ETV Bharat / state

ನಾಳೆ ವಿಧಾನಸಭೆ ಚುನಾವಣೆ ಹಿನ್ನೆಲೆ: ಮಸ್ಟರಿಂಗ್ ಕಾರ್ಯ ಪರಿಶೀಲಿಸಿದ ಜಿಲ್ಲಾಧಿಕಾರಿ - dharwad

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಂದು ಮಸ್ಟರಿಂಗ್​​ ಕಾರ್ಯವನ್ನು ಪರಿಶೀಲಿಸಿ ಸಿಬ್ಬಂದಿಗೆ ಮಾಹಿತಿ ನೀಡಿದರು.

dharwad-dc-inspected-the-mustering-work
ನಾಳೆ ವಿಧಾನಸಭೆ ಚುನಾವಣೆ ಹಿನ್ನೆಲೆ: ಮಸ್ಟರಿಂಗ್ ಕಾರ್ಯ ಪರಿಶೀಲಿಸಿದ ಜಿಲ್ಲಾಧಿಕಾರಿ
author img

By

Published : May 9, 2023, 5:58 PM IST

ಧಾರವಾಡ ಜಿಲ್ಲೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಗುರುದತ್ ಹೆಗಡೆ

ಧಾರವಾಡ: ನಾಳೆ ವಿಧಾನಸಭೆ ಚುನಾವಣಾ ಮತದಾನದ ಹಿನ್ನೆಲೆ ಧಾರವಾಡ ಜಿಲ್ಲೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಗುರುದತ್ತ ಹೆಗಡೆ ಅವರು ಇಂದು ಮಸ್ಟರಿಂಗ್ ಕಾರ್ಯವನ್ನು ಪರಿಶೀಲನೆ ನಡೆಸಿದರು. ಧಾರವಾಡ ಬಾಸೆಲ್ ಮಿಷನ್ ಶಾಲೆಗೆ ಭೇಟಿ ನೀಡಿದ ಅವರು ಮತಗಟ್ಟೆಗೆ ತೆರಳುವ ಸಿಬ್ಬಂದಿಗಳಿಗೆ ಅವಶ್ಯಕ ಮಾಹಿತಿ ನೀಡಿದರು.

ಪರಿಶೀಲನೆ ಬಳಿಕ‌ ಮಾತನಾಡಿದ ಅವರು, ಜಿಲ್ಲೆ 7 ಕ್ಷೇತ್ರಗಳಲ್ಲಿ ಮಸ್ಟರಿಂಗ್ ಕಾರ್ಯ ನಡೆದಿದೆ. ಧಾರವಾಡ ಜಿಲ್ಲೆಯಲ್ಲಿ ಸುಮಾರು 15 ಲಕ್ಷಕ್ಕೂ ಹೆಚ್ಚು ಮತಗಳಿವೆ. 1642 ಮತಗಟ್ಟೆಗಳಿವೆ. ಎಲ್ಲ ಮತಗಟ್ಟೆಗಳಲ್ಲು ಕನಿಷ್ಠ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್​​ ಇನ್ನಿತರ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಈ ಬಾರಿ ಬಿಸಿಲಿನ ತಾಪಮಾನ ಹೆಚ್ಚಾಗಿದೆ. ಹೀಗಾಗಿ ಪ್ರತಿ ಮತಗಟ್ಟೆಯಲ್ಲಿ ವಿಶ್ರಾಂತಿ ಕೊಠಡಿ ತೆರೆಯಲಾಗಿದೆ. ನಗರದ ಪ್ರದೇಶದಲ್ಲಿ ಕ್ಯೂ ಹೆಚ್ಚಾಗುವ ಮತಗಟ್ಟೆಯ ಹೊರಗೆ ಶಾಮಿಯಾನ ಹಾಕಲಾಗುವುದು ಎಂದು ಹೇಳಿದರು.

ಕಳೆದ ಚುನಾವಣೆಯಲ್ಲಿ ನಗರ ಪ್ರದೇಶದಲ್ಲಿ ಕಡಿಮೆ ಮತದಾನ ಆಗಿದೆ. ಈ ಸಲ ಮತದಾನ ಹೆಚ್ಚಿಸಲು ಕ್ರಮ ವಹಿಸಲಾಗಿದೆ. ಮತ ಹಾಕದೇ ಇರೋದಕ್ಕೆ ಯಾವುದೇ ಕಾರಣ ಇಲ್ಲ, ಯಾವುದೇ ಅಭ್ಯರ್ಥಿ ಮೇಲೆ ಭರವಸೆ ಇಲ್ಲದಿದ್ದಲ್ಲಿ ನೋಟಾ ಅವಕಾಶ ಇದೆ.‌ ಹೀಗಾಗಿ ಎಲ್ಲರೂ ಮತದಾರರು ಮತಗಟ್ಟೆಗೆ ಬಂದು ಮತ ಹಾಕಬೇಕು ಎಂದು ಮನವಿ ಮಾಡಿಕೊಂಡರು. ಸೈಕ್ಲೋನ್ ಎಫೆಕ್ಟ್ ಸೂಚನೆ ಸಿಕ್ಕಿದೆ. ಅದಕ್ಕೆ ತಕ್ಕಂತೆ ಜಾಗೃತಿ ವಹಿಸಲಾಗಿದೆ. ಮತ ಸಾಮಗ್ರಿಗಳ ಜೊತೆಗೆ ಪ್ಲಾಸ್ಟಿಕ್ ಕವರ್ ಕೊಡಲಾಗಿದೆ.‌ ಜಿಲ್ಲೆಗೆ 22 ಕೇಂದ್ರ ಭದ್ರತಾ ಪಡೆಯ ತುಕಡಿ ಬಂದಿವೆ. ಇದರೊಂದಿಗೆ 2 ಸಾವಿರ ಪೊಲೀಸ್ ಸಿಬ್ಬಂದಿ ಮತ್ತು ಮೀಸಲು ಪಡೆಯ ಪೊಲೀಸರೂ ಇರುತ್ತಾರೆ. ಎಲ್ಲ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದರು.

ಇದನ್ನೂ ಓದಿ: ನಾಳೆ ಪ್ರಜಾ ತೀರ್ಪು! ಗಡಿಭಾಗಗಳಲ್ಲಿ ಪೊಲೀಸರಿಂದ ಕಟ್ಟೆಚ್ಚರ, ನಕಲಿ ಮತದಾನಕ್ಕೆ ಅವಕಾಶವಿಲ್ಲ

ಹಾವೇರಿಯಲ್ಲಿ ಭರದಿಂದ ಸಾಗಿದ ಮಸ್ಟರಿಂಗ ಕಾರ್ಯ: ಜಿಲ್ಲಾ ಚುನಾವಣಾಧಿಕಾರಿ ರಘುನಂದನ್​​ ಮೂರ್ತಿ ಅವರು ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 13,02,683 ಮತದಾರರಿದ್ದು, 1,471 ಮತಗಟ್ಟೆಗಳು ಮತ್ತು 6,476 ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ರಾಜ್ಯದಲ್ಲಿ ಒಟ್ಟು ₹375.60 ಕೋಟಿ ಮೌಲ್ಯದ ನಗದು, ವಸ್ತುಗಳ ವಶ

6,65,617 ಪುರುಷ ಮತದಾರರು, 6,37,019 ಮಹಿಳಾ ಮತದಾರರು ಮತ್ತು 47 ಇತರೆ ಮತದಾರರಿದ್ದು, ಅತಿ ಹೆಚ್ಚು ಮತದಾನ ಆಗಬೇಕೆಂದು ನಮ್ಮ ತಂಡ ಕೆಲಸ ಮಾಡುತ್ತಿದೆ, ಪ್ರತಿಯೊಂದು ಮತಗಟ್ಟೆ ಕೇಂದ್ರಗಳಲ್ಲಿ ವೇಟಿಂಗ್ ರೂಂ ಸ್ಥಾಪಿಸಲಾಗಿದೆ. ಚಿಕ್ಕ ಮಕ್ಕಳೊಂದಿಗೆ ಮತದಾನ ಮಾಡಲು ಬರುವವರಿಗೆ ಅನಕೂಲ ಆಗಲೆಂದು ಚೈಲ್ಡ್ ಕೇರ್ ಸೆಂಟರ್​​ಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ಮತದಾನಕ್ಕೆ ಅಂತಿಮ ಹಂತದ ಸಿದ್ಧತೆ: ಮತಯಂತ್ರದೊಂದಿಗೆ ಮತಗಟ್ಟೆಗೆ ತೆರಳಿದ ಚುನಾವಣಾ ಸಿಬ್ಬಂದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.