ಧಾರವಾಡ: ಲ್ಯಾಪ್ ಟಾಪ್ ಹಾಗೂ ಸ್ಟೈಫಂಡ್ ಸೇರಿದಂತೆ ವಿವಿಧ ಬೇಡಿಕೆಗೆ ಆಗ್ರಹಿಸಿ ಕರ್ನಾಟಕ ವಿಶ್ವವಿದ್ಯಾನಿಲಯದ ಕುಲಪತಿ ಕಚೇರಿ ಎದುರು ವಿದ್ಯಾರ್ಥಿಗಳು ಪ್ರತಿಭಟನಾ ಧರಣಿ ನಡೆಸಿದರು.
ಎಂಎ ಕೊನೆಯ ವರ್ಷದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡಬೇಕಿತ್ತು. ಆದ್ರೆ ಇದುವರೆಗೂ ನೀಡಿಲ್ಲ ಎಂದ ವಿದ್ಯಾರ್ಥಿಗಳು ಕುಲಪತಿ ವಿರುದ್ದ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕವಿವಿ ಕುಲಪತಿ ಕಚೇರಿ ಎದುರು ನಿನ್ನೆಯಿಂದ ನಡೆಸುತ್ತಿರುವ ಪ್ರತಿಭಟನೆ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಲ್ಯಾಪ್‌ಟಾಪ್ ಹಾಗೂ ಸ್ಟೈಪಂಡ್ ನೀಡುವರೆಗೂ ಪ್ರತಿಭಟನಾ ಧರಣಿ ಮುಂದುವರೆಸುವುದಾಗಿ ಎಚ್ಚರಿಸಿದರು.