ಧಾರವಾಡ: ಜಿಲ್ಲಾಧಿಕಾರಿ ಕಚೇರಿಯಿಂದ ಲೈಸನ್ಸ್ ಪಡೆದಿರುವ ಪರವಾನಗಿದಾರರು ಎರಡಕ್ಕಿಂತ ಹೆಚ್ಚುವರಿಯಾಗಿ ಹೊಂದಿರುವ ಆಯುಧವನ್ನು ಕೂಡಲೇ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಜಮೆ ಮಾಡುವಂತೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಆದೇಶಿಸಿದ್ದಾರೆ.
ಶಸ್ತ್ರಾಸ್ತ್ರ ತಿದ್ದುಪಡಿ ಕಾಯ್ದೆ 2019 ಕಲಂ 3ರ ಅನ್ವಯ ಇತ್ತೀಚೆಗೆ ತಿದ್ದುಪಡಿ ಮಾಡಿದ ನಿಬಂಧನೆಯಡಿ ಬಂದೂಕು ಪರವಾನಗಿ ಹೊಂದಿದವರು ಎರಡು ಆಯುಧಗಳನ್ನು ಮಾತ್ರ ಹೊಂದಲು ಅವಕಾಶ ಕಲ್ಪಿಸಲಾಗಿದೆ. ಮೂರನೇ ಬಂದೂಕಿಗೆ ಪರವಾನಗಿ ಪಡೆದ ಪರವಾನಗಿದಾರರಿದ್ದಲ್ಲಿ ಅಂತಹವರಿಗೆ ಸೂಕ್ತ ತಿಳುವಳಿಕೆ ನೀಡಿ, ಮೂರನೇ ಆಯುಧವನ್ನು ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಜಮೆ ಮಾಡಲು ನಿರ್ದೇಶನ ನೀಡಲಾಗಿದೆ.
ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿಯಿಂದ ಲೈಸನ್ಸ್ ಪಡೆದಿರುವ ಪರವಾನಗಿದಾರರು ಮೂರು ಆಯುಧಗಳನ್ನು ಹೊಂದಿದ್ದರೆ, ಮೂರನೇ ಆಯುಧವನ್ನು ಕೂಡಲೇ ಸಂಬಂಧಪಟ್ಟ ಪೊಲೀಸ್ ಠಾಣೆಗೆ 13-12-2020ರೊಳಗಾಗಿ ಜಮೆ ಮಾಡಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.