ಧಾರವಾಡ: ಜಿಲ್ಲೆಯಲ್ಲಿ ನಿನ್ನೆ (ಮಾ.18) ಸುರಿದ ಅಕಾಲಿಕ ಮಳೆಯಿಂದ ಫಸಲಿಗೆ ಬಂದಿದ್ದ ಬೆಳೆ ನೆಲಕಚ್ಚಿದೆ. ತಾಲೂಕಿನ ಪುಡಕಲಕಟ್ಟಿ ಗ್ರಾಮದ ರೈತರೊಬ್ಬರ ಬಾಳೆ ತೋಟ ಸಂಫೂರ್ಣವಾಗಿ ಹಾನಿಯಾಗಿದೆ.
ರೈತ ಮಂಜುನಾಥ ತರ್ಲಘಟ್ಟಿ ಎಂಬುವವರಿಗೆ ಸೇರಿದ 3 ಎಕರೆ ಬಾಳೆ ತೋಟವು ಮಳೆಯ ಅಬ್ಬರಕ್ಕೆ ನೆಲಕಚ್ಚಿದ್ದು, ಅಂದಾಜು ₹ 8 ಲಕ್ಷ ಮೌಲ್ಯ ಬೆಳೆ ನಷ್ಟವಾಗಿದೆ.
ಪ್ರವಾಹದಿಂದ ಕಂಗಾಲಾಗಿದ್ದ ರೈತರು ಈಚೆಗಷ್ಟೇ ಸುಧಾರಿಸಿಕೊಳ್ಳುತ್ತಿದ್ದರು. ಗಾಯದ ಮೇಲೆ ಬರೆ ಎಳೆದಂತೆ ಅಕಾಲಿಕ ಮಳೆಯಿಂದಾಗಿ ಲಕ್ಷಾಂತರ ರೂಪಾಯಿ ಬೆಳೆ ನಾಶವಾಗಿದೆ. ಸರ್ಕಾರ ಕೂಡಲೇ ಪರಿಹಾರ ನೀಡುವಂತೆರ ರೈತರು ಆಗ್ರಹಿಸಿದ್ದಾರೆ.