ETV Bharat / state

ಗಾಂಜಾ ಮಾರಾಟ: ನಾಲ್ವರು ಆರೋಪಿಗಳ ಬಂಧನ - Dharwad Suburban Police Station

ಧಾರವಾಡದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

sdsa
ನಾಲ್ವರು ಆರೋಪಿಗಳ ಬಂಧನ
author img

By

Published : Sep 15, 2020, 10:06 AM IST

ಧಾರವಾಡ: ಗಾಂಜಾ ಮಾರಾಟದಲ್ಲಿ ತೊಡಗಿದ್ದ ನಾಲ್ವರು ಆರೋಪಿಗಳನ್ನು ಉಪನಗರ ಪೊಲೀಸರು ಬಂಧಿಸಿ 20 ಸಾವಿರ ಮೌಲ್ಯದ 1,074 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದಾರೆ.

ಸಮೀವುಲ್ಲಾ ಹುಬ್ಬಳ್ಳಿ (22), ಝಡ್ಸನ್ ಮಿರಜಕರ್, (25), ದಾನೇಶ್ವರಿ ನಗರದ ಸಂಗಮೇಶ ಅಂಗಡಿ (23) ಹಾಗೂ ಗರಗ ನಿವಾಸಿ ಮಂಜುನಾಥ ಜಂತ್ಲಿ (23) ಬಂಧಿತ ಆರೋಪಿಗಳು. ನಾರಾಯಣಪುರದ ಎಲ್‌ಐಸಿ ಕ್ವಾಟರ್ಸ್ ಹತ್ತಿರದ ಗಾರ್ಡನ್​ ರಸ್ತೆ ಬಳಿ ಮಾದಕ ವಸ್ತು ಮಾರಾಟ ವಿಷಯದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳಿಂದ ನಾಲ್ಕು ಮೊಬೈಲ್, ಎರಡು ದ್ವಿಚಕ್ರ ವಾಹನ ರೂ. 420 ನಗದು ವಶಕ್ಕೆ ಪಡೆದುಕೊಳ್ಳಲಾಗಿದೆ. ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.