ETV Bharat / state

ನನ್ನ ಮೇಲಿನ ಆರೋಪ ಸತ್ಯಕ್ಕೆ ದೂರ: ಕೃವಿವಿ ಕುಲಪತಿ

ಧಾರವಾಡ ಕೃಷಿ ವಿವಿ ಕುಲಪತಿ ಪ್ರೊ. ಎಂ. ಬಿ. ಚೆಟ್ಟಿ ತಮ್ಮ ‌ಮೇಲೆ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಮಾಡಿರುವ ಆರೋಪ ಸುಳ್ಳು ಎಂದು ತಿಳಿಸಿದ್ದಾರೆ.

university
ಧಾರವಾಡ
author img

By

Published : Oct 3, 2020, 1:29 PM IST

ಧಾರವಾಡ: ನನ್ನ ಮೇಲೆ ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾಗಿವೆ ಎಂದು ಕೃವಿವಿ ಕುಲಪತಿ ಪ್ರೊ. ಎಂ. ಬಿ. ಚೆಟ್ಟಿ ಹೇಳಿದ್ದಾರೆ.

ಧಾರವಾಡ
ಕೃಷಿ ವಿವಿ ಕುಲಪತಿ ಪ್ರೊ. ಎಂ. ಬಿ. ಚೆಟ್ಟಿ ಅವರ ‌ಮೇಲೆ ಕ್ರಿಮಿನಲ್ ಮೊಕದ್ದಮೆಗಳಿವೆ. ಅವರನ್ನು ಹುದ್ದೆಯಿಂದ ಕೆಳಗಿಳಿಸಬೇಕು ಎಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಗಂಭೀರ ಆರೋಪ ಮಾಡಿದ್ದರು. ಈ ಕುರಿತು ಮಾತನಾಡಿರುವ ಪ್ರೊ. ಎಂ. ಬಿ. ಚೆಟ್ಟಿ , 409 ಜನ 'ಡಿ' ಗ್ರೂಪ್​ ನೌಕರರ ನೇಮಕಾತಿ ವೇಳೆ ಸರ್ಕಾರದ ಆದೇಶ ಧಿಕ್ಕರಿಸಿಲ್ಲ, ನಾನು ರಿಜಿಸ್ಟರ್ ಆಗಿದ್ದ ಸಂದರ್ಭದಲ್ಲಿ ಸಹಿ ಮಾಡಿದ್ದೆ. ರಿಜಿಸ್ಟರ್ ಸಹಿ ಮಾಡಬೇಕಾದ್ರೆ ಅಲ್ಲಿ ಬೋರ್ಡ್ ಸಹಿ ಆಗಿರುತ್ತದೆ. ಕುಲಪತಿ ಸಹಿ ಆಗಿರುತ್ತದೆ ಆ ಮೇಲೆ ರಿಜಿಸ್ಟರ್ ಸಹಿ ಆಗುತ್ತದೆ. ಅದನ್ನೆಲ್ಲಾ ಬೋರ್ಡ್ ತೀರ್ಮಾನಿಸಿರುತ್ತದೆ. ಹೀಗಾಗಿ ನನ್ನ ಮೇಲೆ ಮಾಡಿರುವ ಆರೋಪಗಳು ಸತ್ಯಕ್ಕೆ‌ ದೂರವಾಗಿವೆ ಎಂದು ಸ್ಪಷ್ಟಪಡಿಸಿದ್ದಾರೆ.ಅವರು ತಪ್ಪು ಮಾಹಿತಿ ನೀಡಿದ್ದಾರೆ. ಕೃವಿವಿಯಲ್ಲಿನ ನೈಜಸ್ಥಿತಿ ಅವರಿಗೆ ಗೊತ್ತಿಲ್ಲ. ಕೃವಿವಿಗಾಗಿ 20-30 ವರ್ಷಗಳ ಕಾಲ ದುಡಿದ 409 ಜನರು ಇದೀಗ ನರಕವೇದನೆ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.