ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ತ್ರೈವಾರ್ಷಿಕ ಚುನಾವಣೆ ಹಿನ್ನೆಲೆಯಲ್ಲಿ ಸಮರ್ಪಕ ಉತ್ತರ ನೀಡುವಂತೆ ವಿದ್ಯಾವರ್ಧಕ ಸಂಘಕ್ಕೆ ಧಾರವಾಡ ಹೈಕೋರ್ಟ್ (Dharawada Highcourt) ನೋಟಿಸ್ ಜಾರಿಗೊಳಿಸಿದೆ.
ಚುನಾವಣೆಗೆ ತಡೆಯಾಜ್ಞೆ ಕೋರಿ ಸಾಮಾಜಿಕ ಹೋರಾಟಗಾರ ಮಹಾದೇವ ದೊಡ್ಡಮನಿ ಎಂಬುವರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಪುರಸ್ಕರಿಸಿದ ಧಾರವಾಡ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಬೈಲಾ ಪ್ರಕಾರ ಸಂಘದ ನೋಂದಣಿ ಇಲ್ಲ. 2003ರಿಂದ ಬೈಲಾ ನವೀಕರಣಗೊಂಡಿಲ್ಲ. ಸಂಘದಲ್ಲಿ ಮೀಸಲಾತಿ ಜಾರಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ತಡೆಯಾಜ್ಞೆ ಕೋರಿ ರಿಟ್ ಅರ್ಜಿ ಸಲ್ಲಿಸಲಾಗಿತ್ತು. ಇದೀಗ ಮೂರು ದಿನದಲ್ಲಿ ಉತ್ತರ ನೀಡುವಂತೆ ಹೈಕೋರ್ಟ್ ಸೂಚಿಸಿದೆ. ನವೆಂಬರ್ 28ರಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಚುನಾವಣೆ ನಿಗದಿಯಾಗಿತ್ತು. ನಾಳೆಯಿಂದ ನಾಮಪತ್ರ ಸಲ್ಲಿಕೆ ಆರಂಭವಾಗಬೇಕಿತ್ತು.
ಇದನ್ನೂ ಓದಿ: ಬಿಟ್ ಕಾಯಿನ್ ತನಿಖೆ ಮಾಡಿದರೆ ಕಾಂಗ್ರೆಸ್ನವರೇ ಸಿಕ್ಕಿ ಬೀಳ್ತಾರೆ: ಸಂಸದ ಪ್ರತಾಪ್ ಸಿಂಹ