ಧಾರವಾಡ : ಧಾರವಾಡ ಕರ್ನಾಟಕ ವಿಶ್ವ ವಿದ್ಯಾಲಯದ ಕ್ಯಾಂಪಸ್‌ನಲ್ಲಿ ಆನೆ ಪ್ರತ್ಯಕ್ಷ ಹಿನ್ನೆಲೆ ಸ್ಥಳಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶ್ಪಾಲ್ ಕ್ಷೀರಸಾಗರ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕವಿವಿ ಹಿಂಬದಿಯ ಅರಣ್ಯದಲ್ಲಿ ಆನೆ ನಾಪತ್ತೆಯಾಗಿದೆ. ಕಾರ್ಯಾಚರಣೆಯ ನೇತೃತ್ವವಹಿಸಿರುವ ಆರ್‌ಎಫ್‌ಒ ಕ್ಷೀರಸಾಗರ ಅವರು, ಆನೆ ಪತ್ತೆ ಕಾರ್ಯಾಚರಣೆ ನಡೆಯುತ್ತಿದೆ. ಆಹಾರ, ನೀರು ಅರಸಿ ಆನೆ ದಾರಿ ತಪ್ಪಿ ಬಂದಿದೆ. ಇಂದು ರಾತ್ರಿ ಕಾರ್ಯಾಚರಣೆ ನಡೆಯಲಿದೆ ಎಂದು ಹೇಳಿದ್ದಾರೆ.
ಆನೆಯನ್ನು ಮರಳಿ ಅರಣ್ಯಕ್ಕೆ ಕಳುಹಿಸುವ ಪ್ರಯತ್ನ ಮಾಡುತ್ತೇವೆ. ಕಲಘಟಗಿ, ಉತ್ತರ ಕನ್ನಡ ಭಾಗದಲ್ಲಿ ಈ ಆನೆಗಳ ಓಡಾಟದ ಮಾರ್ಗವಿದೆ. ಆ ಭಾಗದಲ್ಲಿ ಬೆಳೆಗಳು ಈಗ ಬದಲಾಗಿದೆ. ಹೀಗಾಗಿ, ಆಹಾರ, ನೀರು ಅರಸಿ ಅದು ಬಂದಿರಬಹುದು ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ಆನೆ ಪ್ರತ್ಯಕ್ಷ
ರಾತ್ರಿ ವೇಳೆ ಡ್ರೋಣ್ ಕ್ಯಾಮೆರಾ ಮೂಲಕ ಪತ್ತೆ ಮಾಡುತ್ತೇವೆ. ಆನೆಯನ್ನು ಅರಣ್ಯದತ್ತ ಕಳುಹಿಸುವ ಕಾರ್ಯಾಚರಣೆ ರಾತ್ರಿ ಮಾಡುತ್ತೇವೆ. ರಾತ್ರಿ ಇಡೀ ಕಾರ್ಯಾಚರಣೆ ನಡೆಯಲಿದೆ. ಹೀಗಾಗಿ, ಕವಿವಿ ಕ್ಯಾಂಪಸ್‌ನಲ್ಲಿ ರಾತ್ರಿ ಯಾರೂ ಹೊರಗೆ ಬರಬಾರದು.
ಯಾರನ್ನೂ ಸಂಜೆ ಬಳಿಕ ಹೊರಗೆ ಬಿಡದಂತೆ ಕವಿವಿಗೆ ತಿಳಿಸಿದ್ದೇವೆ. ಕ್ವಾರ್ಟಸ್ ನಿವಾಸಿ ಮತ್ತು ಹಾಸ್ಟೆಲ್ ವಿದ್ಯಾರ್ಥಿಗಳು ಹೊರಗೆ ಬರಬಾರದು ಎಂದು ಮನವಿ ಮಾಡಿದ್ದಾರೆ.