ETV Bharat / state

ಬಿಜೆಪಿ ಜನರಿಗೆ ಚಾಕೊಲೇಟ್​​ ಕೊಡುವ ಕೆಲಸ ಮಾಡುತ್ತಿದೆ: ಡಿಕೆಶಿ - Randeep Singh Surjewala

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​, ಮಾಜಿ ಸಚಿವ ಎಚ್.ಕೆ.ಪಾಟೀಲ್ ಮತ್ತು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೆವಾಲಾ ಹುಬ್ಬಳ್ಳಿಯಲ್ಲಿ ಮಾತನಾಡಿ, ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಬಿಜೆಪಿ ಸರ್ಕಾರದ ವಿರುದ್ಧ ಕಿಡಿ
ಬಿಜೆಪಿ ಸರ್ಕಾರದ ವಿರುದ್ಧ ಕಿಡಿ
author img

By

Published : Dec 30, 2022, 5:47 PM IST

Updated : Dec 30, 2022, 5:52 PM IST

ಬಿಜೆಪಿ ವಿರುದ್ಧ ನಾಯಕರ ಟೀಕಾ ಸಮರ

ಹುಬ್ಬಳ್ಳಿ: ಅಮಿತ್ ಶಾ ಮಂಡ್ಯಕ್ಕೆ ಬಂದಿದ್ದಾರೆ. ಡಬಲ್ ಎಂಜಿನ್ ಸರ್ಕಾರ ರೈತರಿಗೆ ಡಬಲ್ ಬೆಲೆ ಕೊಡುತ್ತದೆ ಎನ್ನುವುದನ್ನು ಬಹಿರಂಗವಾಗಿ ಹೇಳಬೇಕು. ಬಿಜೆಪಿಯವರು ಜನರಿಗೆ ಚಾಕೊಲೇಟ್ ಕೊಡುವ ಕೆಲಸ ಮಾಡುತ್ತಿದ್ದಾರೆ. ಕೇವಲ ಕಣ್ಣೊರೆಸುವುದರಿಂದ ಉಪಯೋಗವಿಲ್ಲ. ಜನರ ಸಮಸ್ಯೆ ಬಗೆಹರಿಸುವ ಕಾರ್ಯ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ನೀರಿನ ಬೆಲೆ 23, 24 ರೂ ಇದೆ. ಹಾಲಿನ ಬೆಲೆ 27, 28 ರೂ ಇದೆ. ಅವರಿಗೆ ಏನ್ ಬೆಲೆ ಕೊಡುತ್ತಾರೆ ಎನ್ನುವುದನ್ನು ಹೇಳಬೇಕು. ಅವರು ಸಮಾವೇಶ ಮಾಡಲಿ, ನಮ್ಮದೇನೂ ಅಭ್ಯಂತರ ಇಲ್ಲ. ಹಿಂದೊಮ್ಮೆ ಪೂಜೆ ಮಾಡಿದ್ದರು. ಇವಾಗ ಮತ್ತೆ ಮಾಡ್ತಿದ್ದಾರೆ ಎಂದರು.

ನಮ್ಮ ಸಮಾವೇಶ ನಿಲ್ಲಿಸುವುದಿಲ್ಲ: ಯಾವುದೇ ಕಾರಣಕ್ಕೂ 2 ನೇ ತಾರೀಖಿನ ಸಮಾವೇಶವನ್ನು ನಾವು ನಿಲ್ಲಿಸುವುದಿಲ್ಲ. ಇದೀಗ ಕೃಷ್ಣ ವಿಚಾರವಾಗಿ ಸುರ್ಜೇವಾಲಾ, ಸಿದ್ದರಾಮಯ್ಯ, ನಾನು ಹೋಗ್ತಿದ್ದೀವಿ. ಮುಂದೆ ನಮ್ಮ ಸರ್ಕಾರ ಬಂದೇ ಬರುತ್ತದೆ. ನಾವು ಸಮಸ್ಯೆ ಬಗೆಹರಿಸುತ್ತೇವೆ ಎಂದರು.

ಮೀಸಲಾತಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಸರ್ವರಿಗೂ ಸಮಬಾಳು, ಸಮಪಾಲು. ಜನಸಂಖ್ಯೆ ಆಧಾರದ ಮೇಲೆ ಎಲ್ಲರೂ ತಮ್ಮ ಹಕ್ಕು ಕೇಳ್ತಾರೆ. ಮೀಸಲಾತಿ ಅಂತಾ ಹೇಳಿ ಬಿಜೆಪಿಯವರು ಚಾಕೊಲೇಟ್ ಕೊಡುವ ಕೆಲಸ ಮಾಡುತ್ತಿದ್ದಾರೆ. ಇಂದು ಸಂಜೆ ಸಿದ್ದರಾಮಯ್ಯ, ಮುಖಂಡರ ಜೊತೆ ಚರ್ಚಿಸಿ ನಮ್ಮ ಪಕ್ಷದ ಅಚಲ ನಿರ್ಧಾರ ಪ್ರಕಟಿಸುತ್ತೇವೆ. ಜಾರಿಯಾಗದ ಮೀಸಲಾತಿ ತಂದು ಕರ್ನಾಟಕವನ್ನು ಲಿಟಿಗೇಷನ್ ರಾಜ್ಯ ಮಾಡುತ್ತಿದ್ದಾರೆ ಎಂದು ಇದೇ ವೇಳೆ ವಾಗ್ದಾಳಿ‌‌ ನಡೆಸಿದರು.

ಸಂಘರ್ಷ, ಸವಾಲಿನ ಸಮಯ ಎದುರಾಗಿದೆ: ಈ ಭಾಗದ ಜನರಿಗೆ ಸಂಘರ್ಷ ಮತ್ತು ಸವಾಲಿನ ಸಮಯ ಎದುರಾಗಿದೆ. ಕೃಷ್ಣಾ ನದಿ ವಿಚಾರದಲ್ಲಿ ಬಿಜೆಪಿಯವರು ಜನರಿಗೆ ದ್ರೋಹ ಮಾಡುತ್ತಾ ಬಂದಿದ್ದಾರೆ. ಮೂರು ತಿಂಗಳ ನಂತರ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೆವಾಲಾ ಹೇಳಿದರು.

ವಿಮಾನ ನಿಲ್ದಾಣದಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಕೃಷ್ಣಾ ಮೂರನೇ ಹಂತದ ಕಾಮಗಾರಿಗೆ ಪ್ರತಿ ವರ್ಷ 40 ಸಾವಿರ ಕೋಟಿ ರೂಪಾಯಿ ಕೊಡುತ್ತೇವೆ. ಇವತ್ತು ರಾಜ್ಯಕ್ಕೆ ಅಮಿತ್ ಶಾ ಬಂದಿದ್ದಾರೆ. ಅವರು ಕೃಷ್ಣಾ ಮತ್ತು ಮಹದಾಯಿ ನೀರಿನ ಬಗ್ಗೆ ಮಾತನಾಡಲ್ಲ. ಯಾಕೆ ಅಂದರೆ ಅವರ ಮನಸ್ಸಲ್ಲಿ ಕಳ್ಳನಿದ್ದಾನೆ ಎಂದರು.

ಜನರ ದಿಕ್ಕು ತಪ್ಪಿಸಿದ್ದಾರೆ- ಎಚ್.ಕೆ.ಪಾಟೀಲ್​: ಮಹತ್ವದ ಕಳಸಾ ಬಂಡೂರಿ ಯೋಜನೆಯಲ್ಲಿ ಯಾವುದೇ ರೀತಿಯಲ್ಲಿ ಅಧಿಕೃತವಲ್ಲದ ದಾಖಲೆಯನ್ನು ತೋರಿಸಿ ಜನರ ದಿಕ್ಕು ತಪ್ಪಿಸುವ ಹುನ್ನಾರವಿದೆ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ ಆರೋಪಿಸಿದರು.

ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಿಂದ ಹೋರಾಟದ ಸಿದ್ದತೆ ಆರಂಭವಾದ ಮೇಲೆ ಸರ್ಕಾರ ಎಚ್ಚೆತ್ತುಕೊಂಡಿದೆ. ಮುಗ್ದ ರೈತರಿಗೆ ಸುಳ್ಳು ಹೇಳುವುದು, ಮೋಸ ಮಾಡುವುದು ಬಿಜೆಪಿಯ ವರಸೆಯಾಗಿದೆ. ಚುನಾವಣೆ ಬಂದಾಗ ಬಿಜೆಪಿಯವರು ಸುಳ್ಳು ಹೇಳುತ್ತಾರೆ ಎಂದು ಟೀಕಿಸಿದರು.

ಇದನ್ನೂ ಓದಿ: ಮಹದಾಯಿ ಯೋಜನೆ ಡಿಪಿಆರ್​ಗೆ ಕೇಂದ್ರದ ಅನುಮತಿ: ಮೋದಿ, ಶಾಗೆ ಅಭಿನಂದನೆ ಸಲ್ಲಿಸಿದ ಸಿಎಂ ಬೊಮ್ಮಾಯಿ

Last Updated : Dec 30, 2022, 5:52 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.