ETV Bharat / state

ಡಿಮ್ಹಾನ್ಸ್ ಆಸ್ಪತ್ರೆ ಹೆಸರು ಕೆಡಿಸಲಾಗುತ್ತಿದೆ ಎಂದು ಆರೋಪಿಸಿ ವೈದ್ಯರಿಂದ ಪ್ರತಿಭಟನೆ - ಡಿಮ್ಹಾನ್ಸ್ ನಿರ್ದೇಶಕ ಡಾ. ಮಹೇಶ ದೇಸಾಯಿ

ವೈದ್ಯರ ಕ್ರಮ ಪ್ರಶ್ನಿಸಿ ಸೆಲ್ವಿ ಪರ ವಕೀಲರು ಕೋರ್ಟ್ ಮೆಟ್ಟಿಲೆರಿದ್ದರು. ಕೋರ್ಟ್ ಆದೇಶದಂತೆ ಸೆಲ್ವಿಯನ್ನು ಮೊನ್ನೆ ಮೊನ್ನೆ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಆದರೆ ಸೆಲ್ವಿ ಇದೀಗ ವೈದ್ಯರ ಮೇಲೆ ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

dimhans-hospital-accusation
ವೈದ್ಯರಿಂದ ಪ್ರತಿಭಟನೆ
author img

By

Published : Feb 17, 2021, 5:29 PM IST

ಧಾರವಾಡ: ವಿನಾ ಕಾರಣ ಡಿಮ್ಹಾನ್ಸ್ ಆಸ್ಪತ್ರೆಯ ಹೆಸರು ಕೆಡಿಸಲಾಗುತ್ತಿದೆ ಎಂದು ಆರೋಪಿಸಿ ಮಾನಸಿಕ ಆರೋಗ್ಯ ಸಂಸ್ಥೆ ಡಿಮ್ಹಾನ್ಸ್ ವೈದ್ಯರು ಆಸ್ಪತ್ರೆಯಲ್ಲಿ ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ನಡೆಸಿದರು.

ವೈದ್ಯರಿಂದ ಪ್ರತಿಭಟನೆ

ಓದಿ: ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ₹20 ಲಕ್ಷ ಕೋಟಿ ಲೂಟಿ : ಸುರ್ಜೇವಾಲ ಆರೋಪ

ಸುಖಾಸುಮ್ಮನೆ ಆಸ್ಪತ್ರೆಯ ವೈದ್ಯರ ಮೇಲೆ ದೂರು ದಾಖಲಿಸಿ ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂದು ವೈದ್ಯರು ಆರೋಪಿಸಿ ನಿರ್ದೇಶಕರಿಗೆ ಮನವಿ ಸಲ್ಲಿಸಿದರು. ಸೆಲ್ವಿ ಎಂಬಾಕೆ ತನ್ನ ಆರೋಗ್ಯ ಸರಿಯಿದ್ದರೂ ಸಹ ಮಾನಸಿಕ ಖಿನ್ನತೆಗೊಳಗಾಗಿದ್ದಾಳೆ ಎಂದು ಆಕೆಯನ್ನು 16 ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತಂತೆ.

ವೈದ್ಯರ ಕ್ರಮ ಪ್ರಶ್ನಿಸಿ ಸೆಲ್ವಿ ಪರ ವಕೀಲರು ಕೋರ್ಟ್ ಮೆಟ್ಟಿಲೆರಿದ್ದರು. ಕೋರ್ಟ್ ಆದೇಶದಂತೆ ಸೆಲ್ವಿಯನ್ನು ಮೊನ್ನೆ ಮೊನ್ನೆ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಆದರೆ ಸೆಲ್ವಿ ಇದೀಗ ವೈದ್ಯರ ಮೇಲೆ ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಡಿಮ್ಹಾನ್ಸ್ ನಿರ್ದೇಶಕ ಡಾ. ಮಹೇಶ ದೇಸಾಯಿ, ವೈದ್ಯಾಧಿಕಾರಿಗಳಾದ ರಾಘವೇಂದ್ರ ನಾಯಕ ಹಾಗೂ ರಂಗನಾಥ ಕುಲಕರ್ಣಿ ಎಂಬುವವರ ಮೇಲೆ ದೂರು ದಾಖಲಿಸಿದ್ದಾರೆ. ಇನ್ನು ದೂರು ದಾಖಲಾಗುತ್ತಿದ್ದಂತೆ ಡಿಮ್ಹಾನ್ಸ್ ಸಿಬ್ಬಂದಿ ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟಿಸಿದರು. ವಿನಾ ಕಾರಣ ಆಸ್ಪತ್ರೆ ಹೆಸರು ಕೆಡಿಸಲಾಗುತ್ತಿದೆ. ಸರ್ಕಾರ ಮಧ್ಯಪ್ರವೇಶಿಸಿ ವೈದ್ಯರಿಗೆ ನಿರಾತಂಕವಾಗಿ ಕೆಲಸ ಮಾಡಲು ಅವಕಾಶ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.