂಸ್ಥೆಯ ಅನೇಕ ಕಾಲೇಜುಗಳಿಗೆ ಭೂಮಿ ತೆಗೆದುಕೊಂಡಿದ್ದಿರಿ. ಆದರೆ ಮಠಕ್ಕೆ ನಿಮ್ಮ ಕೊಡುಗೆ ಏನು ಎನ್ನುವುದನ್ನು ಜನರಿಗೆ ತಿಳಿಸಿ. ಮಠದ ಆಸ್ತಿ ಪಡೆಯೋಕೆ ಯಾರ ಅನುಮತಿ ಬೇಕಿಲ್ಲ ಅಂತೀರಾ. ಅದು ನಿಮ್ಮ ಉದ್ಧಟನದ ಹೇಳಿಕೆ ಎಂದ ಅವರು, ಕೋರೆಯವರೆ ನಿಮ್ಮ ದಬ್ಬಾಳಿಕೆಗೆ ಹೆದರೋ ಸ್ವಾಮೀಜಿ ನಾನಲ್ಲ. ನನ್ನ ಜೀವ ಹೋದರೂ ಸರಿ ಮಠದ ಆಸ್ತಿ ವಾಪಸ್ ತರುತ್ತೇನೆ ಎಂದು ಅವರು ಹೇಳಿದರು.

ಕೋರೆಯವರೇ ನೀವು ನನ್ನನ್ನು ಸ್ವಾಮೀಜಿ ಅಂತಾ ಒಪ್ಪಿಕೊಳ್ಳಬೇಕಾಗಿಲ್ಲ:

ಕೋರೆಯವರು ನೀವು ನನ್ನನ್ನು ಸ್ವಾಮೀಜಿ ಅಂತ ಒಪ್ಪಿಕೊಳ್ಳಬೇಕಾದ ಅವಶ್ಯಕತೆ ಇಲ್ಲ. ಇಡೀ ನಾಡು ನನ್ನನ್ನ ಸ್ವಾಮೀಜಿ ಅಂತ ಒಪ್ಪಿಕೊಂಡಿದೆ. ಮೂರು ಸಾವಿರ ಮಠದ ವಿಷಯಕ್ಕೆ ದಿಂಗಾಲೇಶ್ವರ ಶ್ರೀ ಏನು ಸಂಬಂಧ ಅಂತ ಕೇಳ್ತಾರೆ. ಅವರೇ ನನ್ನನ್ನ ಉತ್ತರಾಧಿಕಾರಿ ಅಂತ ಕಾಗದ ಪತ್ರಕ್ಕೆ ಸಹಿ ಹಾಕಿದ್ದಾರೆ‌ ಎಂದ ದಿಂಗಾಲೇಶ್ವರ ಸ್ವಾಮೀಜಿ ಆ ಬಗ್ಗೆ ದಾಖಲೆ ಬಿಡುಗಡೆ ಮಾಡಿದರು.

ಮಠ ಉಳಿಸಬೇಕು ಎನ್ನುವವರನ್ನು ಕತ್ತುಪಟ್ಟಿ ಹಿಡಿದು ಆಚೆ ತಳ್ತಾರೆ. ಮಠದ ಆಸ್ತಿ ಬರೆದುಕೊಡುವವರನ್ನು ಮಠದಲ್ಲಿ ಬಿಡ್ತಾರೆ. ನಾನು ಅವರನ್ನು ಆಹ್ವಾನ ಮಾಡುತ್ತೇನೆ. ಮಠಕ್ಕೆ ಬನ್ನಿ, ವಿವಾದ ಬಗೆಹರಿಸೋಣ. ಆದರೆ, ಅವರ್ಯಾರು ಬರ್ತಿಲ್ಲ. ಎಲ್ಲಿ ಅವರ ಬಣ್ಣ ಬಯಲಾಗುತ್ತೋ ಎನ್ನೋ ಭಯ ಅವರಿಗೆ ಕಾಡ್ತಿದೆ. ವಿವಾದದ ತಾರ್ಕಿಕ ಅಂತ್ಯ ಭಕ್ತರು ಹಾಗೂ ನ್ಯಾಯಾಲಯ ನಿರ್ಧರಿಸುತ್ತೆ ಎಂದು ಅವರು ಹೇಳಿದರು.

ಶಂಕರಣ್ಣ ಮುನವಳ್ಳಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನನ್ನ ಜೀವಕ್ಕೆ ಏನಾದರೂ ಅದರೇ ಸ್ವಾಮೀಜಿ ಕಾರಣ ಅಂತಾರೆ. ನನ್ನಿಂದ ನಿಮಗೇನು ಆಗಲ್ಲ. ನೀವೇ ಮಠದ ಆಸ್ತಿ ವಿಚಾರವಾಗಿ ಮಾನಸಿಕವಾಗಿ ಏನಾದರೂ ಆಗಬಹುದು. ಹಾಗೇನಾದರೂ ಆದರೆ ನಾನೇ ನಿಮ್ಮನ್ನ ಆಸ್ಪತ್ರೆಗೆ ದಾಖಲಿಸಿ ನಿಮ್ಮನ್ನು ಉಳಿಸಿಕೊಳ್ಳುತ್ತೆನೆ. ನೀವು ಸಾಯುವುದಕ್ಕಿಂತ ಮುಂಚೆ ಮಠದ ಆಸ್ತಿ ವಿವಾದ ಬಗೆಹರಿಸಿ‌ ಎಂದರು.

Last Updated : Feb 11, 2021, 3:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.