ಧಾರವಾಡ: ಆತ ಇನ್ನೂ 6ನೇ ತರಗತಿ, ಆದ್ರೆ ಜ್ಞಾನ ಮಾತ್ರ ಅಗಾಧ. ನಗರದ ಬಾಲಕನೋರ್ವ 1,100 ಸಾಮಾನ್ಯ ಜ್ಞಾನ ಪ್ರಶ್ನೆಗಳಿಗೆ ಫಟಾ ಫಟ್ ಉತ್ತರಿಸುವ ಮೂಲಕ ಕರ್ನಾಟಕ ಅಚೀವರ್ ಬುಕ್ ಆಫ್ ರೆಕಾರ್ಡ್ನಲ್ಲಿ ಹೆಸರು ಮಾಡಿದ್ದಾನೆ.
ಸಮರ್ಥ ಮಹೇಶ್ ಪ್ರಸಾದ್ ಎಂಬಾತ ತನ್ನ ಅಗಾಧ ನೆನಪಿನ ಶಕ್ತಿಯಿಂದ ಬರೋಬ್ಬರಿ 1,100 ಜಿಕೆ ಪ್ರಶ್ನೆಗಳಿಗೆ ಉತ್ತರಿಸುವುದಷ್ಟೇ ಅಲ್ಲದೆ, 10 ನಿಮಿಷದಲ್ಲಿ 110 ಸಂಸ್ಕೃತ ಶ್ಲೋಕಗಳನ್ನು ಹೇಳುವ ಮೂಲಕ ಕರ್ನಾಟಕ ಅಚೀವರ್ ಬುಕ್ ಆಫ್ ರೆಕಾರ್ಡ್ನಲ್ಲಿ ಹೆಸರು ದಾಖಲಿಸಿದ್ದಾನೆ.
ಗ್ಲೋಬಲ್ ಆಫ್ ಎಕ್ಸಲೆನ್ಸ್ ಸ್ಕೂಲ್ನಲ್ಲಿ 6ನೇ ತರಗತಿ ಓದುತ್ತಿರುವ ಸಮರ್ಥ, ಶಾಲಾ ವಿದ್ಯಾಭ್ಯಾಸದ ಜೊತೆ ಜೊತೆಗೆ ಪ್ರತಿದಿನ ಒಂದು ಗಂಟೆ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳನ್ನು ಓದುತ್ತಾನೆ.
ಮಗನ ನೆನಪಿನ ಶಕ್ತಿಯನ್ನು ಗುರುತಿಸಿದ ಅವರ ತಾಯಿ ಜ್ಯೋತಿ ಮಹೇಶ್ ಪ್ರಸಾದ್, ಪ್ರತಿದಿನ ಸಮರ್ಥ್ಗೆ ಜಿಕೆ ಹೇಳಿ ಕೊಡುತ್ತಾರಂತೆ. ಪುತ್ರನ ಈ ಸಾಧನೆ ಕುಟುಂಬಸ್ಥರಿಗೆ ಹೆಮ್ಮೆ ತಂದಿದೆ.