ಧಾರವಾಡ: ನಗರದ ನುಗ್ಗಿಕೇರಿ ಬಳಿ ಜೊಮ್ಯಾಟೋ ಡೆಲಿವರಿ ಬಾಯ್ ಮೇಲೆ ಎಂಟರಿಂದ ಹತ್ತು ಮಂದಿ ತಂಡವೊಂದು ಮಾರಣಾಂತಿಕ ಹಲ್ಲೆ ನಡೆಸಿದೆ ಎಂಬ ಆರೋಪ ಕೇಳಿ ಬಂದಿದೆ.
ಶ್ರೀರಾಮನಗರದ ಕಿರಣ್ ಕಲಘಟಗಿ ಹಲ್ಲೆಗೊಳಗಾದ ಯುವಕ. ಸದ್ಯಕ್ಕೆ ಈತ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆರ್ಡರ್ ಡೆಲಿವರಿ ಮಾಡಿ ಬರುವಾಗ ಹಲ್ಲೆ ನಡೆಸಿ ಮೊಬೈಲ್ ಹಾಗೂ ಹತ್ತು ಸಾವಿರ ನಗದು ಕಿತ್ತುಕೊಂಡು ದುಷ್ಕರ್ಮಿಗಳು ಪರಾರಿಯಾಗಿದ್ದಾರಂತೆ. ಇನ್ನು ಜಗಳ ಬಿಡಿಸಲು ಬಂದ ಸ್ನೇಹಿತನ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಕಿರಣ್ ಆರೋಪಿಸಿದ್ದಾನೆ.
ಈ ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.