ETV Bharat / state

ಮಾಜಿ ಸಚಿವ ವಿನಯ್​ ಕುಲಕರ್ಣಿಗೆ ಟಾಂಗ್ ಕೊಟ್ಟ ಶಾಸಕ ಅಮೃತ್ ದೇಸಾಯಿ - ಮಾಜಿ ಸಚಿವ ವಿನಯ ಕುಲಕರ್ಣಿ

ಸಿದ್ದರಾಮಯ್ಯ ಅವರೇ ಅರಿವು ಮರೆವು ಇರುವುದು ನಮಗಲ್ಲ, ನಿಮಗೆ. ವಿಧಾನಸಭೆಯಲ್ಲಿ ಪಂಚೆ ಕಳಚಿ ಬಿದ್ದರೂ ಗೊತ್ತಾಗದ ನಿಮಗೆ ಅರಿವು ಮರೆವು ಇರುವುದು ಎಂದು ಸಿದ್ದರಾಮಯ್ಯ ವಿರುದ್ಧ ದೇಸಾಯಿ ಆಕ್ರೋಶ ವ್ಯಕ್ತಪಡಿಸಿದರು.

MLA Amrit Desai
ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ್ ದೇಸಾಯಿ
author img

By

Published : Oct 16, 2022, 7:51 PM IST

ಧಾರವಾಡ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರಿಗೆ ಟಾಂಗ್​ ನೀಡಿರುವ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ್ ದೇಸಾಯಿ, ಅರಿವು ಮರೆವು ಹಾಗೂ ಕುಂಟುವಂತ ಸರ್ಕಾರ ಎಂದು ಸಿದ್ದರಾಮಯ್ಯ ಹೇಳ್ತಾರೆ. ಅದೇ ಅರಿವು ಮರೆವು ಸರ್ಕಾರ ಜನರ ಅಭಿವೃದ್ಧಿಗೆ ಕೋಟಿ ಕೋಟಿ ಕೋಟಿ ಖರ್ಚು ಮಾಡಿದ್ದು, ಎಸ್​ಸಿ ಎಸ್ಟಿ ಜನರಿಗೆ ಮೀಸಲಾತಿ ತಂದಿದ್ದು ಎಂದು ಹೇಳಿದ್ದಾರೆ.

ಧಾರವಾಡದಲ್ಲಿ ನಡೆದ ಕಾರ್ಯಕರ್ತರ ಸಂಕಲ್ಪ ಸಭೆಯಲ್ಲಿ ಮಾತನಾಡಿದ ಅವರು, ತುಪ್ಪರಿ ಹಳ್ಳ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯ ಮಾಡಿರುವುದು ಬಿಜೆಪಿ ಸರ್ಕಾರ. ಸಿದ್ದರಾಮಯ್ಯ ಅವರೇ ಅರಿವು ಮರೆವು ಇರುವುದು ನಮಗಲ್ಲ, ನಿಮಗೆ. ವಿಧಾನ ಸಭೆಯಲ್ಲಿ ಪಂಚೆ ಕಳಚಿ ಬಿದ್ದರೂ ಗೊತ್ತಾಗದ ನಿಮಗೆ ಅರಿವು ಮರೆವು ಇರುವುದು ಎಂದು ಹರಿಹಾಯ್ದರು.

ಶಾಸಕ ಅಮೃತ್ ದೇಸಾಯಿ

ಮಾಜಿ ಸಚಿವ ವಿನಯ್ ಕುಲಕರ್ಣಿ ಅವರಿಗೆ ಶಾಸಕ ದೇಸಾಯಿ ಟಾಂಗ್ ನೀಡಿದ್ದು, ತಾಯಿ ಹಾಲು ಕುಡಿದವರೇ ಬದುಕೋದಿಲ್ಲಾ, ಇನ್ನು ವಿಷ ಕುಡಿದವರು ಬದುಕ್ತಾರಾ. ಎಲ್ಲೋ ಕುಳಿತು ವಿಡಿಯೋ ಮಾಡಿ ಬಿಡೋದಲ್ಲ, ನಾ ಬರ್ತೀನಿ.. ನಾ ಬರ್ತೀನಿ ಅನ್ನೋದಲ್ಲ. ಬಾರೋ ನಿಂದ​ ದಾರಿ ಕಾಯಾಕುಂತಿವಿ ಎಂದು ನೇರವಾಗಿ ಸವಾಲು ಹಾಕಿದರು.

ಗೂಂಡಾಗಿರಿ ಬಂದ್ ಆಗಬೇಕು. ಶಾಂತವಾಗಿರುವ ಧಾರವಾಡ ಬೇಕು ಅಂದರೆ ಮತ್ತೆ ನನ್ನನ್ನು ಬಿಜೆಪಿಯ ಶಾಸಕನಾಗಿ ಗೆಲ್ಲಿಸಬೇಕು ಎಂದು ಸಂಕಲ್ಪ ಸಭೆಯಲ್ಲಿ ಶಾಸಕ ಅಮೃತ ದೇಸಾಯಿ ಮನವಿ ಮಾಡಿದರು.

ಇದನ್ನೂ ಓದಿ: ಮುಂದಿನ ಚುನಾವಣೆಯಲ್ಲಿ ಕರ್ನಾಟಕದಲ್ಲಿ 150 ಸ್ಥಾನದೊಂದಿಗೆ ಬಿಜೆಪಿ ಮತ್ತೆ ಅಧಿಕಾರಕ್ಕೆ.. ಅರುಣ್​ ಸಿಂಗ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.