ಧಾರವಾಡ: ತೇಗೂರ ಚೆಕ್ ಪೋಸ್ಟ್ನಲ್ಲಿ ಸರಕು ವಾಹನದಲ್ಲಿ ಸಾಗುತ್ತಿದ್ದ ಮಹಾರಾಷ್ಟ್ರ ರಾಯಗಡದ ಆದಿವಾಸಿ ಜನಾಂಗದ ವಲಸೆ ಕಾರ್ಮಿಕರನ್ನ ಜಿಲ್ಲಾಧಿಕಾರಿ ದೀಪಾ ಚೋಳನ್ ವಿಶೇಷ ಆಸಕ್ತಿ ವಹಿಸಿ, ಪ್ರತ್ಯೇಕ ಕೆಎಸ್ಆರ್ಟಿಸಿ ಬಸ್ ಮೂಲಕ ಕಳುಹಿಸಲು ವ್ಯವಸ್ಥೆ ಮಾಡಿದ್ದಾರೆ.
ಉಪ ವಿಭಾಗಾಧಿಕಾರಿ ಮಹಮ್ಮದ್ ಜುಬೇರ ಮತ್ತು ತಹಶೀಲ್ದಾರ್ ಸಂತೋಷ ಬಿರಾದರ ನೇತೃತ್ವದಲ್ಲಿ ಧಾರವಾಡದ ದಾಸನಕೊಪ್ಪ ಸರ್ಕಲ್ ಹತ್ತಿರವಿರುವ ಪಟ್ಟಣಶಟ್ಟಿ ಕಲ್ಯಾಣ ಮಂಟಪದಲ್ಲಿ ವಲಸೆ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ.
ಅವರಿಗೆ ಬೇಕಾದ ಆಹಾರ ಪೂರೈಕೆ ಮಾಡಿ, ಮಕ್ಕಳಿಗೆ ಬಿಸ್ಕತ್ ವಿತರಿಸಿದ ಬಳಿಕ ಇಂದು ಸಂಜೆ ಬಸ್ ರಾಯಗಡಕ್ಕೆ ಹೊರಡಲಿದೆ.