ಧಾರವಾಡ: ರಷ್ಯಾ-ಉಕ್ರೇನ್ ಯುದ್ಧ ಹಿನ್ನೆಲೆಯಲ್ಲಿ ಉಕ್ರೇನ್‌ನಲ್ಲಿ ಸಿಲುಕಿರುವ ಫೌಜಿಯಾ ಮನೆಗೆ ಧಾರವಾಡ ಡಿಸಿ ನಿತೇಶ ಪಾಟೀಲ ಭೇಟಿ ನೀಡಿದರು. ಈ ವೇಳೆ ವಿದ್ಯಾರ್ಥಿನಿಯ ತಂದೆಯೊಂದಿಗೆ ಮಾತನಾಡಿ ಸುರಕ್ಷಿತವಾಗಿ ಕರೆತರುವ ಭರವಸೆ ನೀಡಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿ, ಧಾರವಾಡದ ನಾಲ್ವರು ಉಕ್ರೇನ್‌ನಲ್ಲಿ ಸಿಲುಕಿದ್ದಾರೆ. ಓರ್ವ ವಿದ್ಯಾರ್ಥಿನಿ ಯುದ್ಧ ನಡೆಯುತ್ತಿರುವ ಕಾರ್ಕಿವ್‌ದಲ್ಲಿದ್ದಾಳೆ. ಫೌಜಿಯಾ ರೋಮೆನಿಯಾಗೆ ಆಗಮಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಕುಂದಗೋಳದ ಚೈತ್ರಾ ಕಾರ್ಕೀವ್‌ದಲ್ಲಿ ಸಿಲುಕಿದ್ದಾರೆ. ಇನ್ನುಳಿದ ಇಬ್ಬರೂ ಸುರಕ್ಷಿತವಾಗಿದ್ದಾರೆ. ಅವರನ್ನು ಸುರಕ್ಷಿತವಾಗಿ ಕರೆತರುವ ಪ್ರಯತ್ನ ನಡೆದಿದೆ. ಭಾರತೀಯ ರಾಯಭಾರ ಕಚೇರಿಯಿಂದ ಒಳ್ಳೆಯ ವ್ಯವಸ್ಥೆ ಮಾಡಿದ್ದಾರೆ. ಮುಂದಿನ ವಿಮಾನಕ್ಕೆ ಅವರ ಟಿಕೆಟ್ ಸಹ ಬುಕ್ ಆಗುತ್ತಿದೆ ಎಂದರು.
ಇದನ್ನೂ ಓದಿ: ಉಕ್ರೇನ್-ರಷ್ಯಾ ಯುದ್ಧ: ಕ್ರಿಮಿಯಾ ಸಮೀಪದ ಖೆರ್ಸನ್ ನಗರ ವಶಕ್ಕೆ ಪಡೆದ ರಷ್ಯಾ ಸೇನೆ