ETV Bharat / state

322.46 ಕೋಟಿ ವಾರ್ಷಿಕ ಕ್ರಿಯಾ ಯೋಜನೆಗೆ ಜಿ.ಪಂ. ಅನುಮೋದನೆ - ಧಾರವಾಡ ಜಿಲ್ಲಾ ಪಂಚಾಯತ್

ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಕಳೆದ ಬುಧವಾರ ಕೋರಂ ಅಭಾವದಿಂದ ಮುಂದೂಡಲ್ಪಟ್ಟಿದ್ದ ಸಾಮಾನ್ಯ ಸಭೆಯು ಇಂದು ನಡೆದಿದೆ.

Meeting
Meeting
author img

By

Published : Aug 21, 2020, 11:57 PM IST

ಧಾರವಾಡ: 2020-21ನೇ ಸಾಲಿನ ಜಿಲ್ಲಾ ಪಂಚಾಯತ್ ನ 322.46 ಕೋಟಿ ಮೊತ್ತದ ವಾರ್ಷಿಕ ಕ್ರಿಯಾ ಯೋಜನೆಗೆ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಅನುಮೋದನೆ ದೊರೆಯಿತು.

ಕಳೆದ ವರ್ಷ 312.05 ಕೋಟಿ ರೂ.ಗಳಷ್ಟಿದ್ದ ಕ್ರಿಯಾ ಯೋಜನೆ ಈ ಬಾರಿ ಶೇ 3.34 ರಷ್ಟು ಹೆಚ್ಚಳವಾಗಿದೆ. ಇದಲ್ಲದೆ ಜಿಲ್ಲಾ ಪಂಚಾಯತಿಗಳ ಅನಿರ್ಬಂಧಿತ ಅನುದಾನ 5.11 ಕೋಟಿ ರೂ. ಹಾಗೂ 15ನೇ ಹಣಕಾಸು ಯೋಜನೆಯ 3.41 ಕೋಟಿ ರೂ.ಗಳ ಅನುದಾನದ ಕ್ರಿಯಾ ಯೋಜನೆಗೆ ಇದೇ ಸಂದರ್ಭದಲ್ಲಿ ಸಭೆ ಅನುಮೋದನೆ ನೀಡಿತು.

ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಕಳೆದ ಬುಧವಾರ ಕೋರಂ ಅಭಾವದಿಂದ ಮುಂದೂಡಲ್ಪಟ್ಟಿದ್ದ ಸಾಮಾನ್ಯ ಸಭೆಯು ಇಂದು ಮುಂದುವರೆಯಿತು.

ಅಧ್ಯಕ್ಷೆ ವಿಜಯಲಕ್ಷ್ಮೀ ಕೆಂಪೇಗೌಡ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಂಚಾಯತ ರಾಜ್ ಇಂಜಿನಿಯರಿಂಗ್ ವಿಭಾಗದ ಕಟ್ಟಡ ನಿರ್ವಹಣೆ ಮತ್ತು ದುರಸ್ತಿ, ಹೊಸ ಪೂರೈಕೆ ಹಾಗೂ ವೇತನಕ್ಕೆ ಸೇರಿದ ವೆಚ್ಚ 4.27 ಕೋಟಿ ರೂ. ಹಾಗೂ ಜಿ.ಪಂ. ಕಚೇರಿ ನಿರ್ಮಾಣ ಹಾಗೂ ನಿರ್ವಹಣೆಯ 1.55 ಕೋಟಿ ರೂ. ವೆಚ್ಚದ ಎರಡು ಯೋಜನೆಗಳಿಗೆ ತಾತ್ಕಾಲಿಕವಾಗಿ ಅನುಮೋದನೆ ತಡೆಹಿಡಿದಿರುವುದರಿಂದ ಸದ್ಯ 316.58 ಕೋಟಿ ರೂ.ಗಳ ಉಳಿದ ಎಲ್ಲ ಕ್ರಿಯಾ ಯೋಜನೆಗೆ ಅನುಮೋದನೆ ದೊರೆಯಿತು.

ಈ ಕ್ರಿಯಾ ಯೋಜನೆಯಲ್ಲಿ 79.26 ಕೋಟಿ ರೂ. ವೇತನ ಅನುದಾನ, 243.19 ಕೋಟಿ ರೂ. ವೇತನೇತರ ಅನುದಾನ ಒಳಗೊಂಡಿದೆ. ಇದರಲ್ಲಿ ವೈದ್ಯಕೀಯ ಮತ್ತು ಕುಟುಂಬ ಕಲ್ಯಾಣಕ್ಕೆ 46.63 ಕೋಟಿ ರೂ., ಶಿಕ್ಷಣ 171.85 ಕೋಟಿ ರೂ., ಕ್ರೀಡಾ 2.06 ಕೋಟಿ ರೂ., ಪ.ಜಾ., ಪ.ಪಂ., ಹಿಂದುಳಿದ ವರ್ಗಗಳು, ಅಲ್ಪ ಸಂಖ್ಯಾತರ ಕಲ್ಯಾಣ 67.27 ಕೋಟಿ ರೂ., ಸಸ್ಯ ಸಂಗೋಪನೆ 7.79 ಕೋಟಿ ರೂ., ಭೂಸೌರ, ಜಲ ಸಂರಕ್ಷಣೆ 2.52 ಕೋಟಿ ರೂ., ಪಶು ಸಂಗೋಪನೆ 4.58 ಕೋಟಿ ರೂ., ಅರಣ್ಯ 4.22 ಕೋಟಿ ರೂ., ಗ್ರಾಮೀಣಾಭಿವೃದ್ಧಿ 3.80 ಕೋಟಿ ರೂ., ಗ್ರಾಮೀಣ ಸಣ್ಣ ಉದ್ಯಮ 3.13 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ.

ವೇದಿಕೆಯಲ್ಲಿ ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಶಿವಾನಂದ ಕರಿಗಾರ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಬಿ.ಸಿ. ಸತೀಶ, ಉಪ ಕಾರ್ಯದರ್ಶಿ ಎಸ್.ಎಂ. ಕುಂದೂರ, ಯೋಜನಾ ನಿರ್ದೇಶಕ ಬಿ.ಎಸ್. ಮುಗನೂರ ಮಠ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.