ಧಾರವಾಡ: ವೃತ್ತಿಯಿಂದ ನಿವೃತ್ತಿ ಹೊಂದಿದರೂ ಪ್ರವೃತ್ತಿಯತ್ತ ಮನಸ್ಸು ಸೆಳೆಯುತ್ತದೆ. ಇದಕ್ಕೆ ಉದಾಹರಣೆ ಎಂಬಂತೆ ಧಾರವಾಡದಲ್ಲಿ ನಿವೃತ್ತ ಪ್ರಾಧ್ಯಾಪಕರೊಬ್ಬರು ಮನೆ ಮೇಲೆ ಗಾರ್ಡನ್ ಮಾಡಿಕೊಂಡು ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಹೌದು, ಧಾರವಾಡದ ಆಕಾಶವಾಣಿ ಬಳಿಯಿರುವ ಗಂಗಯ್ಯ ಹಿರೇಮಠ ಎಂಬ ನಿವೃತ್ತ ಪ್ರಾಧ್ಯಾಪಕ, ತಮ್ಮ ಮನೆಯ ಟೆರೆಸ್ನಲ್ಲಿ ವಿವಿಧ ತಳಿಯ ಸಸ್ಯಗಳನ್ನು ಬೆಳೆಸಿ ಗಾರ್ಡನ್ ಮಾಡಿಕೊಂಡು ನಿವೃತ್ತ ಜೀವನ ಕಳೆಯುತ್ತಿದ್ದಾರೆ.
ಧಾರವಾಡದ ಸುತ್ತಮುತ್ತಲಿನ ಸಸಿಗಳು ಹಾಗೂ ಹೊರ ಜಿಲ್ಲೆ-ರಾಜ್ಯಗಳಿಂದ ಸಸಿಗಳನ್ನು ಖರೀದಿಸಿ, ಟೆರೆಸ್ ಮೇಲೆ ಸುಂದರವಾದ ಗಾರ್ಡನ್ ಮಾಡಿಕೊಂಡಿದ್ದಾರೆ. ಸುಮಾರು 300ಕ್ಕೂ ಹೆಚ್ಚು ತಳಿಯ ಸಸ್ಯಗಳನ್ನು ಬೆಳೆಸಿ, ಪಾಲನೆ-ಪೋಷಣೆ ಮಾಡುತ್ತಿದ್ದಾರೆ.
ಔಷಧೀಯ ಸಸ್ಯಗಳಾದ ರಣಕಲ್ಲಿ, ನೆಲಬೇವು, ಕಸ್ತೂರಿ, ದೊಡ್ಡಪತ್ರಿ ಸೇರಿದಂತೆ ಅರೇಕಾ, ಝಡ್ ಝಡ್ ಪ್ಲಾಂಟ್ಸ್, ಸೆಕ್ಯೂಲಂಟ್ನಂತಹ ತರಹೇವಾರಿ ಸಸಿಗಳನ್ನು ಹವ್ಯಾಸಕ್ಕಾಗಿ ಜೋಪಾನ ಮಾಡುತ್ತಿದ್ದಾರೆ. ಇವರಿಗೆ ಪತ್ನಿ ಮಮತಾ ಸಹ ಕೈಜೋಡಿಸಿದ್ದು, ಅವರು ಸಸಿಗಳನ್ನು ಪೋಷಿಸುತ್ತಿದ್ದಾರೆ.
ಈ ಎಲ್ಲಾ ಸಸಿಗಳಿಗೆ ಬೇಕಾದ ಎರೆಹುಳು ಗೊಬ್ಬರವನ್ನು ದಂಪತಿ ತಾವೇ ಸಿದ್ಧಪಡಿಸಿಕೊಂಡು ಕಸದಿಂದ ರಸ ತೆಗೆಯುತ್ತಿದ್ದಾರೆ. ಒಟ್ಟಿನಲ್ಲಿ ಇರುವ ಸಣ್ಣ ಜಾಗ ಬಳಸಿಕೊಂಡು ಗಾರ್ಡನ್ ಮಾಡಿಕೊಂಡಿರುವ ನಿವೃತ್ತ ಪ್ರಾಧ್ಯಾಪಕ ಮಾದರಿಯಾಗಿದ್ದಾರೆ.
ಇದನ್ನು ಓದಿ: ಐಎಂಎ ಬಹುಕೋಟಿ ವಂಚನೆ ಪ್ರಕರಣ: ರೋಷನ್ ಬೇಗ್ ನಂತರ ಜಮೀರ್ಗೆ ಕಾದಿದ್ಯಾ ಸಂಕಷ್ಟ..?