ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಐದು ವರ್ಷದಲ್ಲಿ 9.69 ಕೋಟಿ ಹೆಚ್ಚಾಗಿದೆ.
ಕುಟುಂಬ ಒಡೆತದನ ಎಲ್ಲ ಸೇರಿ ಒಟ್ಟು 20.22 ಕೋಟಿ ಮೌಲ್ಯದ ಆಸ್ತಿಯನ್ನು ಅವರು ಘೋಷಸಿಕೊಂಡಿದ್ದಾರೆ. 2014 ರ ವಿಧಾನಸಭೆ ಚುನಾವಣೆಯಲ್ಲಿ ಅವರ ಆಸ್ತಿ ಮೌಲ್ಯ 10.53 ಕೋಟಿ ಇತ್ತು. 2018 ರ ವಿಧಾನಸಭೆ ಚುನಾವಣೆಯಲ್ಲಿ 18.44 ಕೋಟಿಗೆ ಏರಿಕೆಯಾಗಿತ್ತು.
ಪತ್ನಿ ಶಿವಲೀಲಾ ಅವರ ಹೆಸರಿನಲ್ಲಿ 2.57 ಕೋಟಿ ಚರಾಸ್ತಿ ಇದೆ. ಪುತ್ರಿ ವೈಶಾಲಿ ಹೆಸರಿನಲ್ಲಿ 17.91 ಲಕ್ಷ, ಇನ್ನೋರ್ವ ಪುತ್ರಿ ದೀಪಾ ಹೆಸರಿನಲ್ಲಿ17.73 ಲಕ್ಷ, ಪುತ್ರ ಹೇಮಂತ ಹೆಸರಿನಲ್ಲಿ 5.10 ಲಕ್ಷದ ಚರಾಸ್ತಿ ಇದೆ.
3.75 ಕೋಟಿ ಹಣವನ್ನ ವಿನಯ್ ಡೈರಿ, ವಿಶಾಲ ಲಾಜಿಸ್ಟಿಕ್ ಮತ್ತು ವಿನಯ ಗೋಟ್ ಫಾರ್ಮ್ ಮೇಲೆ ಹೂಡಿಕೆ ಮಾಡಿದ್ದಾರೆ.
ಯಾವುದೇ ಸಾಲ ಅಥವಾ ಆದಾಯ ತೆರಿಗೆ ಬಾಕಿ ಉಳಿಸಿಕೊಂಡಿಲ್ಲ ಎಂದು ಅಫಿಡವಿಟ್ನಲ್ಲಿ ವಿನಯ್ ಕುಲಕರ್ಣಿ ತಿಳಿಸಿದ್ದಾರೆ.