ETV Bharat / state

ಹುಬ್ಬಳ್ಳಿಯಿಂದ ಮೋಡ ಬಿತ್ತನೆ ಕಾರ್ಯಕ್ಕೆ ಚಾಲನೆ - ಉತ್ತರ ಕರ್ನಾಟಕ

ಕಳೆದ ಎರಡ್ಮೂರು ವರ್ಷಗಳಿಂದ ಮಳೆಯಿಲ್ಲದೇ ರೈತರು ಕಂಗಾಲಾಗಿದ್ದರು. ಹೀಗಾಗಿ ರಾಜ್ಯ ಸರ್ಕಾರ ಮೋಡ ಬಿತ್ತನೆ ಕಾರ್ಯರಂಭ ಮಾಡಿದ್ದು, ಮೋಡ ಬಿತ್ತನೆ ಮಾಡುವ ವಿಮಾನ (ಬೀಚ್ ಕ್ರಾಫ್ಟ್) ಜಿಲ್ಲೆಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ರಾಜ್ಯ ಸರ್ಕಾರ ವಿದೇಶದಿಂದ ತರಿಸಿದ ಮೋಡ ಬಿತ್ತನೆ ತಂತ್ರಜ್ಞಾನ ಹೊಂದಿರುವ ವಿಮಾನ ಇವತ್ತು ಬೆಳಗ್ಗೆ ಜಿಲ್ಲೆಗೆ ಬಂದಿಳಿದಿದ್ದು, ಮೋಡ ಬಿತ್ತನೆಗೆ ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್​ ಚಾಲನೆ ನೀಡಿದರು.

Hubli news,ಹುಬ್ಬಳ್ಳಿ
author img

By

Published : Aug 1, 2019, 6:59 PM IST

ಹುಬ್ಬಳ್ಳಿ: ಸತತ ಬರಗಾಲದಿಂದ ಬೇಸತ್ತ ಉತ್ತರ ಕರ್ನಾಟಕ ಭಾಗದಲ್ಲಿ ಆಶಾ ಭಾವನೆ ಮೂಡಿದೆ. ಬರದ ಕರಿ ಛಾಯೆ ಆವರಿಸಿದ್ದ ಈ ಭಾಗದಲ್ಲಿ ಮೋಡ ಬಿತ್ತನೆಗೆ ರಾಜ್ಯ ಸರ್ಕಾರ ಕೈ ಹಾಕಿದ್ದು, ಇಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

ಉತ್ತರ ಕರ್ನಾಟಕ ಭಾಗದ ರೈತರ ಮೊಗದಲ್ಲಿ ಇಂದು ಮಂದಹಾಸ ಮೂಡಿದೆ. ಕಳೆದ ಎರಡ್ಮೂರು ವರ್ಷಗಳಿಂದ ಮಳೆಯಿಲ್ಲದೇ ರೈತರು ಕಂಗಾಲಾಗಿದ್ದರು. ಹೀಗಾಗಿ ರಾಜ್ಯ ಸರ್ಕಾರ ಮೋಡ ಬಿತ್ತನೆ ಕಾರ್ಯರಂಭ ಮಾಡಿದ್ದು, ಮೋಡ ಬಿತ್ತನೆ ಮಾಡುವ ವಿಮಾನ (ಬೀಚ್ ಕ್ರಾಫ್ಟ್) ಜಿಲ್ಲೆಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ರಾಜ್ಯ ಸರ್ಕಾರ ವಿದೇಶದಿಂದ ತರಿಸಿದ ಮೋಡ ಬಿತ್ತನೆ ತಂತ್ರಜ್ಞಾನ ಹೊಂದಿರುವ ವಿಮಾನ ಇವತ್ತು ಬೆಳಗ್ಗೆ ಜಿಲ್ಲೆಗೆ ಬಂದಿಳಿದಿದ್ದು, ಮೋಡ ಬಿತ್ತನೆಗೆ ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್​ ಚಾಲನೆ ನೀಡಿದರು.

ಮೋಡ ಬಿತ್ತನೆಗೆ ಚಾಲನೆ

ಬಳಿಕ ಮಾತನಾಡಿದ ಅವರು, ಗದಗದಲ್ಲಿರುವ ರಡಾರ್​ ಕೇಂದ್ರ ನೀಡುವ ಸಂದೇಶದ ಆಧಾರದ ಮೇಲೆ 200 ಕಿ.ಮೀ. ವ್ಯಾಪ್ತಿಯಲ್ಲಿನ ಮೋಡಗಳಲ್ಲಿ ನೀರಿನ ಸಾಂದ್ರತೆ, ತೇವಾಂಶ ಗುರುತಿಸಿ ಅವುಗಳ ಬಗ್ಗೆ ಚಿತ್ರ ಸಹಿತ ಮಾಹಿತಿಯನ್ನು ರಡಾರ್ ನೀಡಲಿದೆ. ವಿಮಾನದ ಪೈಲೆಟ್ ಆ ಮಾಹಿತಿ ಆಧರಿಸಿ ಮೋಡ ಬಿತ್ತನೆ ಮಾಡಲಿದ್ದಾರೆ. ಉತ್ತರ ಕರ್ನಾಟಕದ ಹುಬ್ಬಳ್ಳಿ, ಬಾಗಲಕೋಟೆ, ಗದಗದಲ್ಲಿ ಮೋಡಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ನಾಳೆಯಿಂದ ವಿಮಾನ ಹಾರಾಟ ನಡೆಸಲಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯ ಏರ್‌ಪೋರ್ಟ್‌ನಿಂದ ಮುಂದಿನ 90 ದಿನಗಳ ಕಾಲ ಮೋಡ ಬಿತ್ತನೆ ಆಗಲಿದೆ. ಕಳೆದ ತಿಂಗಳ 25ರಿಂದ ಮೋಡ ಬಿತ್ತನೆ ಆರಂಭಗೊಳ್ಳಬೇಕಿತ್ತು. ಆದರೆ ಸರ್ಕಾರದಿಂದ ಅಧಿಕೃತ ಆದೇಶ ತಡವಾಗಿ ಕೈ ಸೇರಿದ ಕಾರಣ ಬಿತ್ತನೆ ಪ್ರಕ್ರಿಯೆ ಕೊಂಚ ತಡವಾಗಿದೆ. ಈ ನಿಟ್ಟಿನಲ್ಲಿ ಒಂದು ವಿಮಾನ ಈಗಾಗಲೇ ಬಂದಿಳಿದಿದ್ದು, ಮತ್ತೊಂದು ವಿಮಾನ ಶೀಘ್ರದಲ್ಲೇ ಬರಲಿದೆ. ರಾಜ್ಯದಲ್ಲಿ ಮೂರು ಕಡೆ ರಡಾರ್ ಸಂಪರ್ಕ ಕೇಂದ್ರಗಳನ್ನು ಅಳವಡಿಸಲಾಗಿದ್ದು, ಬೆಂಗಳೂರು, ಗದಗ ಹಾಗೂ ಯಾದಗಿರಿಯ ಶೋರಾಪುರದಲ್ಲಿ ರಡಾರ್​ ಅಳವಡಿಸಲಾಗಿದೆ. ಅವುಗಳ ಸೂಚನೆಯ ಮೇರೆಗೆ ಯಾವ ಭಾಗದಲ್ಲಿ ಮೋಡ ಕಾಣಿಸುತ್ತೋ ಅಲ್ಲಿ ಮೋಡ ಬಿತ್ತನೆ ಕಾರ್ಯ ನಡೆಸಲಾಗುತ್ತಿದೆ ಎಂದರು.

Intro:ಹುಬ್ಬಳ್ಳಿ-02

Anchor...
ಸತತ ಬರಗಾಲದಿಂದ ಬೆಸತ್ತ ಉತ್ತರ ಕರ್ನಾಡಕ ಭಾಗದಲ್ಲಿ ಆಶಾ ಭಾವನೆ ಮೂಡಿದೆ. ಬರದ ಕರಿ ಛಾಯೆ ಆವರಿಸಿದ್ದ ಉತ್ತರ ಕರ್ನಾಟಕ ಭಾಗದಲ್ಲಿ ಮೋಡ ಬಿತ್ತನೆಗೆ ರಾಜ್ಯ ಸರ್ಕಾರ ಕೈ ಹಾಕಿದ್ದು, ಇಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

Voice over.
ಉತ್ತರ ಕರ್ನಾಟಕ ಭಾಗದ ರೈತರ ಮೊಗದಲ್ಲಿ ಇಂದು ಮಂದಾಸ ಮೂಡಿದೆ. ಕಳೆದ ಎರಡ್ಮೂರು ವರ್ಷಗಳಿಂದ ರೈತ ಕಂಗಾಲಾಗಿದ್ದ. ಹೀಗಾಗಿ ರಾಜ್ಯ ಸರ್ಕಾರ ಮೋಡ ಬಿತ್ತನೆ ಕಾರ್ಯರಂಭ ಮಾಡಿದೆ.
ಮೋಡ ಬಿತ್ತನೆ ಮಾಡುವ ವಿಮಾನ (ಬೀಚ್ ಕ್ರಾಫ್ಟ್) ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ರಾಜ್ಯ ಸರ್ಕಾರ ವಿದೇಶದಿಂದ ತರಿಸಿದ ಮೋಡ ಬಿತ್ತನೆ ತಂತ್ರಜ್ಞಾನ ಹೊಂದಿರುವ ವಿಮಾನ ಇವತ್ತು ಬೆಳಗ್ಗೆ ಹುಬ್ಬಳ್ಳಿಗೆ ಬಂದಿಳಿದಿತ್ತು. ಇವತ್ತು ಮಧ್ಯಾಹ್ನ ವಿಶೇಷ ತಂತ್ರಜ್ಞಾನ ಒಳಗೊಂಡ ಮೋಡ ಬಿತ್ತನೆಯ ವಿಮಾನಕ್ಕೆ ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಗದಗದಲ್ಲಿರುವ ರಾಡಾರ ಕೇಂದ್ರ ನೀಡುವ ಸಂದೇಶದ ಆಧಾರದ ಮೇಲೆ 200 ಕಿ.ಮೀ ವ್ಯಾಪ್ತಿಯಲ್ಲಿನ ಮೋಡಗಳಲ್ಲಿ ನೀರಿನ ಸಾಂದ್ರತೆ , ತೇವಾಂಶ ಗಳನ್ನು ಗುರುತಿಸಿ ಅವುಗಳ ಬಗ್ಗೆ ಚಿತ್ರ ಸಹಿತ ಮಾಹಿತಿಯನ್ನು ರಾಡಾರ್ ನೀಡಲಿದ್ದು, ವಿಮಾನ ಪೈಲಟ್ ಆ ಮಾಹಿ ಆಧರಿಸಿ ಮೋಡ ಬಿತ್ತನೆ ಮಾಡಲಿದ್ದಾರೆ. ಉತ್ತರ ಕರ್ನಾಟಕದ ಹುಬ್ಬಳ್ಳಿ, ಬಾಗಲಕೊಟ, ಗದುಗಿನಲ್ಲಿ ಮೋಡಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ನಾಳೆಯಿಂದ ವಿಮಾನ ಹಾರಾಟ ನಡೆಸಲಿದೆ ಎಂದು ಮಾಹಿತಿ ನೀಡಿದರು.

ಬೈಟ್ 1: ದೀಪಾ ಚೋಳನ್, ಧಾರವಾಡ ಜಿಲ್ಲಾಧಿಕಾರಿ

Voice over
ಹುಬ್ಬಳ್ಳಿ ಏರ್‌ಪೋರ್ಟ್‌ನಿಂದ ಮುಂದಿನ 90 ದಿನಗಳ ಕಾಲ ಮೋಡ ಬಿತ್ತನೆಗೆ ಆಗಲಿದೆ. ಕಳೆದ ತಿಂಗಳ 25 ರಿಂದ ಮೋಡ ಬಿತ್ತನೆ ಆರಂಭಗೊಳ್ಳಬೇಕಿತ್ತು. ಆದ್ರೆ, ಸರ್ಕಾರದಿಂದ ಅಧಿಕೃತ ಆದೇಶ ತಡವಾಗಿ ಕೈ ಸೇರಿದ ಕಾರಣ ಬಿತ್ತನೆ ಪ್ರಕ್ರಿಯೆ ಕೊಂಚ ತಡವಾಗಿದೆ. ಈ ನಿಟ್ಟಿನಲ್ಲಿ ಒಂದು ವಿಮಾನ ಗಾಗಲೇ ಬಂದಿಳಿದಿದ್ದು ಮತ್ತೊಂದು ವಿಮಾನ ಶೀಘ್ರದಲ್ಲೇ ಬರಲಿದೆ. ರಾಜ್ಯದಲ್ಲಿ ಮೂರು ಕಡೆ ರೆಡಾರ್ ಸಂಪರ್ಕ ಕೇಂದ್ರಗಳನ್ನು ಅಳವಡಿಸಲಾಗಿದ್ದು, ಬೆಂಗಳೂರು, ಗದಗ ಹಾಗೂ ಯಾದಗಿರಿಯ ಶೋರಾಪುರದಲ್ಲಿ ರೆಡಾರ್ಸ್ ಗಳನ್ನು ಅಳವಡಿಸಲಾಗಿದೆ. ಅವುಗಳ ಸೂಚನೆಯ ಮೇರೆಗೆ ಯಾವ ಭಾಗದಲ್ಲಿ ಮೋಡ ಕಾಣಿಸುತ್ತೋ ಅಲ್ಲಿ ಇಂದು ಬಿತ್ತನೆ ಕಾರ್ಯ ನಡೆಸಲಾಗುತ್ತಿದೆ. ಈ ಹಿಂದೆ ಕರ್ನಾಟಕ ಸೇರಿದಂತೆ ಬೇರೆ ಬೇರೆ ದೇಶಗಳಲ್ಲಿ ಮೋಡ‌ ಬಿತ್ತನೆ ಮಾಡಲಾಗಿದ್ದು, ಇದೊಂದು ವೈಜ್ಞಾನಿಕ ಪ್ರಕ್ರಿಯೇ. ಇದರಿಂದ ಸಂಪೂರ್ಣವಾಗಿ ಮಳೆಯಾಗಲಿದೆ ಎಂದು ಹೇಳಲು ಆಗುವದಿಲ್ಲ. ಕೆಲ ಕಡೆ ಇದು ಯಶಸ್ವಿಯಾಗಿದ್ದು, ಉತ್ತಮ ಮಳೆಯಾಗಿದೆ ಎಂದು ವಿಮಾನದ ಫೈಲಟ್ ಅಭಿಪ್ರಾಯ ಹಂಚಿಕೊಂಡರು.

ಬೈಟ್ 2: ಗೆಜ್ ಬೆನ್ , ವಿಮಾನದ ಫೈಲಟ್

Voice over...
ಅದೇನೇ ಆಗ್ಲಿ ಬರದಿಂದ ಕಂಗೆಟ್ಟಿದ್ದ ರೈತನ ಮೋಗದಲಿ ಮೋಡ ಬಿತ್ತನೆಯಿಂದ ಮಂದಹಾಸ ಮೂಡಿದೆ. ಆದ್ರೆ, ಮೋಡಬಿತ್ತನೆಗೆ ಪ್ರಕೃತಿ ಎಷ್ಟರ ಮಟ್ಟಿಗೆ ಸಹಕರಿಸುತ್ತೆ ಅನ್ನೋದು ಯಕ್ಷಪ್ರಶ್ನೆಯಾಗಿದೆ.
_______________________
ಹೆಚ್ ಬಿ ಗಡ್ಡದ
ಈ ಟಿವಿ ಹುಬ್ಬಳ್ಳಿBody:H B GaddadConclusion:Etv hubli
ETV Bharat Logo

Copyright © 2025 Ushodaya Enterprises Pvt. Ltd., All Rights Reserved.