ETV Bharat / state

ಧಾರಾವಾಡದಲ್ಲಿ ಕುಸಿದ ಸರ್ಕಾರಿ ಶಾಲಾ ಕಟ್ಟಡ ಹಾಗೂ ಮನೆಗಳು

ನವಲಗುಂದ ತಾಲೂಕಿನ ವ್ಯಾಪ್ತಿಯಲ್ಲಿ ಬೆಣ್ಣೆಹಳ್ಳ ಹಾಗೂ ತುಪ್ಪರಿಹಳ್ಳಗಳ ನೀರು ಹರಿಯುವ ಪ್ರಮಾಣದಲ್ಲಿ ನಿರಂತರವಾಗಿ ಏರಿಕೆಯಾಗುತ್ತಲೇ ಇರುವುದರಿಂದ ತಗ್ಗು ಪ್ರದೇಶಗಳ ಜನರು ಕೂಡಲೇ ಸುರಕ್ಷಿತ ಸ್ಥಳಗಳಿಗೆ ತೆರಳಲು ಜಿಲ್ಲಾಡಳಿತ ಸೂಚಿಸಿದೆ.

ಸರ್ಕಾರಿ ಶಾಲೆ
author img

By

Published : Aug 9, 2019, 1:34 PM IST

ಧಾರವಾಡ: ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸರ್ಕಾರಿ ಶಾಲೆ, ಮನೆಗಳು ಕುಸಿದು ಬಿದ್ದಿವೆ. ಜಿಲ್ಲಾಧಿಕಾರಿಗಳು ತುರ್ತು ಸಭೆ ಕರೆದಿದ್ದು ಪ್ರವಾಹ ಪೀಡಿತರಿಗೆ ನೆರವಾಗುವಂತೆ ಸೂಚಿಸುತ್ತಿದ್ದಾರೆ.

ಕುಸಿದ ಸರ್ಕಾರಿ ಶಾಲಾ ಕಟ್ಟಡ

ಸುರಕ್ಷಿತ ಸ್ಥಳಗಳಿಗೆ ತೆರಳಲು ಜಿಲ್ಲಾಡಳಿತ ಸೂಚನೆ :

ಜಿಲ್ಲೆಯ ನವಲಗುಂದ ತಾಲೂಕಿನ ವ್ಯಾಪ್ತಿಯಲ್ಲಿ ಬೆಣ್ಣೆಹಳ್ಳ ಹಾಗೂ ತುಪ್ಪರಿಹಳ್ಳಗಳ ನೀರು ಹರಿಯುವ ಪ್ರಮಾಣದಲ್ಲಿ ನಿರಂತರವಾಗಿ ಏರಿಕೆಯಾಗುತ್ತಲೇ ಸಾಗುತ್ತಿರುವುದರಿಂದ ಕೆಳಭಾಗದ ಪ್ರದೇಶಗಳ ಜನರು ಕೂಡಲೇ ಸುರಕ್ಷಿತ ಸ್ಥಳಗಳಿಗೆ ತೆರಳಲು ಜಿಲ್ಲಾಡಳಿತ ಸೂಚಿಸಿದೆ. ಗ್ರಾಮಗಳ ಜನರು ಸುರಕ್ಷಿತ ಸ್ಥಳಗಳಿಗೆ ಅಥವಾ ಸ್ಥಳೀಯ ಕಂದಾಯ ಅಧಿಕಾರಿಗಳಿಗೆ, ಗ್ರಾ ಪಂ ಅಭಿವೃದ್ಧಿ ಅಧಿಕಾರಿಗಳಿಗೆ ಸಂಪರ್ಕಿಸಿ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆಯಲು ಸೂಚಿಸಿ ಸಾರ್ವಜನಿಕ ಡಂಗುರ ಸಾರಿಸಲಾಗುತ್ತಿದೆ ಎಂದು ಅತಿವೃಷ್ಟಿ ನೋಡಲ್ ಅಧಿಕಾರಿ ಸದಾಶಿವ ಮರ್ಜಿ ತಿಳಿಸಿದ್ದಾರೆ.

ಪೆಟ್ರೋಲ್​-ಡೀಸೆಲ್​ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಿಲ್ಲ:

ಮಳೆಯ ಕಾರಣದಿಂದ ಪೆಟ್ರೋಲ್, ಡೀಸೆಲ್ ಇಂಧನಗಳ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ. ಐಪಿಸಿ, ಬಿಪಿಸಿ ಹಾಗೂ ಐಒಸಿ ಮೂರು ಇಂಧನ ಕಂಪನಿಗಳ ಸ್ಥಳೀಯ ಸ್ಥಾವರಗಳಲ್ಲಿ ಸಾಕಷ್ಟು ತೈಲ ಸಂಗ್ರಹವಿದೆ. ಸರಬರಾಜಿಗೆ ವಾಹನಗಳೂ ಲಭ್ಯ ಇವೆ. ಗ್ರಾಹಕರಿಗೆ ಯಾವುದೇ ತೊಂದರೆಯಾಗುವುದಿಲ್ಲ ಈ ಬಗ್ಗೆ ಹರಡಿರುವ ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸರ್ಕಾರಿ ಶಾಲೆ ಕುಸಿತ :

ಸಲಕಿನಕೊಪ್ಪ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಕಟ್ಟಡ ನೆಲ ಕಚ್ಚಿದ್ದು, ಇನ್ನೂ ಎರಡು ಮೂರು ಶಾಲಾ ಕಟ್ಟಡಗಳು ಬೀಳುವ ಹಂತದಲ್ಲಿವೆ.

ಹೂಲಿಕೇರೆ ಕಟ್ಟೆ ಒಡೆಯುವ ಸಾಧ್ಯತೆ :

ಅಳ್ನಾವರ ಪಟ್ಟಣದ ಹತ್ತರವಿರುವ ಹೂಲಿಕೇರೆ ಸಂಪೂರ್ಣ ಭರ್ತಿಯಾಗಿ ಅಪಾಯದಮಟ್ಟ ಮೀರಿ ಹರಿಯುತ್ತಿದೆ. ಕೆರೆಗೆ ನೀರು ಬರುವ ಹರಿವು ಕಡಿಮೆಯಾಗದಿದ್ದರೆ. ಕೆರೆಯ ಕಟ್ಟೆ ಒಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಡಿಸಿ ತುರ್ತು ಸಭೆ :

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ತುರ್ತು ಸಭೆ ನಡೆಸಿರುವ ಡಿಸಿ ದೀಪಾ ಚೋಳನ್​, ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಮನವೊಲಿಸಿ ಮುಂಜಾಗ್ರತೆಯ ಕ್ರಮವಾಗಿ ಸಮೀಪದ ಪರಿಹಾರ ಕೇಂದ್ರಗಳಿಗೆ ತಾತ್ಕಾಲಿಕವಾಗಿ ಸ್ಥಳಾಂತರಿಸಬೇಕು. ಸಹಾಯವಾಣಿಯಲ್ಲಿ ಸ್ವೀಕರಿಸಲಾಗುವ ಎಲ್ಲಾ ದೂರುಗಳಿಗೆ ಸ್ಪಂದಿಸಲು ನೇಮಿಸಲಾದ ಅಧಿಕಾರಿಗಳು ಸಮರ್ಪಕವಾಗಿ ಸಮನ್ವಯ ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದ್ದಾರೆ.

ಪರಿಹಾರ ಕೇಂದ್ರಗಳಲ್ಲಿ ಕೆಎಂಎಫ್ ಮೂಲಕ ಹಾಲು, ಬಿಸ್ಕೆಟ್, ಸಿದ್ಧ ಆಹಾರ ಒದಗಿಸಬೇಕು . ಆರೋಗ್ಯ ಇಲಾಖೆಯು ಖಾಸಗಿ ವೈದ್ಯರು, ಆಸ್ಪತ್ರೆಗಳ ನೆರವು ಪಡೆದು ಔಷಧ, ಚಿಕಿತ್ಸೆಗಳನ್ನು ಒದಗಿಸಬೇಕು ಅಧಿಕಾರಿಗಳಿಗೆ ತಿಳಿಸಿದ್ದಾರೆ.

Intro:ಧಾರವಾಡ: ಸತತವಾಗಿ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯ ನವಲಗುಂದ ತಾಲೂಕಿನ ವ್ಯಾಪ್ತಿಯಲ್ಲಿ ಬೆಣ್ಣೆಹಳ್ಳ ಹಾಗೂ ತುಪ್ಪರಿಹಳ್ಳಗಳ ನೀರು ಹರಿಯುವ ಪ್ರಮಾಣದಲ್ಲಿ ನಿರಂತರವಾಗಿ ಏರಿಕೆಯಾಗುತ್ತಲೇ ಸಾಗುತ್ತಿರುವುದರಿಂದ ಕೆಳಭಾಗದ ಪ್ರದೇಶಗಳ ಜನರು ಕೂಡಲೇ ಸುರಕ್ಷಿತ ಸ್ಥಳಗಳಿಗೆ ತೆರಳಲು ಜಿಲ್ಲಾಡಳಿತ ಸೂಚಿಸಿದೆ.Body:ಆರೇ ಕುರಹಟ್ಟಿ, ಯಮನೂರು, ಆಯಟ್ಟಿ, ಮೊರಬ, ನವಲಗುಂದ ಪಟ್ಟಣದ ಅಂಬೇಡ್ಕರ್ ನಗರ ಸೇರಿದಂತೆ ಹಳ್ಳ ಹರಿಯುವ ವಿವಿಧ ಗ್ರಾಮಗಳ ಜನರು ಸುರಕ್ಷಿತ ಸ್ಥಳಗಳಿಗೆ ಅಥವಾ ಸ್ಥಳೀಯ ಕಂದಾಯ ಅಧಿಕಾರಿಗಳಿಗೆ, ಗ್ರಾ ಪಂ ಅಭಿವೃದ್ಧಿ ಅಧಿಕಾರಿಗಳಿಗೆ ಸಂಪರ್ಕಿಸಿ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆಯಲು ಸೂಚಿಸಿ ಸಾರ್ವಜನಿಕ ಡಂಗುರ ಸಾರಿಸಲಾಗುತ್ತಿದೆ ಎಂದು ಅತಿವೃಷ್ಟಿ ನೋಡಲ್ ಅಧಿಕಾರಿ ಸದಾಶಿವ ಮರ್ಜಿ ತಿಳಿಸಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.