ETV Bharat / state

ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಡಿಸಿಎಂ ಸ್ಥಾನ ನೀಡಬೇಕು: ಮಲ್ಲಿಕಾರ್ಜುನ ಶ್ರೀಗಳ ಆಗ್ರಹ - Dharawad murugha mutt

ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಶ್ರೀಗಳು ಡಿಸಿಎಂ ಸ್ಥಾನವನ್ನು ವಿನಯ್​ ಕುಲಕರ್ಣಿ ಅವರಿಗೆ ಕೋಡಬೇಕು ಎಂದು ಹೇಳಿದ್ದಾರೆ.

dcm-post-should-be-given-to-vinay-kulkarni-murugamath-seer
ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಡಿಸಿಎಂ ಸ್ಥಾನ ನೀಡಬೇಕು: ಮುರುಘಾಮಠ ಶ್ರೀ ಆಗ್ರಹ
author img

By

Published : May 15, 2023, 5:54 PM IST

Updated : May 15, 2023, 7:29 PM IST

ಮುರುಘಾ ಶ್ರೀ ಮಾಧ್ಯಮಗೋಷ್ಟಿ

ಧಾರವಾಡ: ಜಿಲ್ಲೆಯಿಂದ ಹೊರಗಿದ್ದುಕೊಂಡು ಐತಿಹಾಸಿಕ ಜಯ ಸಾಧಿಸಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಧಾರವಾಡ ಮುರುಘಾ ಮಠದ ಮಲ್ಲಿಕಾರ್ಜುನ ಶ್ರೀಗಳು ಒತ್ತಾಯಿಸಿದರು.

ಮುರುಘಾ ಮಠದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಸರ್ವಧರ್ಮ ನಾಯಕನಾಗಿರುವ ವಿನಯ್ ಕುಲಕರ್ಣಿ ಉತ್ತರ ಕರ್ನಾಟಕದ ಪ್ರಬಲ ಲಿಂಗಾಯತ ನಾಯಕರಾಗಿದ್ದಾರೆ. ಅವರಿಗೆ ಡಿಸಿಎಂ ಸ್ಥಾನ ಕೊಟ್ಟು ಗೌರವ ನೀಡಬೇಕು ಎಂದು ಆಗ್ರಹಿಸಿದರು. ಇದು ನಮ್ಮ ಸ್ವಂತದ ವಿಚಾರ, ಅವರು ಡಿಸಿಎಂ ಆಗಬೇಕು. ಲಿಂಗಾಯತ ನಾಯಕರಿಗೆ ನೀಡಬೇಕು. ಅದರಲ್ಲೂ ವಿನಯ್​ ಅವರಿಗೆ ನೀಡೋದು ಮುಖ್ಯ. ವಿನಯ್ ಅವರ ಬಗ್ಗೆ ವಿಶೇಷ ಒಲವು ನಮಗಿದೆ ಎಂದರು.

ಡಿಸಿಎಂ ಸ್ಥಾನಕ್ಕೆ ಸಮರ್ಥ ನಾಯಕರಾಗಿದ್ದಾರೆ. ಹಿಂದೆ ಮಂತ್ರಿ ಆಗಿ ಸಾಕಷ್ಟು ಅನುಭವ ಹೊಂದಿದ್ದಾರೆ. ಆಪಾದನೆ ಇದ್ದೇ ಇರುತ್ತೆ, ಅದರ ಬಗ್ಗೆ ಅಧಿಕೃತವಾಗಿ ಯಾವುದು ಹೊರಬಂದಿಲ್ಲ. ಅವರು ನಮ್ಮ ಮಠದ ಟ್ರಸ್ಟಿನ ಕಾರ್ಯಾಧ್ಯಕ್ಷ ಅನ್ನೋ ಸ್ವಾರ್ಥ ಇದೆ. ಹೀಗಾಗಿ ಅವರಿಗೆ ಡಿಸಿಎಂ ಸ್ಥಾನ ಕೊಡಬೇಕು ಎಂದು ಶ್ರೀಗಳು ಆಗ್ರಹಿಸಿದರು.

ಇದನ್ನೂ ಓದಿ: ಬಿಎಸ್​ವೈ ಕಣ್ಣೀರಿನಲ್ಲಿ ಬಿಜೆಪಿ ಕೊಚ್ಚಿ ಹೋಗಿದೆ: ದಿಂಗಾಲೇಶ್ವರ ಸ್ವಾಮೀಜಿ

Last Updated : May 15, 2023, 7:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.